Home ಕೃಷಿ ವ್ಯಾಪಾರ ಮಾಡಲು ಬಯಸುವ ಬಡವ್ಯಾಪಾರಿಗಳಿಗಾಗಿಯೇ ಇದೆ ‘ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ’ | 50ಸಾವಿರದವರೆಗೆ ಖಾತರಿಯಿಲ್ಲದೆ...

ವ್ಯಾಪಾರ ಮಾಡಲು ಬಯಸುವ ಬಡವ್ಯಾಪಾರಿಗಳಿಗಾಗಿಯೇ ಇದೆ ‘ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ’ | 50ಸಾವಿರದವರೆಗೆ ಖಾತರಿಯಿಲ್ಲದೆ ಸಾಲ ನೀಡುವ ಈ ಯೋಜನೆಯ ಮಾಹಿತಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಸರ್ಕಾರವು ಜನರಿಗೆ ನೆರವಾಗುವ ನಿಟ್ಟಿನಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಅವುಗಳಲ್ಲಿ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಕೂಡ ಒಂದು.

ಇದು ಬಡ ಕುಟುಂಬಗಳಿಗೆ ವ್ಯಾಪಾರ ಮಾಡಲು ಖಾತರಿಯಿಲ್ಲದೆ ಸಾಲವನ್ನ ಒದಗಿಸುವ ಯೋಜನೆಯಾಗಿದ್ದು, ವಿಶೇಷವಾಗಿ ಬೀದಿ ವ್ಯಾಪಾರಿಗಳಿಗಾಗಿ ಪ್ರಾರಂಭಿಸಲಾಗಿದೆ. ಸರ್ಕಾರದ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ, ತರಕಾರಿಗಳು ಮತ್ತು ಹಣ್ಣುಗಳನ್ನ ಮಾರಾಟ ಮಾಡುವವರಿಗೆ ಮತ್ತು ತ್ವರಿತ ಆಹಾರ ಅಥವಾ ಸಣ್ಣ ಉದ್ಯಮಗಳನ್ನ ಪ್ರಾರಂಭಿಸುವವರಿಗೆ ಸಾಲ ನೀಡಲಾಗುತ್ತದೆ.

ಈ ಯೋಜನೆಯಡಿಯಲ್ಲಿ 50 ಸಾವಿರ ರೂಪಾಯಿಗಳವರೆಗೆ ಸಾಲದ ಮೊತ್ತವನ್ನ ನೀಡಲಾಗುತ್ತೆ. ಆದ್ರೆ, ಒಂದು ಮೊತ್ತವನ್ನ ಮರುಪಾವತಿ ಮಾಡಿದ ನಂತರವೇ ಎರಡನೇ ಸಾಲದ ಮೊತ್ತವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಸರ್ಕಾರವು ಖಾತರಿಯಿಲ್ಲದೆ ಸಾಲವನ್ನ ನೀಡುತ್ತದೆ. ಸಾಲದ ಅರ್ಜಿಯನ್ನ ಅನುಮೋದಿಸಿದ ನಂತರ ಸರ್ಕಾರವು ತಕ್ಷಣವೇ ಸಾಲದ ಮೊತ್ತವನ್ನ ನಿಮ್ಮ ಖಾತೆಗೆ ವರ್ಗಾಯಿಸುತ್ತದೆ. ಸಾಲದ ಮೊತ್ತವನ್ನ ಮೂರು ಕಂತುಗಳಲ್ಲಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.