Home ದಕ್ಷಿಣ ಕನ್ನಡ Mangaluru: ಪೊಲೀಸ್‌ ಠಾಣೆ ಮುಂಭಾಗ ತನ್ನ ಮಕ್ಕಳ ಕೊಲೆಗೆ ಯತ್ನಿಸಿದ ತಂದೆ! ಒಂದೂವರೆ ವರ್ಷದ ಕಂದಮ್ಮಳ...

Mangaluru: ಪೊಲೀಸ್‌ ಠಾಣೆ ಮುಂಭಾಗ ತನ್ನ ಮಕ್ಕಳ ಕೊಲೆಗೆ ಯತ್ನಿಸಿದ ತಂದೆ! ಒಂದೂವರೆ ವರ್ಷದ ಕಂದಮ್ಮಳ ಕುತ್ತಿಗೆ ತಿರುಗಿಸಿ, ನೆಲಕ್ಕೆ ಹೊಡೆಯಲು ಯತ್ನಿಸಿದ ಪಾಪಿ ತಂದೆ!!!

Hindu neighbor gifts plot of land

Hindu neighbour gifts land to Muslim journalist

Mangaluru: ಪತಿ ಮತ್ತು ಪತ್ನಿ ಮಧ್ಯೆ ಕೂಸು ಬಡವಾಯಿತು ಎಂಬ ಮಾತೊಂದು ನಿಜ ಮಾಡುವಂತಿದೆ ಈ ಘಟನೆ. ಹೌದು, ಪಾನಮತ್ತ ತಂದೆ ಪೊಲೀಸ್‌ ಠಾಣೆಯಲ್ಲಿ ತನ್ನ ಮಕ್ಕಳ ಕೊಲೆಗೆ ಯತ್ನಿಸಿರುವ ಘಟನೆಯೊಂದು ನಡೆದಿದ್ದು (Mangaluru), ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ್‌ ಎಂಬಾತನೇ ತನ್ನ ಮಕ್ಕಳ ಕೊಲೆಗೆ ಯತ್ನಿಸಿದ ಆರೋಪಿ. ಸೆ.24 ರಂದು ರಾತ್ರಿ ಮಹೇಶ್‌ ಮತ್ತು ಪತ್ನಿಯ ಮಧ್ಯೆ ಜಗಳವಾಗಿದೆ. ವಿಪರೀತ ಕುಡಿತದ ಚಟ ಹೊಂದಿರುವ ಈತ ದಿನನಿತ್ಯ ಕುಡಿತದ ಚಟ ಹೊಂದಿರುವ ವ್ಯಕ್ತಿ. ಮೊನ್ನೆ ಕೂಡಾ ಗಲಾಟೆ ಹೆಚ್ಚಾಗಿದ್ದು, ಈತ ಮಕ್ಕಳು ಹಾಗೂ ಪತ್ನಿಗೆ ಬೆಂಕಿ ಹಚ್ಚಿ ಕೊಲ್ಲುತ್ತೇನೆ ಎಂದು ಹೇಳಿದ್ದು, ಹಲ್ಲೆ ನಡೆಸಿದ್ದಾನೆ. ಕೂಡಲೇ ಆತನ ಪತ್ನಿ ಅಲ್ಲಿಂದ ತಪ್ಪಿಸಿಕೊಂಡು ಕದ್ರಿ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಗಂಡ ಮಕ್ಕಳನ್ನು ಕೊಲ್ಲಲು ಮುಂದಾಗಿದ್ದಾನೆ ರಕ್ಷಿಸಿ ಎಂದು ಆಕೆ ಪೊಲೀಸರ ಮುಂದೆ ಹೇಳಿದ್ದಾಳೆ.

ಈ ಸಂದರ್ಭದಲ್ಲಿ ಆರೋಪಿ ಮಹೇಶ ತನ್ನ ಆರು ವರ್ಷದ ಗಂಡು ಮಗು ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಠಾಣೆಗೆ ಬಂದವನೇ, ಪೊಲೀಸರ ಮುಂದೆ ಹೆಂಡತಿ ತನಗೆ ಹೊಡೆದಿರುವುದಾಗಿ ದೂರು ನೀಡಿದ್ದಾನೆ. ನಂತರ ಲಿಖಿತ ರೂಪದಲ್ಲಿ ದೂರು ನೀಡಲು ಹೇಳಿದಾಗ ಆತ ಯಾರನ್ನೂ ಬಿಡುವುದಿಲ್ಲ ಎಂದು ಧಮ್ಕಿ ಹಾಕಿ ಮಕ್ಕಳನ್ನು ಕರೆದುಕೊಂಡು ಠಾಣೆಯಿಂದ ಹೊರಗೆ ಹೋಗಿದ್ದಾನೆ.

ಆಗ ಪತ್ನಿ ಹೊರಗೆ ಬಂದಿದ್ದು, ಮಹೇಶ ಆಕೆಯನ್ನು ನೋಡಿ ಮತ್ತಷ್ಟು ಕೋಪಗೊಂಡು ಮಗಳನ್ನು ಗೋಡೆಗೆ ಬಿಸಾಡಿ ಕೊಲ್ಲುತ್ತೇನೆಂದು ಬೆದರಿಸಿದ್ದು, ಆತ ಮಗುವಿನ ಕುತ್ತಿಗೆಯನ್ನು ತಿರುಗಿಸಿ ಕೈ ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಎಸೆಯಲು ಪ್ರಯತ್ನಿಸಿದ್ದಾನೆ. ಇದರಿಂದ ನೋವಾದ ಮಗು ಜೋರಾಗಿ ಅಳಲಾರಂಭಿಸಿದೆ. ಕೂಡಲೇ ಕರ್ತವ್ಯದಲ್ಲಿದ್ದ ಠಾಣಾ ಪಿಎಸ್‌ಐ ಪ್ರತಿಭಾ ಕೂಡಲೇ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಹಾಗೂ ಬಾಲಕನನ್ನು ಕರೆದುಕೊಡು ಇಲಾಖಾ ವಾಹನದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆರೋಪಿಯ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂದು ದೂರು ದಾಖಲಾಗಿದೆ.

ಇದನ್ನೂ ಓದಿ: ಇಂದು ಈ ರಾಶಿಯವರು ದೂರ ಪ್ರಯಾಣ ಮುಂದೂಡುವುದು ಉತ್ತಮ! ಕಾದಿದೆಯಾ ಗಂಡಾಂತರ?!