Home ದಕ್ಷಿಣ ಕನ್ನಡ Dharmasthala : ಹೆಗ್ಗಡೆಯವರಿಗೆ ಗಂಗಾಜಲ ಹಸ್ತಾಂತರಿಸಿದ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಪುತ್ತೂರಿನ ಡಾ. ಮಹೇಶ್ ಗೌಡ

Dharmasthala : ಹೆಗ್ಗಡೆಯವರಿಗೆ ಗಂಗಾಜಲ ಹಸ್ತಾಂತರಿಸಿದ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಪುತ್ತೂರಿನ ಡಾ. ಮಹೇಶ್ ಗೌಡ

Hindu neighbor gifts plot of land

Hindu neighbour gifts land to Muslim journalist

Dharmasthala : ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್​ರಾಜ್​ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಶುರುವಾದ ಮಹಾಕುಂಭ ಇದೇ ಫೆ.26ರಂದು ಅಂತ್ಯವಾಗಿದೆ. ಮಹಾ ಕುಂಭಮೇಳಕ್ಕೆ ತೆರಳಿದ ಭಕ್ತರರೆಲ್ಲರೂ ಕೂಡ ಅಲ್ಲಿಂದ ಗಂಗಾಜಲವನ್ನು ತಂದು ಮನೆಯಲ್ಲಿರಿಸುತ್ತಿದ್ದಾರೆ. ಅಲ್ಲದೆ ತಮ್ಮ ನೆರೆಹೊರೆಯವರೆಲ್ಲರಿಗೂ ಹಂಚುತ್ತಿದ್ದಾರೆ. ಅಂತೆಯೇ ಇದೀಗ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಡಾಕ್ಟರ್ ಡಿ ಮಹೇಶ್ ಅವರು ದಂಪತಿ ಸಮೇತರಾಗಿ ಧರ್ಮಸ್ಥಳಕ್ಕೆ ಆಗಮಿಸಿ ವೀರೇಂದ್ರ ಹೆಗ್ಗಡೆಯವರಿಗೆ ಗಂಗಾಜಲವನ್ನು ಹಸ್ತಾಂತರಿಸಿದ್ದಾರೆ.

 

ಹೌದು, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದಂತಹ  ಶ್ರೀಯುತ ಪುತ್ತೂರಿನ ಮುತ್ತು ಡಾ. ಡಿ ಮಹೇಶ್ ಗೌಡ ದಂಪತಿ ಮತ್ತು ಸುಮಾರು 250 ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮೂಲಕ  ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಗಂಗಾಜಲವನ್ನು ವೀರೇಂದ್ರ ಹೆಗ್ಗಡೆಯವರಿಗೆ ಹತ್ತಾಂತರಿಸಿದ್ದಾರೆ. ಅಲ್ಲದೆ ಮಂಜುನಾಥ ಸ್ವಾಮಿಗೆ  ಅಣ್ಣಪ್ಪ ಸ್ವಾಮಿಗೆ ಮತ್ತು ಅಮ್ಮನವರಿಗೆ ಅಭಿಷೇಕ ಮಾಡುವುದಕ್ಕಾಗಿ ಇದನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.