Home ಕೃಷಿ Agricultural Land: ಪ್ರಪಂಚದಲ್ಲೇ ಅತೀ ಹೆಚ್ಚು ಕೃಷಿ ಭೂಮಿ ಹೊಂದಿದ ದೇಶಗಳಿವು – ಭಾರತಕ್ಕೆ ಟಾಪ್...

Agricultural Land: ಪ್ರಪಂಚದಲ್ಲೇ ಅತೀ ಹೆಚ್ಚು ಕೃಷಿ ಭೂಮಿ ಹೊಂದಿದ ದೇಶಗಳಿವು – ಭಾರತಕ್ಕೆ ಟಾಪ್ 10 ಒಳಗೂ ಇಲ್ಲ ಸ್ಥಾನ !! ಹಾಗಿದ್ರೆ ಎಷ್ಟನೇ ಪ್ಲೇಸ್?

Agricultural Land
Image source: property panda

Hindu neighbor gifts plot of land

Hindu neighbour gifts land to Muslim journalist

Agricultural Land: ಜೀವನದಲ್ಲಿ ಆಹಾರ, ನೀರು, ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿ
ಕೃಷಿ ಪ್ರಪಂಚದಲ್ಲೇ ಹೆಚ್ಚಿನ ಮಾನ್ಯತೆ ಪಡೆದಿದೆ. ನಮ್ಮ ಭಾರತೀಯ ಜನಸಂಖ್ಯೆಯ ಸುಮಾರು 60% ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿಯು( Agricultural Land) ನಮಗೆ ಆಹಾರವನ್ನು ನೀಡುವುದಲ್ಲದೆ ದೇಶದ ಅಭಿವೃದ್ಧಿಗೆ ಸಹಾಯ ಮಾಡುವ ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಅದರಲ್ಲೂ ಹೆಚ್ಚು ಕೃಷಿಯೋಗ್ಯ ಭೂಮಿ ಹೊಂದಿರುವ ದೇಶಗಳು ಹೆಚ್ಚು ಸ್ವಾವಲಂಬಿಯಾಗಿವೆ. ಅವುಗಳು ಯಾವುದೆಂದು ನೋಡೋಣ.

ಸೌದಿ ಅರೇಬಿಯಾ:
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ. ಇಲ್ಲಿ ದೇಶದ 80.77% ಕೃಷಿ ಭೂಮಿಯಾಗಿದೆ (Agricultural Land) . ನೀರಿನ ಕೊರತೆಯ ನಡುವೆಯೂ ಈ ದೇಶ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ತಂತ್ರಜ್ಞಾನದಿಂದ ದಾಪುಗಾಲು ಹಾಕುತ್ತಿದೆ.

ದಕ್ಷಿಣ ಆಫ್ರಿಕಾ:
ಅತಿ ಹೆಚ್ಚು ಶೇಕಡಾವಾರು ಕೃಷಿ ಭೂಮಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ದೇಶದ 79.4% ಕೃಷಿ ಭೂಮಿಯಾಗಿದೆ. ಇಲ್ಲಿನ ಜನರು ಕೃಷಿ ಕ್ಷೇತ್ರದಲ್ಲಿ ಆಧುನಿಕ ವಿಧಾನಗಳನ್ನು ಅನುಸರಿಸುತ್ತಾರೆ.

ಬಾಂಗ್ಲಾದೇಶ:
ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ನಮ್ಮ ನೆರೆಯ ದೇಶ ಬಾಂಗ್ಲಾದೇಶವು ಸುಮಾರು 77.3% ಕೃಷಿ ಭೂಮಿಯನ್ನು ಹೊಂದಿದೆ. ಇಲ್ಲಿನ ಜನರು ಇನ್ನೂ ಬಡತನದಲ್ಲಿಯೇ ಇದ್ದಾರೆ. ಹೀಗಾಗಿ ಅನೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ.

ನೈಜೀರಿಯಾ:
ನಾಲ್ಕನೇ ಸ್ಥಾನದಲ್ಲಿರುವ ನೈಜೀರಿಯಾ 75.4% ಕೃಷಿ ಭೂಮಿಯನ್ನು ಹೊಂದಿದೆ. ಈ ದೇಶ ಬಡತನದಿಂದ ನರಳುತ್ತಿದೆ. ಹಾಗಾಗಿ ಇಲ್ಲಿ ಹೆಚ್ಚಿನ ಜನರು ಕೃಷಿಯನ್ನೇ ಮುಖ್ಯ ಆದಾಯದ ಮೂಲವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಮಂಗೋಲಿಯಾ:
ಈ ದೇಶದಲ್ಲೂ ಬಡತನವೂ ತುಂಬಾ ಹೆಚ್ಚಾಗಿದೆ. 72.3% ಕೃಷಿ ಭೂಮಿಯೊಂದಿಗೆ ಮಂಗೋಲಿಯಾ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇಲ್ಲಿ ಇಂದಿಗೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ.

ಉಕ್ರೇನ್:
ಉಕ್ರೇನ್ 71.3% ಕೃಷಿ ಭೂಮಿಯೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ರಷ್ಯಾದ ಯುದ್ಧದಿಂದಾಗಿ ಈ ಅಭಿವೃದ್ಧಿ ಹೊಂದಿದ ದೇಶವು ಈಗ ಆರ್ಥಿಕ ಸಂಕಷ್ಟದಲ್ಲಿದೆ.

ಯುನೈಟೆಡ್ ಕಿಂಗ್‌ಡಮ್ (ಯುಕೆ): ಯುನೈಟೆಡ್ ಕಿಂಗ್‌ಡಮ್ 71.2% ಕೃಷಿ ಭೂಮಿಯೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಬ್ರಿಟನ್ ಸುಧಾರಿತ ಕೃಷಿ ವಿಧಾನಗಳನ್ನು ಹೊಂದಿದೆ.

ಡೆನ್ಮಾರ್ಕ್:
ಡೆನ್ಮಾರ್ಕ್‌ನಲ್ಲಿ ಕೃಷಿಯು ಪ್ರಮುಖ ಉದ್ಯಮ ಕ್ಷೇತ್ರವಾಗಿದ್ದು, ದೇಶದ 60 ಪ್ರತಿಶತದಷ್ಟು ಆದಾಯ ಕೃಷಿಯಿಂದಲೇ ಬರುತ್ತಿದೆ ಅಂಕಿಅಂಶಗಳ ಪ್ರಕಾರ, ದೇಶವು 65.5% ಕೃಷಿ ಭೂಮಿಯೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ವೆಸ್ಟ್ ಬ್ಯಾಂಕ್ – ಗಾಜಾ:
ವೆಸ್ಟ್ ಬ್ಯಾಂಕ್ – ಗಾಜಾ ಸುಮಾರು 64.9% ಕೃಷಿ ಭೂಮಿಯನ್ನು ಹೊಂದಿದೆ. ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಇಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಐರ್ಲೆಂಡ್:
ಐರ್ಲೆಂಡ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಐರ್ಲೆಂಡ್ ಅಂದಾಜು 6.9 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಹೊಂದಿದೆ. ಇದರಲ್ಲಿ 63% ಅಥವಾ 4.40 ಮಿಲಿಯನ್ ಹೆಕ್ಟೇರ್ ಕೃಷಿಗೆ ಯೋಗ್ಯವೆಂದು ಗುರುತಿಸಲಾಗಿದೆ.

ಭಾರತ:
ಭಾರತದ ಗುಜರಾತ್, ಬಿಹಾರ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯಗಳು ಕೃಷಿಯಲ್ಲಿ ಹೊಸ ವಿಧಾನಗಳು ಮತ್ತು ಪ್ರಯೋಗಗಳೊಂದಿಗೆ ಕೃಷಿ ಮಾಡಲಾಗುತ್ತಿದೆ. ಆದರೆ ನಮ್ಮ ಭಾರತವು ಸುಮಾರು 60% ಕೃಷಿ ಭೂಮಿಯನ್ನು ಹೊಂದಿರುವ ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮನೆಯಲ್ಲಿ ಇಟ್ಟ ಅಕ್ಕಿಗೆ ಹುಳಗಳ ಕಾಟವೇ?! ಈ ಸುಲಭ ವಿಧಾನದಿಂದ ಸ್ವಚ್ಛ ಮಾಡಿ