Home ದಕ್ಷಿಣ ಕನ್ನಡ Belthangady : ಜೈನ ಧರ್ಮಕ್ಕೆ ಅಪಮಾನ ಆರೋಪ – ಮಹೇಶ್ ಶೆಟ್ಟಿ ಮತ್ತು ರಾಜು ಶೆಟ್ಟಿ...

Belthangady : ಜೈನ ಧರ್ಮಕ್ಕೆ ಅಪಮಾನ ಆರೋಪ – ಮಹೇಶ್ ಶೆಟ್ಟಿ ಮತ್ತು ರಾಜು ಶೆಟ್ಟಿ ವಿರುದ್ಧ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

Belthangady : ಜೈನ ಧರ್ಮಕ್ಕೆ ಹಾಗೂ ಜೈನ ಸಮುದಾಯದವರಿಗೆ ಮತ್ತು ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರಾಜು ಶೆಟ್ಟಿ ವಿರುದ್ಧ ಜೈನ ಸಮುದಾಯದ ಮುಖಂಡರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹೇಶ್ ಶೆಟ್ಟಿ ಮತ್ತು ರಾಜು ಶೆಟ್ಟಿ ಜೈನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜೈನ ಸಮಾಜದ ಪರವಾಗಿ ಉಜಿರೆಯ ಓಡಲ ನಿವಾಸಿ ಅಜಯ್ ಕುಮಾರ್ ದೂರು ನೀಡಿದ್ದಾರೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ಸುಬ್ಬಾಪುರಮಠ ದೂರು ಸ್ವೀಕರಿಸಿದ್ದಾರೆ.