Home News ಕಡಬ: ಸಾಮಾನ್ಯ ಜನರಿಗೂ ತಾಂತ್ರಿಕ ಸಲಹೆ-ನೋಂದಣಿ ಗ್ರಾಮ ಮಟ್ಟದಲ್ಲೇ ಸಿಗುವಂತಾಗಲಿ!! ಬಲ್ಯದಲ್ಲಿ ಸಾಮಾನ್ಯ ಸೇವಾ ಕೇಂದ್ರ...

ಕಡಬ: ಸಾಮಾನ್ಯ ಜನರಿಗೂ ತಾಂತ್ರಿಕ ಸಲಹೆ-ನೋಂದಣಿ ಗ್ರಾಮ ಮಟ್ಟದಲ್ಲೇ ಸಿಗುವಂತಾಗಲಿ!! ಬಲ್ಯದಲ್ಲಿ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟಿಸಿ ಪಂಚಾಯತ್ ಪಿಡಿಓ ಆನಂದ್

Hindu neighbor gifts plot of land

Hindu neighbour gifts land to Muslim journalist

ಕಡಬ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ಜನರಿಗೂ ತಾಂತ್ರಿಕ ಸಲಹೆ ಹಾಗೂ ನೋಂದಣಿಗಳು ಗ್ರಾಮ ಮಟ್ಟದಲ್ಲೇ ಸಿಗುವಂತಾಗಿರುವುದು ಖುಷಿಯ ವಿಚಾರ, ಎಲ್ಲರೂ ಸದುಪಯೋಗಪಡಿಸಿಕೊಂಡು ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡುವಲ್ಲಿ ಸಹಕರಿಸಬೇಕು ಎಂದು ಕುಟ್ರುಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಹೇಳಿದರು.

ಅವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರಾರಂಭಗೊಂಡ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಭಾಸ್ಕರ್ ಸನಿಲ, ಪ್ರಗತಿಪರ ಕೃಷಿಕರಾದ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು, ಒಕ್ಕೂಟದ ಪದಾಧಿಕಾರಿಗಳಾದ ಮಹೇಶ್, ಲಲಿತ, ಸೇವಾ ಪ್ರತಿನಿಧಿ ದುರ್ಗಾವತಿ, ರೇಷ್ಮಾ, ತಾಂತ್ರಿಕ ಸಿಬ್ಬಂದಿಗಳಾದ ಗಾಯತ್ರಿ, ಸುವಿಧಾ, ಧನ್ಯಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.