Home ದಕ್ಷಿಣ ಕನ್ನಡ Mangaluru : ‘ದಕ್ಷಿಣ ಕನ್ನಡ’ ಜಿಲ್ಲೆಗೆ ಮರು ನಾಮಕರಣ – ಹೊಸ ಹೆಸರೇನು ಗೊತ್ತಾ?

Mangaluru : ‘ದಕ್ಷಿಣ ಕನ್ನಡ’ ಜಿಲ್ಲೆಗೆ ಮರು ನಾಮಕರಣ – ಹೊಸ ಹೆಸರೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Mangaluru : ದಕ್ಷಿಣ ಕನ್ನಡ ಜಿಲ್ಲೆಗೆ ಮರು ನಾಮಕರಣ ಮಾಡುವ ನಿಟ್ಟಿನಲ್ಲಿ ಹೋರಾಟಗಳು ತೀವ್ರಗೊಂಡಿದ್ದು, ಸರ್ವ ಧರ್ಮ-ಪಕ್ಷ-ಸಂಘಟನೆಗಳು ಒಗ್ಗೂಡಿರುವ “ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿ” ಕೂಡ ರಚನೆಗೊಂಡಿದೆ. ಅಲ್ಲದೆ ಇದಕ್ಕೆ ಶಾಸಕರಗಳು ಕೂಡ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ದಕ್ಷಿಣ ಕನ್ನಡ ಜಿಲ್ಲೆಗೆ ಇಡಲು ಹೋರಾಟ ಹೊಸ ಹೆಸರೇನು? ಇಲ್ಲಿದೆ ನೋಡಿ ಡೀಟೇಲ್ಸ್.

 

 ಹೌದು, ಪೋರ್ಚುಗೀಸರು ಬ್ರಿಟಿಷರ ಕಾಲದಲ್ಲಿ ತುಳುನಾಡು ಹೋಗಿ ಸೌತ್ ಕೆನರಾ ಆಯ್ತು, ಸ್ವತಂತ್ರ ಭಾರತದಲ್ಲಿ ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಸೌತ್ ಕೆನರಾ ದಕ್ಷಿಣ ಕನ್ನಡವಾಗಿ ಬದಲಾಯಿತು, ಹಾಗಾಗಿ ಈ ನೆಲಕ್ಕೂ ದಕ್ಷಿಣ ಕನ್ನಡ ಹೆಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರು ನಾಮಕರಣ ಮಾಡುವ ನಿಟ್ಟಿನಲ್ಲಿ ಹೋರಾಟ ಸಮಿತಿಯು ಹುಟ್ಟಿಕೊಂಡಿದೆ.

 

ಇದೀಗ ಜಿಲ್ಲೆಯ ಹೆಸರನ್ನು ಬದಲಾಯಿಸಲು ಸರ್ವ ಧರ್ಮ-ಪಕ್ಷ-ಸಂಘಟನೆಗಳು ಒಗ್ಗೂಡಿರುವ “ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿ” ಸಂಚಾಲಕನಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದ್ದಾರೆ.

 

ಅಲ್ಲದೆ ಜಿಲ್ಲೆಗೆ ಮರುನಾಮಕರಣದ ಬಗ್ಗೆ ಹೋರಾಟಗಳು ನಿನ್ನೆ ಮೊನ್ನೆ ಆರಂಭವಾಗಿದ್ದಲ್ಲ ಸುಮಾರು ನೂರು ವರ್ಷಗಳ ಹಿಂದಿನಿಂದಲೂ ಆಗ್ರಹವಿದೆ. ಜಿಲ್ಲೆಯ ಹೆಸರು ಬದಲಾವಣೆಯಾದಲ್ಲಿ ತುಳು ಭಾಷೆಯ ಹೋರಾಟಕ್ಕೂ ಇನ್ನಷ್ಟು ಪುಷ್ಟಿ ಸಿಗಲಿದೆ. ಈಗಾಗಲೇ ನಮ್ಮ ಜಿಲ್ಲೆಗೆ ಆರ್ಥಿಕವಾಗಿ ಬಹಳಷ್ಟು ಅನ್ಯಾಯವಾಗುತ್ತಿದ್ದರೂ ಸಹಿಸಿಕೊಂಡಿದ್ದೇವೆ. ಆದರೆ ಇಲ್ಲಿನ ಸಂಸ್ಕೃತಿಯ ಮೇಲೆ ಅನ್ಯಾಯವಾಗುವುದನ್ನು ಸ್ವಾಭಿಮಾನಿಗಳಾದ ತುಳುವರು ಸಹಿಸುವುದಿಲ್ಲ ಎಂದರು.

 

ಜೊತೆಗೆ ಉತ್ತರ ಪ್ರದೇಶ, ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸ್ಥಳೀಯ ಹೆಸರುಗಳ ಮರುನಾಮಕರಣಕ್ಕೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆಯೋ ಅದೇ ರೀತಿಯಲ್ಲೇ ಕಾನೂನು ಬದ್ಧವಾಗಿ ಈ ಪ್ರಕ್ರಿಯೆಗಳು ನಡೆಯಲಿ, ಅದಕ್ಕೆ ಅಗತ್ಯವಿರುವ ಯಾವುದೇ ಕಾರ್ಯಕ್ಕೂ ಶಾಸಕನಾಗಿ, ಸಮಿತಿಯ ಸಂಚಾಲಕನಾಗಿ ನಾನು ಬದ್ಧನಾಗಿದ್ದೇನೆ ಎಂದರು.