Home ಕೃಷಿ PM Kisan Yoajana : ಪಿಎಂ ಕಿಸಾನ್ ಯೋಜನೆಯ ಅನರ್ಹ ರೈತರಿಂದ ಹಣ ವಾಪಸ್‌ಗೆ ಕಸರತ್ತು...

PM Kisan Yoajana : ಪಿಎಂ ಕಿಸಾನ್ ಯೋಜನೆಯ ಅನರ್ಹ ರೈತರಿಂದ ಹಣ ವಾಪಸ್‌ಗೆ ಕಸರತ್ತು : ಕಿಸಾನ್‌ ಸಮ್ಮಾನ್‌ ಯೋಜನೆಯ ಸಮಸ್ಯೆ

Hindu neighbor gifts plot of land

Hindu neighbour gifts land to Muslim journalist

2019 ರಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ಕೇಂದ್ರ ಸರ್ಕಾರದಿಂದ ಬರುತ್ತದೆ ಅದೇ ರೀತಿಯಾಗಿ ರಾಜ್ಯ ಸರ್ಕಾರದಿಂದ 4000 ಬರುತ್ತದೆ.

ಈ ಯೋಜನೆ ಅಡಿ ಸ್ವಯಂ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು 3312 ಮೃತರ ಖಾತೆಗಳಿಗೂ ಹಣ ಪಾವತಿ ಮಾಡಿಕೊಳ್ಳಲಾಗಿದೆ. ಮತ್ತು ಇನ್ನಿತರ ಅನರ್ಹ ರೈತರು ಕೂಡ ಅನಧಿಕೃತವಾಗಿ ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಒಟ್ಟಾರೆ 3.97 ಲಕ್ಷ ಅನರ್ಹರು ಹೆಸರಿನಲ್ಲಿ 442 ಕೋಟಿ ಪಾವತಿಯಾಗಿದೆ.

ಅನರ್ಹ ರೈತರಿಂದ ಹಣವನ್ನು ಹಿಂದಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಲು ಈಗಾಗಲೇ ಬ್ಯಾಂಕ್ ಗಳಿಗೆ ಪತ್ರ ಬರೆಯಲಾಗಿದೆ. ಹಣವನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ಬ್ಯಾಂಕುಗಳಿಗೆ ನೆರವಾಗಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆ ಇಂತಹ ವಂಚನೆ ನಡೆಯಲು ಸಾಧ್ಯವಾಗದಂತೆ ಸರ್ಕಾರ ಪರಿಶೀಲನ ಪ್ರಕ್ರಿಯೆಯನ್ನು ಬಿಗಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಅನರ್ಹರು ರೈತರು: ಸರ್ಕಾರಿ ನೌಕರರು ವಕೀಲರು, ಆದಾಯ ತೆರಿಗೆ ಪಾವತಿಸುವರು ತಾಲೂಕು ಪಂಚಾಯತ್ ಸದಸ್ಯರುಗಳು ಮತ್ತು ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರುಗಳು.ತಿಂಗಳಿಗೆ 10,000 ಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು.

ಹಣ ಪಡೆದ ಅನರ್ಹರು ;
• ಆದಾಯ ತೆರಿಗೆ ಪಾವತಿಸುತ್ತಿರುವ 91,969 ರೈತರು-104.24 ಕೋಟಿ ರೂ ಸರ್ಕಾರದ ಬೊಕ್ಕಸಕ್ಕೆ ವಂಚನೆ.
• ಭೂಹಿಡುವಳಿದಾರರು -1,99,240 ರೈತರು-295.66 ಕೋಟಿ ರೂ ಸರ್ಕಾರದ ಬೊಕ್ಕಸಕ್ಕೆ ವಂಚನೆ
• ವಂಚಿಸಿ ಸ್ವಯಂ ನೊಂದಣಿ 1,06,416 ರೈತರು-39.44 ಕೋಟಿ ರೂ ಸರ್ಕಾರದ ಬೊಕ್ಕಸಕ್ಕೆ ವಂಚನೆ