Home ದಕ್ಷಿಣ ಕನ್ನಡ ಮಂಗಳೂರು ಮೂಲದ ಬ್ಯಾಂಕ್ ಮ್ಯಾನೇಜರ್ ನಿಂದ ಕೋಟ್ಯಾಂತರ ರೂಪಾಯಿ ಹಣ ಅವ್ಯವಹಾರ| ತಲೆಮರೆಸಿಕೊಂಡಿರುವ ಆರೋಪಿ| ಪೊಲೀಸರಿಂದ...

ಮಂಗಳೂರು ಮೂಲದ ಬ್ಯಾಂಕ್ ಮ್ಯಾನೇಜರ್ ನಿಂದ ಕೋಟ್ಯಾಂತರ ರೂಪಾಯಿ ಹಣ ಅವ್ಯವಹಾರ| ತಲೆಮರೆಸಿಕೊಂಡಿರುವ ಆರೋಪಿ| ಪೊಲೀಸರಿಂದ ಹುಡುಕಾಟ!

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಮ್ಯಾನೇಜರ್ ಒಂದೂವರೆ ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ಪರಾರಿಯಾಗಿ ತಲೆಮರೆಸಿಕೊಂಡಿರುವ ಪ್ರಕರಣವೊಂದು ವರದಿಯಾಗಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಈ ಮೋಸ ನಡೆದಿದ್ದು, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಭಟ್ಕಳದ ಬಜಾರ್‌ನಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ಮ್ಯಾನೇಜರ್ ಅನೂಪ್ ಪೈ ಆರೋಪಿ, ಮೂಲತಃ ಮಂಗಳೂರಿನ ಬೋಳಪು ಗುಡ್ಡೆ ಕಾವೂರು ನಿವಾಸಿಯಾಗಿರುವ ಅನೂಪ್ ಪೈ, ಬ್ಯಾಂಕ್‌ನ ಸಿಸ್ಟಮ್ ಸಸ್ಪೆನ್ಸ್ ಖಾತೆಗೆ ಖರ್ಚು ಹಾಕಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ದೂರಿನ ಮೇರೆಗೆ ಭಟ್ಕಳ ನಗರ ಠಾಣೆಯ ಪೊಲೀಸರು ಅನೂಪ್ ವಾಸವಿದ್ದ ಭಟ್ಕಳ ರೈಲ್ವೆ ಸ್ಟೇಷನ್ ರಸ್ತೆ ಸಮೀಪದ ಬಾಡಿಗೆ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಅನೂಪ್ ಪರಾರಿಯಾಗಿ ತಲೆಮರೆಸಿಕೊಂಡಿರುವುದು ಗಮನಕ್ಕೆ ಬಂದಿದೆ.