Home ದಕ್ಷಿಣ ಕನ್ನಡ ಕಾರ್ಕಳ ಉತ್ಸವದ ವೇದಿಕೆಯಲ್ಲಿ ನಡೆದ ಯಕ್ಷಗಾನದಲ್ಲಿ ಹಿಜಾಬ್ ಕೇಸರಿ ವಿವಾದದ ಬಗ್ಗೆ ಉಲ್ಲೇಖ!! ಸಾಮಾಜಿಕ ಜಾಲತಾಣದಲ್ಲಿ...

ಕಾರ್ಕಳ ಉತ್ಸವದ ವೇದಿಕೆಯಲ್ಲಿ ನಡೆದ ಯಕ್ಷಗಾನದಲ್ಲಿ ಹಿಜಾಬ್ ಕೇಸರಿ ವಿವಾದದ ಬಗ್ಗೆ ಉಲ್ಲೇಖ!! ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್-ಪಾತ್ರಧಾರಿಗಳ ನಡೆಗೆ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಾರ್ಕಳ ಉತ್ಸವದ ವೇದಿಕೆಯಲ್ಲಿ ನಡೆದ ತುಳುನಾಡಿದ ಗಂಡು ಕಲೆಯಾದ ಯಕ್ಷಗಾನದಲ್ಲಿ ಒಂದು ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

ಒಂದು ತಿಂಗಳಿನಿಂದ ರಾಜ್ಯದಲ್ಲೇ ಸುದ್ದಿ ಮಾಡುತ್ತಿರುವ ಹಿಜಾಬ್ ಹಾಗೂ ಕೇಸರಿ ವಿವಾದವನ್ನು ಯಕ್ಷಗಾನದಲ್ಲಿ ಮಾತನಾಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ.

ಹಿಜಾಬ್ ಹಾಗೂ ಕೇಸರಿಯ ವಿವಾದಕ್ಕೆ ತೀರ್ಪು ನೀಡಿದ್ದ ಹೈಕೋರ್ಟ್ ಆದೇಶದ ಬಗ್ಗೆ ಸಂಭಾಷಣೆಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದ್ದು, ನೀವು ಕೇಸರಿ ಶಾಲು ಹಾಕಿ ಬಂದ ಕಾರಣ, ಮೇಲೆ ನಿಮ್ಮವರೇ ಇರುವ ಕಾರಣ ತೀರ್ಪು ಕೂಡಾ ನಿಮ್ಮ ಕಡೆಗೇ ಬಂದಿದೆ, ಇಲ್ಲದಿದ್ದರೆ ಈ ವಿವಾದವು ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ ಎಂದು ಹೇಳಲಾಗಿದೆ.

ಸದ್ಯ ಈ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್ ಗೆ ಕಾರಣವಾಗಿದ್ದು, ಧರ್ಮ ಬೇಧವಿಲ್ಲದ ಗಂಡು ಕಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಪಾತ್ರಧಾರಿಗಳು ಒಂದು ಸಮುದಾಯವನ್ನು ಟೀಕಿಸಿ ಅರ್ಥೈಸುತ್ತಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.