Home ದಕ್ಷಿಣ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಯ ಯುವಕರಿಗೊಂದು ಸುವರ್ಣವಕಾಶ !! | ಪೌರರಕ್ಷಣಾ ಪಡೆಗೆ ಸೇರಲು ಅರ್ಹ ಅಭ್ಯರ್ಥಿಗಳಿಂದ...

ದಕ್ಷಿಣ ಕನ್ನಡ ಜಿಲ್ಲೆಯ ಯುವಕರಿಗೊಂದು ಸುವರ್ಣವಕಾಶ !! | ಪೌರರಕ್ಷಣಾ ಪಡೆಗೆ ಸೇರಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಪೌರರಕ್ಷಣಾ ಪಡೆಗೆ ಸೇರಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ಸಂಭಾವನೆಯ ಅಪೇಕ್ಷೆ ಇಲ್ಲದ, ಸಾಮಾಜಿಕ ಸೇವೆ ಮಾಡಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹಾಗೂ ಯುವಜನರು ಅರ್ಜಿ ಸಲ್ಲಿಸಬಹುದು. ಪೌರರಕ್ಷಣಾ ಪಡೆಗೆ ನೋಂದಾಯಿತರಾದ ಸದಸ್ಯರನ್ನು ನೈಸರ್ಗಿಕ  ವಿಕೋಪಗಳಾದ ನೆರೆಹಾವಳಿ, ಭೂಕಂಪ, ಸುನಾಮಿ, ಸೈಕ್ಲೋನ್, ಭೂಕುಸಿತ, ಕಟ್ಟಡ ಕುಸಿತ, ಅನಿಲ ದುರಂತ, ಜನರ ಅಸ್ತಿಪಾಸ್ತಿ ಪ್ರಾಣ ರಕ್ಷಣೆ ಹಾಗೂ
ಸಮಾಜದ ರಕ್ಷಣಾ ಕಾರ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗುವುದು.

ಅಭ್ಯರ್ಥಿಗಳು 20 ವರ್ಷ ಮೇಲ್ಪಟ್ಟಿರಬೇಕು. ಜಿಲ್ಲೆಯ ಖಾಯಂ ನಿವಾಸಿಗಳಾಗಿದ್ದು, ಯಾವುದೇ ಕ್ರಿಮಿನಲ್ ಮೊಕದ್ದಮೆ ಇರಬಾರದು. ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ, ದೈಹಿಕ ಅರ್ಹತಾ ಪ್ರಮಾಣ ಪತ್ರ, ಫೋಟೋ ಮತ್ತು ವಾಸಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳ ನಕಲು ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಬಹುದು.

ಅಸಕ್ತ ಅಭ್ಯರ್ಥಿಗಳು ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೇರಿಹಿಲ್, ಮಂಗಳೂರು, ದೂರವಾಣಿ ಸಂಖ್ಯೆ: 0824-2220562, ಇಲ್ಲಿಂದ ಕಚೇರಿ ವೇಳೆ ಬೆಳಿಗ್ಗೆ 10 ರಿಂದ ಸಂಜೆ 5.30ರೊಳಗೆ ಅರ್ಜಿ ಪಡೆಯಬಹುದು ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.