Home ದಕ್ಷಿಣ ಕನ್ನಡ Belthangady: ಬೆಳ್ತಂಗಡಿ: ಕೆಲಸ ಪೋದು ಬರ್ಪೆ ಅಂದು ಹೋದವಳು ಕೊಟ್ಲು ಸಂಜೆಯಷ್ಟರಲ್ಲಿ ಬಿಗ್ ಶಾಕ್!

Belthangady: ಬೆಳ್ತಂಗಡಿ: ಕೆಲಸ ಪೋದು ಬರ್ಪೆ ಅಂದು ಹೋದವಳು ಕೊಟ್ಲು ಸಂಜೆಯಷ್ಟರಲ್ಲಿ ಬಿಗ್ ಶಾಕ್!

Hindu neighbor gifts plot of land

Hindu neighbour gifts land to Muslim journalist

Belthangady: ಕೆಲಸಕ್ಕೆ ಹೋದ ಯುವತಿ ಕಾಣೆಯಾಗಿದ್ದಾಳೆ ಎಂದು ಅಂದುಕೊಂಡ ಬೆನ್ನಲ್ಲೇ ಮನೆಯವರಿಗೆ ಶಾಕ್ ಕಾದಿತ್ತು. ಹೌದು, ಬೆಳ್ತಂಗಡಿಯ (Belthangady) ವೇಣೂರು ಸಮೀಪ ಕರಿಮಣೇಲಿನಲ್ಲಿ ಸಂಧ್ಯಾ (22 ವ) ಯವತಿ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದವಳು ಹಿಂದಿರುಗಿ ಮನೆಗೆ ಬರಲೇ ಇಲ್ಲ.

ಮಾಹಿತಿ ಪ್ರಕಾರ, ನ. 4ರಂದು ಸಂಧ್ಯಾ ಮನೆಯಿಂದ ಕೆಲಸಕ್ಕೆ ಹೋದವಳು ಸಂಜೆ ತನ್ನ ಸಹೋದರಿಯ ಮೊಬೈಲ್‌ಗೆ ‘ನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿ’ ಎಂಬುದಾಗಿ ಮನೆಯವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾಳೆ. ಅಷ್ಟೇ ಅಲ್ಲದೇ ಯುವಕನೊಬ್ಬನ ಜತೆ ತೆಗೆದಿರುವ ಫೋಟೋ ಸಹೋದರಿಗೆ ರವಾನಿಸಿದ್ದು, ಬಳಿಕ ಆಕೆಯ ಮೊಬೈಲ್
ಸ್ವಿಚ್ ಆಫ್ ಆಗಿದೆ.

ಇನ್ನು ಮನೆಯವರು ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರಲಿಲ್ಲ ಎಂಬುವುದು ತಿಳಿದಿತ್ತು. ಸದ್ಯ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.