Home ದಕ್ಷಿಣ ಕನ್ನಡ ಕಡಬ: ಲೈಟ್ ಇಲ್ಲದೇ ಕತ್ತಲೆಯಲ್ಲೇ ಓಡಾಟ ನಡೆಸಿದ ಸರ್ಕಾರಿ ಸಾರಿಗೆ!! ಚಾಲಕನ ದುಸ್ಸಾಹಸಕ್ಕೆ ಪ್ರಾಣ ಕೈಯಲ್ಲಿಟ್ಟು...

ಕಡಬ: ಲೈಟ್ ಇಲ್ಲದೇ ಕತ್ತಲೆಯಲ್ಲೇ ಓಡಾಟ ನಡೆಸಿದ ಸರ್ಕಾರಿ ಸಾರಿಗೆ!! ಚಾಲಕನ ದುಸ್ಸಾಹಸಕ್ಕೆ ಪ್ರಾಣ ಕೈಯಲ್ಲಿಟ್ಟು ಕೂತ ಪ್ರಯಾಣಿಕರು

Hindu neighbor gifts plot of land

Hindu neighbour gifts land to Muslim journalist

ಹೆಡ್ ಲೈಟ್ ಇಲ್ಲದೆ ಸುಮಾರು 10 ಕಿ.ಮೀ. ಗೂ ಅಧಿಕ ದೂರದವರೆಗೆ ಬಸ್ ಚಲಾಯಿಸಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನ ಚಾಲಕನೋರ್ವ ಪ್ರಯಾಣಿಕರ ಜೀವದ ಜೊತ್ತೆ ಚೆಲ್ಲಾಟವಾಡಿದ ಘಟನೆ ಸೋಮವಾರ ರಾತ್ರಿ ಆಲಂಕಾರಿನಲ್ಲಿ ನಡೆದಿದೆ.

ಉಪ್ಪಿನಂಗಡಿಯಿಂದ ರಾತ್ರಿ 7.15ಕ್ಕೆ ಕಡಬ ಕಡೆಗೆ ಹೊರಟ ಕಾರವಾರ – ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ ನಲ್ಲಿ ಮುಂಭಾಗದ ನಾಲ್ಕು ಲೈಟ್ ಗಳು ಕೆಟ್ಟುಹೋಗಿದ್ದು, ಬಸ್ಸಿನ ಚಾಲಕ ತನ್ನ ಬೇಜವಾಬ್ದಾರಿಯಿಂದಾಗಿ ಕತ್ತಲೆಯಲ್ಲೇ ಬಸ್ಸನ್ನು ಚಲಾಯಿಸಿ ದುಸ್ಸಾಹಸ ಮೆರೆದಿದ್ದಾರೆ. ಬಸ್ಸಿನಲ್ಲಿ ಸುಮಾರು ಐವತ್ತರಷ್ಟು ಪ್ರಯಾಣಿಕರಿದ್ದು, ಅದರ ಪರಿವೇ ಇಲ್ಲದೆ ಚಾಲಕ ಉಪ್ಪಿನಂಗಡಿಯಿಂದ ಆಲಂಕಾರುವರೆಗೆ ಬಸ್ಸನ್ನು ಚಲಾಯಿಸಿರುವುದಾಗಿ ಪ್ರಯಾಣಿಕರು ದೂರಿದ್ದಾರೆ. ಈ ನಡುವೆ ಬಸ್ಸಿನ ಒಳಗಿನಿಂದ ಪ್ರಯಾಣಿಕರೋರ್ವರು ವೀಡಿಯೋ ಮಾಡುವುದನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕ ಆಲಂಕಾರು ತಲುಪುತ್ತಿದ್ದಂತೆ ಒಂದು ಲೈಟನ್ನು ಸರಿಪಡಿಸಿ ಬಸ್ಸನ್ನು ಚಲಾಯಿಸಿದ್ದಾರೆ. ಒಟ್ಟಿನಲ್ಲಿ ಚಾಲಕನ ಹುಚ್ಚಾಟಕ್ಕೆ ಬಸ್ಸಿನಲ್ಲಿನ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಿರುವುದು ಮಾತ್ರ ಸುಳ್ಳಲ್ಲ.