Home ದಕ್ಷಿಣ ಕನ್ನಡ ಬ್ರಹ್ಮನಲ್ಲಿ ಅಮ್ಮನನ್ನು ಕಾಣುವ ಸಂಸ್ಕೃತಿ ನಮ್ಮದು!! ಪಾಂಗಳ 15ನೇ ವರ್ಷದ ಸಂಸ್ಮರಣ ಕಾರ್ಯಕ್ರಮದಲ್ಲಿ ಕೇಮಾರು ಶ್ರೀ...

ಬ್ರಹ್ಮನಲ್ಲಿ ಅಮ್ಮನನ್ನು ಕಾಣುವ ಸಂಸ್ಕೃತಿ ನಮ್ಮದು!! ಪಾಂಗಳ 15ನೇ ವರ್ಷದ ಸಂಸ್ಮರಣ ಕಾರ್ಯಕ್ರಮದಲ್ಲಿ ಕೇಮಾರು ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ

Hindu neighbor gifts plot of land

Hindu neighbour gifts land to Muslim journalist

ಮಾತೃ ಭಕ್ತಿಯೇ ಪ್ರಥಮ ಭಕ್ತಿಯಾಗಬೇಕು, ನಮ್ಮ ಪೂರ್ವಜರು, ಮಹಾತ್ಮರೆಲ್ಲರೂ ಮಾತೃ ಭಕ್ತರಾಗಿದ್ದು, ಬ್ರಹ್ಮನಲ್ಲಿಯೇ ಅಮ್ಮನನ್ನು ಕಾಣುವ ಸಂಸ್ಕೃತಿ ನಮ್ಮದಾಗಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.

ರವಿವಾರ ಪಾಂಗಳದಲ್ಲಿ ನಡೆದ ಆರ್ಯಾಡಿ ಸುಬ್ಬಣ್ಣ ಶೆಟ್ಟಿ ಮನೆ, ದಿ|ಕೃಷ್ಣಿ ಶೆಡ್ತಿ ಅವರ 15ನೇ ಪುಣ್ಯ ಸಂಸ್ಮರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ ದಂಪತಿಗಳು ಆದರ್ಶವಾಗಿ ಬದುಕಿದ್ದು, ಇಂದು ಅವರ ಮಕ್ಕಳು ಹಾಗೂ ಕುಟುಂಬಿಕರು ಮುಂದುವರಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ, ಸುಮಾರು 40 ಅಶಕ್ತ ಕುಟುಂಬಗಳಿಗೆ ಸಹಾಯಧನ ನೆರವು ಹಾಗೂ ಹಿರಿಯ ನಾಗರಿಕರ ಆಶ್ರಮ ‘ಆಸರೆ’ಗೆ 25ರೂಪಾಯಿ ಧನಸಹಾಯ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದು,ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮವು ನಡೆಯಿತು.