Home ಕೃಷಿ Good News for Farmers: ರೈತರಿಗೆ ಖುಷಿಯ ವಿಚಾರ- ರಸಗೊಬ್ಬರ ಸಬ್ಸಿಡಿ ಕುರಿತು ಸರ್ಕಾರ ಕೊಡ್ತು...

Good News for Farmers: ರೈತರಿಗೆ ಖುಷಿಯ ವಿಚಾರ- ರಸಗೊಬ್ಬರ ಸಬ್ಸಿಡಿ ಕುರಿತು ಸರ್ಕಾರ ಕೊಡ್ತು ಬಿಗ್ ಅಪ್ಡೇಟ್ !

Good News for Farmers

Hindu neighbor gifts plot of land

Hindu neighbour gifts land to Muslim journalist

Good News for Farmers: ದೇಶದ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ರೈತಾಪಿ ವರ್ಗದ ಜನರಿಗೆ ಆರ್ಥಿಕ ನೆರವಿನ ಜೊತೆಗೆ ಕೃಷಿ ಸಂಬಂಧಿತ ಉಪಕರಣಗಳ ಪೂರೈಕೆ ಮಾಡಿ ಸಹಾಯ ಮಾಡುತ್ತಿದೆ. ಜೊತೆಗೆ ರಸಗೊಬ್ಬರ (Fertilizer) ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity) ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ ರೈತರಿಗೆ ಸಿಹಿಸುದ್ದಿ ಇಲ್ಲಿದೆ.

ರೈತರಿಗೆ ಖುಷಿಯ ವಿಚಾರ ಇಲ್ಲಿದೆ. ರಸಗೊಬ್ಬರ ಸಬ್ಸಿಡಿ ಕುರಿತು ಸರ್ಕಾರ ಬಿಗ್ ಅಪ್ಡೇಟ್ ಕೊಟ್ಟಿದೆ. ಹೌದು, ಈ ವರ್ಷದ ಅಕ್ಟೋಬರ್ 1 ರಿಂದ ಮುಂದಿನ ವರ್ಷದ ಮಾರ್ಚ್ 31 ರವರೆಗೆ ಅನ್ವಯವಾಗುವ ಫಾಸ್ಟಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ (Good News for Farmers) ಮೇಲೆ 2023-24 ರ ರಾಬಿ ಋತುವಿಗಾಗಿ ಪೋಷಕಾಂಶ ಆಧಾರಿತ ಸಬ್ಸಿಡಿ(NBS) ದರಗಳನ್ನು ಸರ್ಕಾರ ಅನುಮೋದಿಸಿದೆ.

ಇಂದು ಸಂಪುಟ ಸಭೆ ನಡೆದಿದ್ದು, ಈ ಸಭೆಯ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿ ಕಿಲೋಗ ಸಾರಜನಕಕ್ಕೆ 47.02 ರೂಪಾಯಿ, ರಂಜಕಕ್ಕೆ 20.82 ರೂಪಾಯಿ ಮತ್ತು ಪೊಟ್ಯಾಷ್‌ಗೆ 2.38 ರೂಪಾಯಿ ಪೋಷಕಾಂಶ ಆಧಾರಿತ ಸಬ್ಸಿಡಿ ನೀಡಲಾಗಿದೆ. ಪೋಷಕಾಂಶ ಆಧಾರಿತ ಸಬ್ಸಿಡಿಗೆ 22,303 ಕೋಟಿ ರೂಪಾಯಿ ವೆಚ್ಚ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: Water Tank Cleaning: ಮನೆಯ ಸಿಂಟ್ಯಾಕ್ಸ್ ಕ್ಲೀನ್ ಮಾಡಲು ಹರಸಾಹಸ ಪಡ್ತೀರಾ ?! ಈ ಸಿಂಪಲ್ ಟ್ರಿಕ್ಸ್ ಬಳಸಿ ಸ್ವಚ್ಛ ಮಾಡಿದ್ರೆ ಸ್ವಲ್ಪನೂ ಕೊಳೆ ಉಳಿಯಲ್ಲ !