Home ದಕ್ಷಿಣ ಕನ್ನಡ Kadaba: ಉದ್ಯಮಿ ಕುರಿಯನ್ ನಿಂದ ಲೈಂಗಿಕ ಕಿರುಕುಳ: ಕೇಸು ದಾಖಲು;

Kadaba: ಉದ್ಯಮಿ ಕುರಿಯನ್ ನಿಂದ ಲೈಂಗಿಕ ಕಿರುಕುಳ: ಕೇಸು ದಾಖಲು;

Hindu neighbor gifts plot of land

Hindu neighbour gifts land to Muslim journalist

Kadaba: ಕಡಬ (Kadaba) ತಾಲೂಕಿನ ಶಿಬಾಜೆ ಗ್ರಾಮದ ಆಕೋಟಿಪಾಲ್ ನಿವಾಸಿ ಉದ್ಯಮಿ ಎ.ಸಿ ಕುರಿಯನ್ ಎಂಬವರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಮಹಿಳೆಯೂ ಪತಿ ವಿಶ್ವನಾಥ ಅವರೊಂದಿಗೆ ನಾನು ನಾಲ್ಕು ವರ್ಷದ ಹಿಂದೆ ಅಕೊಟೇಪಾಲ್ ಎಂಬಲ್ಲಿ ಎ.ಸಿ.ಕುರಿಯನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಕುರಿಯನ್ ಅವರ ರೂಮಿಗೆ ಚಹಾ ತಿಂಡಿ ತೆಗೆದುಕೊಂಡು ಹೋಗುತ್ತಿದ್ದು, ಒಂದು ದಿನ ಕುರಿಯನ್ ಅವರು ಸಂತ್ರಸ್ತೆ ಮಹಿಳೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘಟನೆಯಿಂದ ನೊಂದು ತಾನು ಕೆಲಸ ಬಿಟ್ಟಿದ್ದಾರೆ. ಆದರೆ ಈ ವೇಳೆ ಕುರಿಯನ್ ಕೋಪಗೊಂಡು ನಿನ್ನನ್ನು ಈ ಭೂಮಿಯಲ್ಲಿ ಇರಲಿಕ್ಕೆ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ದ್ವೇಷ ದಿಂದ ದೂರುದಾರೆಯ ತಂದೆ ತಾಯಿ ವಾಸ್ತವ್ಯದ ಮನೆಯನ್ನು ಆಕೆಯ ಮೇಲಿನ ಮೇಲಿನ ದ್ವೇಷದಿಂದ, ಎ.ಸಿ ಕುರಿಯನ್ ಒತ್ತಾಯದಿಂದ ಧ್ವಂಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಹೌದು, ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ವೆ ನಂ.123ರ ಸರಕಾರಿ ಜಾಗದಲ್ಲಿ ಸಂತ್ರಸ್ತೆಯ ತಂದೆ, ತಾಯಿ ವಾಸ್ತವ್ಯವಿದ್ದು ಆ ಮನೆಯನ್ನು ನ.13ರಂದು ಕಡಬ ತಹಶೀಲ್ದಾರ್, ಕಡಬ ಮೆಸ್ಕಾಂ ಎಇ, ಕಡಬ ಆರ್ಐ, ಜೆಸಿಬಿ ಡ್ರೈವರ್ ಮುಂತಾದವರು ಜೆಸಿಬಿ ಮುಖಾಂತರ, ಪೊಲೀಸರ ಸಮ್ಮುಖದಲ್ಲಿ ಧ್ವಂಸ ಮಾಡಿರುತ್ತಾರೆ ಎಂದು ದೂರುದಾರರು ತಿಳಿಸಿದ್ದಾರೆ. ಈ ದೂರಿನಂತೆ ಕುರಿಯನ್ ಎ.ಸಿ.ಅವರ ವಿರುದ್ಧ, ಐ ಪಿ ಸಿ 354(A), 506 ರ ಅಡಿಯಲ್ಲಿ ಪುತ್ತೂರು ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದೆ.