Home ಕೃಷಿ Shivaraj Singh Chouhan: ರಾಜ್ಯದ ಅಡಿಕೆ ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್- ಕೇಂದ್ರ ಕೃಷಿ ...

Shivaraj Singh Chouhan: ರಾಜ್ಯದ ಅಡಿಕೆ ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್- ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಮಹತ್ವದ ಘೋಷಣೆ !!

Hindu neighbor gifts plot of land

Hindu neighbour gifts land to Muslim journalist

Shivaraj Singh Chouhan: ಹೊಸ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಶುಭರಾತ್ರಿ ಸಿಂಗ ಚೌಹಾಣ್( Shivaraj Singh Chouhan) ಅವರು ರಾಜ್ಯದ ಅಡಿಕೆ ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

 

ಬೆಲೆಕುಸಿತ, ಕೊಳೆ ರೋಗ, ಬೆಂಕಿ ರೋಗ, ಮಳೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರು ದಿನನಿತ್ಯವೂ ಕೂಡ ಆತಂಕವನ್ನು ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಇತ್ತೀಚಿಗೆ ವಿಶ್ವಸಂಸ್ಥೆ ನೀಡಿದ್ದ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿ ಇನ್ನೂ ಬೆಳೆಗಾರರ ನಿದ್ದೆಗೆಡಿಸಿತ್ತು. ಈ ಬೆನ್ನಲ್ಲೇ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈಗ ಭರವಸೆಯೊಂದನ್ನು ನೀಡಿದ್ದಾರೆ.

 

ಹೌದು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಸಾಗರ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಡಿಕೆ ಆಮದು ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳುವ ಜೊತೆಗೆ ಅಡಿಕೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತರ ಬೆಳೆಗಳಿಗೆ ತಕ್ಕ ಬೆಲೆ ಸಿಗಬೇಕು, ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ಮಧ್ಯವರ್ತಿಗಳನ್ನು ತಪ್ಪಿಸಿ ರೈತರಿಗೆ ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡಲು ನಾವು ಬದ್ದರಾಗಿದ್ದೇವೆ ಎಂದಿದ್ದಾರೆ.

 

ಅಲ್ಲದೆ ಕಳೆದ ವರ್ಷ ಅಡಕೆ ಬೆಳೆಗೆ ಸಾಕಷ್ಟು ಹಾನಿ ಆಗಿದೆ. ಅಡಿಕೆಗೆ ಬಾಧಿಸುವ ರೋಗಗಳ ಸಂಶೋಧನೆಗೆ ತಂಡ ರಚಿಸುತ್ತೇವೆ. ಇದಕ್ಕಾಗಿ ಈ ಬಜೆಟ್​​​ನಲ್ಲಿ 67 ಸಾವಿರ ಕೋಟಿ ರೂ. ಮೀಸಲಿಡಲಾಗುವುದು. ಅಡಿಕೆ ತಿನ್ನುವುದರಿಂದ ಕಾನ್ಸರ್ ಬರುತ್ತದೆ ಎಂಬ ವದಂತಿ ಇದೆ. ಆದರೆ, ಅಡಿಕೆಯನ್ನು ಹಿಂದಿನಿಂದಲೂ ಜನ ಬಳಸುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಸಲು 16 ಸಂಸ್ಥೆಗಳಿಗೆ ಸೂಚನೆ ನೀಡಿದ್ದೇವೆ. ಅಡಿಕೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಅಡಿಕೆಗೆ ಬಗ್ಗೆ ಇರುವ ವಂದತಿಗಳನ್ನು ದೂರ ಮಾಡುತ್ತೇವೆ ಎಂದರು ಸಚಿವರು ಹೇಳಿದರು.