Home ಕೃಷಿ CPCRI Vitla: ಅಡಿಕೆ ತೋಟದ pH ಸರಿಪಡಿಸೋದು ಹೇಗೆ? ವಿಟ್ಲ ಸಿಪಿಸಿಆರ್‌ಐ ನಿರ್ದೇಶಕರಿಂದ ಸಲಹೆ

CPCRI Vitla: ಅಡಿಕೆ ತೋಟದ pH ಸರಿಪಡಿಸೋದು ಹೇಗೆ? ವಿಟ್ಲ ಸಿಪಿಸಿಆರ್‌ಐ ನಿರ್ದೇಶಕರಿಂದ ಸಲಹೆ

CPCRI Vitla

Hindu neighbor gifts plot of land

Hindu neighbour gifts land to Muslim journalist

CPCRI Vitla: CPCRI ವಿಟ್ಲದ ನಿರ್ದೇಶಕರಾದ(Director) ಡಾ.ರಾಜೇಶರವರು ಡಾ.ಭವಿಷ್ಯ ಮತ್ತು ಡಾ. ಥವಪ್ರಕಾಶರೊಂದಿಗೆ ಮರ್ಕಂಜದ ಅಡಿಕೆ ತೋಟವೊಂದಕ್ಕೆ ಭೇಟಿ ನೀಡಿದ್ದರು. ಅವರ ಜೊತೆ, ತೋಟದ pH(Potential of Hydrogen) ಸರಿಪಡಿಸಲು ಸುಣ್ಣ(Lime), ಡೋಲೊಮೈಟ್ ಮತ್ತು ಮಿನ್‌ಶಕ್ತಿಗಳಲ್ಲಿ ಅಡಿಕೆ ತೋಟಕ್ಕೆ(Areca nut) ಯಾವುದು ಒಳ್ಳೆಯದು ಅಂತ ಪ್ರಶ್ನಿಸಲಾಯ್ತು.

ಸುಣ್ಣ ಅಥವಾ ಕುಮ್ಮಾಯ ಅತಿ ಶೀಘ್ರವಾಗಿ ಕರಗಿ ಮಣ್ಣಿನ pH ಬದಲಾಯಿಸುತ್ತದೆ. ಡೋಲೊಮೈಟ್ ನಿಧಾನವಾಗಿ ಕರಗುವಂತಹದ್ದು. ಆದ್ದರಿಂದ ಅದು ಮಣ್ಣಿನ phನ್ನು ನಿಧಾನವಾಗಿ ಬದಲಿಸುವಂತಹದ್ದು. ಮಿನ್‌ಶಕ್ತಿ ಡೋಲೋಮೈಟನ್ನೇ ಅಂಟು ಸೇರಿಸಿ ಗುಳಿಗೆಗಳನ್ನಾಗಿಸಿದ್ದು, ಕಣಗಳ ಗಾತ್ರ ಸಣ್ಣದಾದಷ್ಟೂ ಕರಗುವಿಕೆ ಶೀಘ್ರ. ದೊಡ್ಡದಾದಷ್ಟೂ ಕರಗುವಿಕೆ ನಿಧಾನ. ಆದ್ದರಿಂದ ಮಿನ್‌ಶಕ್ತಿ, ಡೋಲೋಮೈಟಿಗಿಂತಲೂ ನಿಧಾನವಾಗಿ ಕರಗುವಂತಹದ್ದು.

ಆದ್ದರಿಂದ ಯಾವ ಮಣ್ಣು ಅತಿ ಆಮ್ಲೀಯವೋ ಅಲ್ಲಿ ಸುಣ್ಣ ಅಥವಾ ಕುಮ್ಮಾಯದ ಬಳಕೆ ಸೂಕ್ತ. ಯಾವ ಮಣ್ಣು ಕಡಿಮೆ ಆಮ್ಲೀಯವೋ ಅಲ್ಲಿ ಡೋಲೊಮೈಟ್ ಬಳಕೆ ಸೂಕ್ತ. ಯಾವ ಮಣ್ಣು ಹೆಚ್ಚೂ ಕಡಿಮೆ ನ್ಯೂಟ್ರಲಿಗೆ ಹತ್ತಿರ ಇದೆಯೋ ಅಲ್ಲಿಗೆ ಮಿನ್‌ಶಕ್ತಿ‌ ಸೂಕ್ತ.
ನಿಮ್ಮ ಮಣ್ಣಿನ pH ಎಷ್ಟಿದೆ ಎಂಬುದರ ಮೇಲೆ ಯಾವುದನ್ನು ಬಳಸಬೇಕು ಎಂಬುದನ್ಬು ನಿರ್ಧರಿಸಬೇಕಾಗುತ್ತದೆ ಎಂದು ಮಾಹಿತಿ ಕೊಟ್ಟರು.