Home ದಕ್ಷಿಣ ಕನ್ನಡ ಕಡಬದಲ್ಲಿ ಕಾರ್ಯಚರಿಸುತ್ತಿದೆ ನೂರು ರೂಪಾಯಿ ಜೆರಾಕ್ಸ್ ನೋಟುಗಳು.. ಗ್ರಾಹಕರೇ ಎಚ್ಚರ..!

ಕಡಬದಲ್ಲಿ ಕಾರ್ಯಚರಿಸುತ್ತಿದೆ ನೂರು ರೂಪಾಯಿ ಜೆರಾಕ್ಸ್ ನೋಟುಗಳು.. ಗ್ರಾಹಕರೇ ಎಚ್ಚರ..!

Hindu neighbor gifts plot of land

Hindu neighbour gifts land to Muslim journalist

ಕಡಬ: ಕಡಬದ ಕೋಡಿಂಬಾಳದ ಚಿಕ್ಕನ್ ಸೆಂಟರ್ ಒಂದರಿಂದ ಜೆರಾಕ್ಸ್ 100 ನೋಟ್ ಒಂದು ಚಿಕ್ಕನ್ ಖರೀದಿಸಲು ಬಂದ ಗ್ರಾಹಕರಿಗೆ ಸಿಕ್ಕಿದ್ದು, ಗ್ರಾಹಕರು ವರ್ತಕರು ಎಚ್ಚರ ವಹಿಸಬೇಕಿದೆ.

ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕ್ಕನ್ ಸೆಂಟರಿನಿಂದ ಅಸಲಿ ನೋಟನ್ನು ಹೋಲುವ ನೂರು ರೂಪಾಯಿಯ ಜೆರಾಕ್ಸ್ ನೋಟ್ ಒಂದು ಚಿಕ್ಕನ್ ಖರೀದಿಗೆ ಬಂದ ಗ್ರಾಹಕಾರೋರ್ವರಿಗೆ ದೊರೆತಿದೆ. ಅವರು ಅದನ್ನು ಆಟೋ ಚಾಲಕ ರಾಜೇಶ್ ಎಂಬವರಿಗೆ ನೀಡಿದ್ದಾರೆ. ಈ ನೋಟು ಗಮನಿಸಿದ ಆಟೋ ಚಾಲಕ ರಾಜೇಶ್ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಬ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಚಿಕ್ಕನ್ ಅಂಗಡಿಗೆ ಬಂದು ಪರಿಶೀಲನೆ ನಡೆಸಿದರು. ಚಿಕ್ಕನ್ ಖರೀದಿಗೆ ಬಂದ ಯಾರೋ ತನಗೆ ಈ ನೋಟ್ ನೀಡಿದ್ದಾಗಿಯೂ ಗಮನಿಸದೇ ಇನ್ನೊರ್ವರಿಗೆ ಚಲಾವಣೆ ಮಾಡಿದ್ದಾಗಿಯೂ ಚಿಕ್ಕನ್ ಅಂಗಡಿ ಮಾಲಕ ಅಶ್ರಫ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ನೋಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.