Home ಕೃಷಿ Godhan nyay yojana : ರೈತರೇ, ನಿಮಗಾಗಿ ಗೋಧನ್ ನ್ಯಾಯ ಯೋಜನೆ ; ಸರ್ಕಾರದಿಂದ ಈ...

Godhan nyay yojana : ರೈತರೇ, ನಿಮಗಾಗಿ ಗೋಧನ್ ನ್ಯಾಯ ಯೋಜನೆ ; ಸರ್ಕಾರದಿಂದ ಈ ಯೋಜನೆಯಡಿ ಹೊಸ ಕ್ರಮ ಜಾರಿ!

Godhan nyay yojana

Hindu neighbor gifts plot of land

Hindu neighbour gifts land to Muslim journalist

Godhan nyay yojana: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM KISAN yojana)ಮತ್ತು ಪ್ರಧಾನ ಮಂತ್ರಿ ಬಿಮಾ ಫಸಲ್ ಯೋಜನೆಯು (bheema phasal yojana) ಒಂದು. ಇದು ರೈತರಿಗೆ ಬಹಳ ಸಹಕಾರಿಯಾಗಿದೆ. ರೈತರ (farmers) ನೆರವಿಗೆ ಕೇಂದ್ರ ಸರ್ಕಾರ ಇಂತಹ ಅನೇಕ ಯೋಜನೆಗಳನ್ನು ರೂಪಿಸಿದ್ದು, ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಇತ್ತೀಚೆಗಷ್ಟೇ ಛತ್ತೀಸ್‌ಗಢ ಸರ್ಕಾರವು ಗೋ ಪಾಲಕರ, ರೈತರ ಆದಾಯ ಹೆಚ್ಚಿಸಲು ‘ಗೋಧನ್ ನ್ಯಾಯ ಯೋಜನೆ’ಯನ್ನು (Godhan nyay yojana) ಜಾರಿಗೆ ತಂದಿದೆ. ಈ ಯೋಜನೆಯಡಿ ರಾಜ್ಯ ಸರ್ಕಾರವು ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಖರೀದಿಸುತ್ತಿದೆ (Shree Cement and Cow Dung). ಸರ್ಕಾರ ಇದರ ಬದಲಾಗಿ ರೈತರಿಗೆ ಮೊತ್ತವನ್ನು ನೀಡುತ್ತದೆ. ಈ ಮೂಲಕ ರೈತರ ಆದಾಯ ಹೆಚ್ಚಿಸುವ ಪ್ರಯತ್ನವಾಗಿದೆ. ಇದರಿಂದ ರೈತರ ಆರ್ಥಿಕ ಸಮಸ್ಯೆ ದೂರಾಗಲಿದೆ.

ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ 2020 ರಲ್ಲಿ ‘ಗೋಧನ್ ನ್ಯಾಯ್ ಯೋಜನೆ’ಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ, ರಾಜ್ಯದ ದನಕರುಗಳು ಮತ್ತು ಗೋಶಾಲೆಗಳಿಂದ ಹಸುವಿನ ಸಗಣಿ ಖರೀದಿಸಲಾಗುತ್ತಿದೆ. ಹಸುವಿನ ಸಗಣಿಯಿಂದ ಸಾವಯವ ಗೊಬ್ಬರ, ದೀಪಗಳು, ಅಗರಬತ್ತಿಗಳು ಮತ್ತು ಗುಲಾಲ್ ಇತ್ಯಾದಿಗಳನ್ನು ತಯಾರಿಸಲಾಗುತ್ತಿದೆ.

ಇದೀಗ ಸಿಮೆಂಟ್ ತಯಾರಕ ಕಂಪನಿಯಾದ ಶ್ರೀ ಸಿಮೆಂಟ್ ಮತ್ತು ಸರ್ಕಾರದ ನಡುವೆ ಹಸುವಿನ ಸಗಣಿ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದು, ಅದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ನಂತರ, ಶ್ರೀ ಸಿಮೆಂಟ್ ಕಂಪನಿಯು ಸಿಮೆಂಟ್ ತಯಾರಿಸಲು ಕುಲುಮೆಗಳಲ್ಲಿ ಬಳಸುವ ಕಲ್ಲಿದ್ದಲಿನ ಬದಲಿಗೆ ಈಗ ಹಸುವಿನ ಸಗಣಿ ಬಳಸಲಾಗುತ್ತದೆ. ಈ ಮೂಲಕ ಕಂಪನಿಗೆ ಕಲ್ಲಿದ್ದಲು ವೆಚ್ಚವೂ ಕಡಿಮೆಯಾಗಲಿದೆ. ಸದ್ಯ ಈ ಯೋಜನೆಯ ಪ್ರಯೋಜನವನ್ನು ಪಡೆಯುವ ಗೋಪಾಲಕರಿಗೆ ಡಿಸೆಂಬರ್ 2022 ರವರೆಗೆ,ರಾಜ್ಯ ಸರ್ಕಾರದಿಂದ ರೂ 8.20 ಕೋಟಿ ಬಿಡುಗಡೆ ಮಾಡಲಾಗಿದೆ.