Home Latest Sports News Karnataka ಆರ್‌ಸಿಬಿ ಅಭಿಮಾನಿಗಳ ಪ್ರಶ್ನೆಗೆ ಬೇಸರದಿಂದ ಉತ್ತರ ನೀಡಿದ ಚಾಹಲ್ ; ನಿಜವಾಗಿ ಹರಾಜಿನಲ್ಲಿ ಆದದ್ದು ಏನು...

ಆರ್‌ಸಿಬಿ ಅಭಿಮಾನಿಗಳ ಪ್ರಶ್ನೆಗೆ ಬೇಸರದಿಂದ ಉತ್ತರ ನೀಡಿದ ಚಾಹಲ್ ; ನಿಜವಾಗಿ ಹರಾಜಿನಲ್ಲಿ ಆದದ್ದು ಏನು ?

Hindu neighbor gifts plot of land

Hindu neighbour gifts land to Muslim journalist

ಐಪಿಎಲ್ 2022ರ (IPL 2022) ಮೆಗಾ ಹರಾಜಿಗೂ ಮುನ್ನ ಪ್ರಕಟಿಸಿದ ರಿಟೇನ್ ಆಟಗಾರರ ಪಟ್ಟಿಯಲ್ಲಿ ಕಂಡುಬಂದ ಅತಿ ದೊಡ್ಡ ಶಾಕಿಂಗ್ ವಿಷಯ ಎಂದರೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್​ರನ್ನು  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದ್ದು.! ಅಭಿಮಾನಿಗಳಿಗೆ ಈ ಬಗ್ಗೆ ಹಲವು ಪ್ರಶ್ನೆಗಳಿದ್ದವು. ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ಕಳೆದ 8 ವರ್ಷಗಳಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿದ್ದ ಭಾರತದ ಅಗ್ರ ಸ್ಪಿನ್ನರ್​ ಯಜ್ವೇಂದ್ರ ಚಹಾಲ್‌ರನ್ನು ಹರಾಜಿನಲ್ಲಿಯೂ ಆರ್‌ಸಿಬಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವನ್ನೂ ನಡೆಸಿರಲಿಲ್ಲ. ಈ ಬೇಸರವನ್ನು ಚಾಹಲ್ ಅಭಿಮಾನಿಗಳ ಎದುರು ಹಂಚಿಕೊಂಡಿದ್ದಾರೆ. ಅವರ ಮಾತು ಇಲ್ಲಿದೆ ಓದಿ ;

ನಾನು ಆರ್‌ಸಿಬಿ ತಂಡದೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿದ್ದೇನೆ. ಆರ್‌ಸಿಬಿ ಹೊರತುಪಡಿಸಿ ಬೇರೆ ತಂಡದ ಪರವಾಗಿ ಆಡುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಜನರು ಈಗಲೂ ನನ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾಕೆ ನೀವು ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಹಣವನ್ನು ಕೇಳಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಆದರೆ ಸತ್ಯ ಬೇರೆಯೇ ಇದೆ.

ಸತ್ಯ ಏನೆಂದರೆ ಆರ್‌ಸಿಬಿ ನಿರ್ದೇಶಕ ಮೈಕ್ ಹಸನ್ ನನಗೆ ಕರೆ ಮಾಡಿ, ಯುಜಿ ಈ ಬಾರಿ ನಾವು ಮೂರು ರೀಟೆನ್ಶನ್ ಮಾತ್ರವೇ ಮಾಡಿಕೊಳ್ಳುತ್ತಿದ್ದೇವೆ(ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್) ಎಂದಿದ್ದರು. ಅವರು ನನ್ನಲ್ಲಿ ರೀಟೈನ್ ಆಗಲು ಬಯಸುತ್ತೀರಾ ಎಂದಾಗಲಿ ಅಥವಾ ಅವರು ರೀಟೈನ್ ಮಾಡಲು ಬಯಸುವುದಾಗಿ ಯಾವುದೇ ಮಾತನ್ನು ನನ್ನಲ್ಲಿ ಕೇಳಲಿಲ್ಲ. 

ನಾನು ಆರ್‌ಸಿಬಿಯಲ್ಲಿ ಯಾವುದೇ ಹಣದ ಬೇಡಿಕೆಯನ್ನೂ ಇಟ್ಟಿಲ್ಲ ಹಾಗೂ ಅವರೂ ನನ್ನಲ್ಲಿ ಯಾವುದೇ ಆಫರ್‌ಅನ್ನು ಕೂಡ ನನ್ನ ಮುಂದೆ ಇಡಲಿಲ್ಲ. ಆದರೆ ನಾನು ಯಾವಾಗಲೂ ಆರ್‌ಸಿಬಿ ಅಭಿಮಾನಿಗಳಿಗೆ ನಿಷ್ಠಾವಂತನಾಗಿರುತ್ತೇನೆ. ಆರ್ಸಿಬಿ ಅಭಿಮಾನಿಗಳನ್ನು ಬಹಳ ಇಷ್ಟ ಪಡುತ್ತೇನೆ”. ಇದು ನನಗೆ ಹೊಸ ಪ್ರಯಾಣವಾಗಿದ್ದು ಈ ಪ್ರಯಾಣದ ಬಗ್ಗೆ ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ಎಲ್ಲವೂ ಈ ಹಿಂದಿನಂತೆಯೇ ಇರಲಿದ್ದು ಜರ್ಸಿ ಮಾತ್ರವೇ ಬದಲಾಗಲಿದೆ. ಹರಾಜಿನಲ್ಲಿ ಆರ್‌ಆರ್ ತಂಡ ನನ್ನ ಮೇಲೆ ನಂಬಿಕೆಯಿಟ್ಟು ಬಿಡ್ ಮಾಡಿದೆ”  ಎಂದು ಬೇಸರದಿಂದ ಹೇಳಿದ್ದಾರೆ ಯುಜುವೇಂದ್ರ ಚಾಹಲ್.