Home ದಕ್ಷಿಣ ಕನ್ನಡ Kaniyoor: ಕಾಣಿಯೂರು ಅಬ್ಬಡದಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Kaniyoor: ಕಾಣಿಯೂರು ಅಬ್ಬಡದಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Kaniyoor

Hindu neighbor gifts plot of land

Hindu neighbour gifts land to Muslim journalist

Kaniyoor: ಕಾಣಿಯೂರಿನಲ್ಲಿ ವ್ಯಕ್ತಿಯೋರ್ವರು
ಮಕ್ಕಳಾಗಲಿಲ್ಲವೆಂದು ಮನನೊಂದು ಸಾವಿಗೆ ಶರಣಾದ ಘಟನೆ ಕಡಬ ತಾಲೂಕು ಕಾಣಿಯೂರು (Kaniyoor)ಗ್ರಾಮದ ಅಬ್ಬಡದಲ್ಲಿ ನ 12 ರಂದು ನಡೆದಿದೆ.

ಮೃತಪಟ್ಟವರನ್ನು ಲೋಕಯ್ಯ (43 ವರ್ಷ) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಸಾವಿಗೆ ಶರಣಾಗಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಅವರು ಶೋಭಾ ಅನ್ನುವವರ ಜೊತೆ ವಿವಾಹವಾಗಿದ್ದರು. ಆದರೆ ಅವರಿಗೆ ಸಂತಾನ ಭಾಗ್ಯ ಒಲಿದು ಬಂದಿರಲಿಲ್ಲ. ಇದರಿಂದ ನೊಂದು ಮದ್ಯ ಸೇವನೆ ಮಾಡಲು ಶುರು ಮಾಡಿಕೊಂಡಿದ್ದರು.

ಇತ್ತೀಚೆಗೆ ಸುಮಾರು 4 ವರ್ಷಗಳಿಂದ ಲೋಕಯ್ಯ ಗೌಡರು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು , ಮದ್ಯ ಸೇವನೆ ಅಧಿಕವಾಗಿ ಸಮಯಕ್ಕೆ ಸರಿಯಾಗಿ ಅನ್ನ – ಆಹಾರ ಇಲ್ಲದೇ ನಿತ್ರಾಣಗೊಂಡಿದ್ದರು .

ದಿನಾಂಕ 12-11-2023 ರಂದು ಶೋಭಾ ಬೆಳಗ್ಗೆ 9-00 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿದ್ದು , ಸಂಜೆ 03-00 ಗಂಟೆಗೆ ಮನೆಗೆ ಬಂದಾಗ ಮನೆಯ ಹಾಲ್ ನಲ್ಲಿ ಲೋಕಯ್ಯ ಗೌಡರು ಬಿದ್ದುಕೊಂಡಿದ್ದು , ಅವರ ಬಾಯಿಯಿಂದ ಬಿಳಿ ನೊರೆ ಬಂದಿದ್ದು , ಘಾಟು ವಾಸನೆ ಬರುತ್ತಿತ್ತು . ಮುಟ್ಟಿ ನೋಡಿದಾಗ ಮೈ ತಣ್ಣಗಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Dakshina Kannada: KSRTC ಬಸ್‌ನಲ್ಲಿ ತೆಂಗಿನೆಣ್ಣೆ ಸಾಗಾಟ; ಬಸ್‌ನಿಂದ ಮಹಿಳೆಯನ್ನು ಕೆಳಗಿಳಿಸಿದ ಕಂಡಕ್ಟರ್‌- ಮಹಿಳೆ ಮಾಡಿದ್ದೇನು ಗೊತ್ತೇ?