Home ದಕ್ಷಿಣ ಕನ್ನಡ ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ಯುವಕನಿಂದ ಅತ್ಯಾಚಾರ, ದೂರು ದಾಖಲು

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ಯುವಕನಿಂದ ಅತ್ಯಾಚಾರ, ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಬಣ ಎಂಬಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿಯ ನೆರೆಮನೆ ನಿವಾಸಿ ಮುನಾಸಿರ್ ಮೇಲೆ ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ಅಪ್ರಾಪ್ತ ಬಾಲಕಿಯ ಮನೆಗೆ ಆಗಾಗ ಬಂದುಹೋಗುತ್ತಿದ್ದನು. ಅದಲ್ಲದೆ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದನು. ಪದೇ ಪದೇ ಒತ್ತಾಯ ಮಾಡಿ ದಿನಾಂಕ 30-05-2022 ರಂದು ಬೆಳಿಗೆ 08.15 ಗಂಟೆಗೆ ಬಾಲಕಿಯು ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಬಳಿ ತಲುಪಿದಾಗ 08.30 ಗಂಟೆಗೆ ಮುನಾಸಿರ್ ನಿನ್ನನ್ನು ಕಾರಲ್ಲಿ ಶಾಲೆಗೆ ಬಿಡುತ್ತೇನೆ ನೀನು ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೇ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ಒಂದು ರೂಂ ಮಾಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಅದಲ್ಲದೆ ಇಂದು ಕೂಡ ನೊಂದ ಬಾಲಕಿ ಬೆಳಿಗ್ಗೆ 08.15 ಗಂಟೆಗೆ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಹತ್ತಿರ ತಲುಪಿದಾಗ ಆರೋಪಿ ಮುನಾಸಿರ್ ಬಲತ್ಕಾರವಾಗಿ ಮತ್ತೆ ಉಪ್ಪಿನಂಗಡಿಯ ಲಾಡ್ಜ್ ರೂಮಿಗೆ ಕರೆದುಕೊಂಡು ಹೋಗಿ ರೂಮಿನಲ್ಲಿ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯುಸುತ್ತೇನೆ ಎಂದು ಹೇಳಿ ಲಾಡ್ಜ್ ನಿಂದ ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ಬಿಟ್ಟು ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.