Home ದಕ್ಷಿಣ ಕನ್ನಡ Bantwala: ಬಂಟ್ವಾಳ : ದಕ್ಷಿಣ ಆಫ್ರಿಕಾಕ್ಕೆ ಉದ್ಯೋಗಕ್ಕೆ ತೆರಳಿದ್ದ ಯುವಕ ಅಕಾಲಿಕ ಸಾವು! ಇಂದು ಊರಲ್ಲಿ...

Bantwala: ಬಂಟ್ವಾಳ : ದಕ್ಷಿಣ ಆಫ್ರಿಕಾಕ್ಕೆ ಉದ್ಯೋಗಕ್ಕೆ ತೆರಳಿದ್ದ ಯುವಕ ಅಕಾಲಿಕ ಸಾವು! ಇಂದು ಊರಲ್ಲಿ ಅಂತ್ಯಸಂಸ್ಕಾರ!

Hindu neighbor gifts plot of land

Hindu neighbour gifts land to Muslim journalist

Bantwala: ಉದ್ಯೋಗಕ್ಕೆಂದು ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದ ಯುವಕ ಅಕಾಲಿಕ ಸಾವಿಗೀಡಾಗಿದ್ದು, ಇಂದು ಮೃತ್ಯದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

ನರಿಕೊಂಬು ಗ್ರಾಮ ನಿವಾಸಿ ರವಿ ಸಪಲ್ಯ ಅವರ ಪುತ್ರ ರಜತ್(25) ಮೃತಪಟ್ಟ ಯುವಕ. ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಎ. 5ರಂದು ಅಕಾಲಿಕವಾಗಿ ಮೃತಪಟ್ಟಿದ್ದನು ಎನ್ನಲಾಗಿದೆ.

ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಅವರು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಮೃತದೇಹವನ್ನು ಊರಿಗೆ ತರಲು ಸಹಕರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿರುವ ಕುರಿತು ನಿಖರ ನ್ಯೂಸ್ ವರದಿ ಮಾಡಿದೆ.