Home Latest Sports News Karnataka Jay Shah: ಜಯ್ ಶಾ ಅಂದ್ರೆ ಮಹಿಳಾ ಕ್ರಿಕೆಟ್ ತಾರೆಯರಿಗೆ ಯಾಕಿಷ್ಟು ಪ್ರೀತಿ?

Jay Shah: ಜಯ್ ಶಾ ಅಂದ್ರೆ ಮಹಿಳಾ ಕ್ರಿಕೆಟ್ ತಾರೆಯರಿಗೆ ಯಾಕಿಷ್ಟು ಪ್ರೀತಿ?

Hindu neighbor gifts plot of land

Hindu neighbour gifts land to Muslim journalist

Jay Shah: : ಮುಂಬೈನ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದ ಮಹಿಳಾ ತಂಡವನ್ನು 52 ರನ್ ಗಳ ಅಂತರದಿಂದ ಸೋಲಿಸುವ ಮೂಲಕ ಚೊಚ್ಚಲ ವಿಶ್ವಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಬೆನ್ನಲ್ಲೇ ನಾಯಕಿ ಹರ್ಮನ್ ಪ್ರೀತ್ ಕೌರ್ ಐಸಿಸಿ ಅಧ್ಯಕ್ಷ ಜಯ್ ಶಾ ಕಾಲಿಗೆ ನಮಸ್ಕರಿಸಿದ್ದಕ್ಕೆ ಕೆಲವರು ಟೀಕಿಸಿದ್ದರು. ಆದರೆ ಮಹಿಳಾ ತಾರೆಯರಿಗೆ ಜಯ್ ಶಾ ಮೇಲೆ ಇಷ್ಟು ಗೌರವ ಇರುವುದಕ್ಕೂ ಕಾರಣವಿದೆ.

ಜೈಯ್ ಶಾ ಅವರು ಬಿಸಿಸಿಐನ ಕಾರ್ಯದರ್ಶಿಯಾಗಿದ್ದಾಗ ಭಾರತ ಮಹಿಳಾ ಕ್ರಿಕೆಟ್ ರಂಗದಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಡಬ್ಲ್ಯುಪಿಎಲ್ ಎಂಬ ಟೂರ್ನಿ ಯೋಜನೆ ಹಂತದಲ್ಲೇ ತುಂಬಾ ದಿನಗಳಿಂದ ಇತ್ತು. ಆದರೆ ಜಯ್ ಶಾ ಇದನ್ನು ಕಾರ್ಯರೂಪಕ್ಕೆ ತಂದರು. ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಷ್ಟು ವೇತನವಿರಲಿಲ್ಲ. ಆದರೆ ಜಯ್ ಶಾ ಈ ಅಸಮಾನತೆಯನ್ನು ನೀಗಿಸಿ ಪುರುಷ ಕ್ರಿಕೆಟಿಗರಷ್ಟೇ ವೇತನ ಮಹಿಳಾ ಕ್ರಿಕೆಟಿಗರಿಗೂ ಸಿಗುವಂತೆ ಮಾಡಿದರು. ಇನ್ನು, ಮಹಿಳಾ ಕ್ರಿಕೆಟ್ ಪಂದ್ಯಗಳಿಗೆ ಉಚಿತ ಟಿಕೆಟ್, ಕಡಿಮೆ ದರದ ಟಿಕೆಟ್ ಮಾಡುವ ಮೂಲಕ ಜನರನ್ನು ಮೈದಾನದತ್ತ ಸೆಳೆಯುವಲ್ಲಿ ಜಯ್ ಶಾ ಪಾತ್ರ ಪ್ರಮುಖವಾದುದು.

ಅಷ್ಟೇ ಅಲ್ಲ ಮಹಿಳಾ ಕ್ರಿಕೆಟಿಗರಿಗೆ ಸಾಕಷ್ಟು ಪಂದ್ಯಗಳೇ ಇರುತ್ತಿರಲಿಲ್ಲ. ಆದರೆ ಈಗ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ದೊಡ್ಡ ತಂಡಗಳ ಜೊತೆ ಉಭಯ ದೇಶಗಳ ಸರಣಿಗಳು ಪದೇ ಪದೇ ನಡೆಯುತ್ತಿರುತ್ತವೆ. ಈಗ ಮಹಿಳೆಯರ ಪಂದ್ಯವನ್ನೂ ಜನ ಮೈದಾನಕ್ಕೆ ಬಂದು ವೀಕ್ಷಿಸುವುದರ ಜೊತೆಗೆ ಆಪ್ ಗಳಲ್ಲೂ ದಾಖಲೆಯ ಪ್ರಮಾಣದಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೇ ಮಹಿಳಾ ತಾರೆಯರಿಗೆ ಜಯ್ ಶಾ ಮೇಲೆ ಎಲ್ಲಿಲ್ಲದ ಗೌರವವಿದೆ.