Home ಕೃಷಿ Arecanut Growers: ಈ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ ಅಡಿಕೆ ಬೆಳೆಗಾರರು – ಸರ್ಕಾರ ಹೇಳಿದ್ದೇನು?

Arecanut Growers: ಈ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ ಅಡಿಕೆ ಬೆಳೆಗಾರರು – ಸರ್ಕಾರ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Arecanut Growers: : ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut)ದರ ವಿವಿಧ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ತುಸು ವ್ಯತ್ಯಾಸವಿರುವುದು ಸಹಜ. ಕೆಲವೊಂದು ಮೂಲಗಳ ಪ್ರಕಾರ, ಅಡಿಕೆ ಧಾರಣೆ (Arecanut Price)ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಇದರ ನಡುವೆ, ಹಲವು ದಶಕಗಳಿಂದ ಚಿತ್ರದುರ್ಗ(Chitradurga)ಭಾಗದಲ್ಲಿ ಅಡಿಕೆ ಪ್ರಧಾನ ಬೆಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದಲ್ಲಿನ ಅಡಿಕೆ ಮಾರುಕಟ್ಟೆಯು ರಾಜ್ಯದ ಬೆಳೆಗಾರರ (Arecanut Growers) ಗಮನ ಸೆಳೆದಿದೆ. ಹೀಗಿದ್ದರೂ ಕೂಡ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹಾಗೂ ಹನಿ ನೀರಾವರಿಯ ಸಹಾಯಧನಕ್ಕೆ ಅಡಿಕೆ ಬೆಳೆಯನ್ನು ಪರಿಗಣಿಸುತ್ತಿಲ್ಲ ಎಂಬ ಕೂಗು ಜೋರಾಗಿ ಕೇಳಿಬಂದಿದೆ.

ಚಿತ್ರದುರ್ಗ ಜಿಲ್ಲೆಯ ಜನರ ಕನಸಾಗಿದ್ದ ನೀರಾವರಿ ಭದ್ರಾ ಮೇಲ್ದಂಡೆ ಸಾಕಾರಗೊಳ್ಳುವ ಸಂಭವ ದಟ್ಟವಾಗಿದೆ. ಹೀಗಾಗಿ, ನಾಲೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ವೇದಾವತಿ ನದಿಯ ಮೂಲಕ ವಿ.ವಿ.ಸಾಗರಕ್ಕೆ ಭದ್ರಾ ಜಲಾಶಯದ ನೀರು ತರಲಾಗಿದೆ. ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ನೀಡುವ ಸಹಾಯಧನವನ್ನು ಚಿತ್ರದುರ್ಗ ಜಿಲ್ಲೆಯ ಬೆಳೆಗಾರರಿಗೂ ಕೂಡ ಒದಗಿಸಬೇಕು ಎಂದು ಬೆಳೆಗಾರರು ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಕೃಷಿ ಭೂಮಿಯಲ್ಲಿ ಗುಂಡಿ ತೋಡಿ ಸಸಿ ನಾಟಿ ಮಾಡಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುವು ಮಾಡಿಕೊಡಲಾಗುತ್ತದೆ. ತೋಟಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಸಹಾಯಧನ ನೀಡಲಾಗುತ್ತದೆ. ಆದರೆ, ಈ ಸೌಲಭ್ಯ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಸಿಗುತ್ತಿಲ್ಲ. ಸಹಾಯಧನದ ವ್ಯಾಪ್ತಿಗೆ ಅಡಿಕೆ ಬೆಳೆಯನ್ನೂ ಸೇರಿಸುವಂತೆ ರೈತರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಹೀಗಿದ್ದರೂ ಕೂಡ ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗ ಪರಿಗಣಿಸುತ್ತಿಲ್ಲ ವೆಂದು ಅಡಿಕೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತೋಟಗಾರಿಕೆ ಇಲಾಖೆಯ ಸಾಂಪ್ರದಾಯಿಕ ಬೆಳೆಯ ವ್ಯಾಪ್ತಿಯಲ್ಲಿ ಅಡಿಕೆಯನ್ನು ಸೇರಿಸಿಲ್ಲ. ಜಿಲ್ಲೆಯ 53,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ನಡೆಸಲಾಗುತ್ತಿದ್ದರೂ ಕೂಡ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗು ಬೆಳೆಗಾರರನ್ನು ಕಾಡುತ್ತಿದೆ.

ಇದನ್ನೂ ಓದಿ: Bengaluru Love Jihad:ಯುವಕನ ವಿರುದ್ಧ ಯುವತಿ ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಪೋಲೀಸರು ಬಿಚ್ಚಿಟ್ಟರು ಸ್ಪೋಟಕ ಸತ್ಯ !!