Home ದಕ್ಷಿಣ ಕನ್ನಡ ಕಿಡಿಗೇಡಿಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಹೆಸರು ಬದಲಾವಣೆ!

ಕಿಡಿಗೇಡಿಗಳಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಹೆಸರು ಬದಲಾವಣೆ!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಹಿಜಾಬ್ ವಿವಾದದ ಮುಂದುವರಿದ ಭಾಗವೇ ದೇವಸ್ಥಾನದಲ್ಲಿ ಜಾತ್ರೆ ವೇಳೆ ಇತರ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಅಭಿಯಾನ ಶುರುವಾಗಿತ್ತು. ಹಾಗೆನೇ ಕರಾವಳಿಯಾದ್ಯಂತ ಈ ನಿಷೇಧ ಕೆಲವೊಂದು ದೇವಸ್ಥಾನದಲ್ಲಿ ಮುಂದುವರಿಯಿತು ಕೂಡಾ.

ಹಲವು ವಿಚಾರಗಳಲ್ಲಿ ಹಿಂದು ಮುಸ್ಲಿಮ್ ಮಧ್ಯೆ ವಿವಾದಗಳು ಉದ್ಭವಿಸುತ್ತಿರುವ ಮಧ್ಯೆಯೇ ಆನ್‌ಲೈನ್‌ನಲ್ಲಿ ಇಂತಹ ಮತ್ತೊಂದು ಪ್ರಕರಣ ನಡೆದಿದೆ.

ಈ ಬಾರಿ ಹಿಂದು ಮುಸ್ಲಿಂ ಸೌಹಾರ್ದದ ತಾಣ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳವನ್ನು ಕಿಡಿಗೇಡಿಗಳು ತಮ್ಮ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ.

ದೇವಸ್ಥಾನದ ಹೆಸರನ್ನೇ ಗೂಗಲ್ ಮ್ಯಾಪ್‌ನಲ್ಲಿ ಬದಲಾಯಿಸಿ ಕುಕೃತ್ಯವೆಸಗಿದ್ದಾರೆ. ದುರ್ಗಾಪರಮೇಶ್ವರಿ ಎಂಬ ಹೆಸರಿನ ಮೊದಲು ಹಜರತ್ ಬಪ್ಪ ಬ್ಯಾರಿ ಪದಗಳನ್ನು ಸೇರಿಸಿರುವುದು ಬಯಲಾಗಿದೆ.

ನಕ್ಷೆಯಲ್ಲಿ ಹೆಸರನ್ನು ಬದಲಾಯಿಸಲು ಅವಕಾಶವಿದೆ. ಅದನ್ನೇ ಕಿಡಿಗೇಡಿಗಳು ದುರ್ಬಳಕೆ ಮಾಡಿದ್ದಾರೆ.