Home Latest Sports News Karnataka ಕುಡಿದ ಮತ್ತಿನಲ್ಲಿದ್ದರಾ ಚಹಲ್ -ನೆಹ್ರಾ? ಇವರು ಮಾಡಿದ್ದಾದರೂ ಏನುಗೊತ್ತೆ

ಕುಡಿದ ಮತ್ತಿನಲ್ಲಿದ್ದರಾ ಚಹಲ್ -ನೆಹ್ರಾ? ಇವರು ಮಾಡಿದ್ದಾದರೂ ಏನುಗೊತ್ತೆ

Hindu neighbor gifts plot of land

Hindu neighbour gifts land to Muslim journalist

ಮೊನ್ನೆಯಷ್ಟೇ ಮುಕ್ತಾಯವಾದ ಐಪಿಎಲ್ 2022 ರ  ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಸೀಸನ್​ನಲ್ಲೇ ಐಪಿಎಲ್​ ಚಾಂಪಿಯನ್ ಆದ ಕಾರಣ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡದ ಆಟಗಾರರೊಂದಿಗೆ ರಾಜಸ್ಥಾನ್ ರಾಯಲ್ಸ್ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಕಾಣಿಸಿಕೊಂಡಿದ್ದರು.

ಪಾರ್ಟಿಯ ಬಳಿಕ ಗುಜರಾತ್ ತಂಡ ಕೋಚ್ ಆಶಿಶ್ ನೆಹ್ರಾ ಹಾಗೂ ಚಹಾಲ್ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಯುಜ್ವೇಂದ್ರ ಚಹಾಲ್ ಮತ್ತು ಆಶಿಶ್ ನೆಹ್ರಾ ಸಂಭಾಷಣೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಅಲ್ಲದೆ ಇಬ್ಬರೂ ಅಮಲಿನಲ್ಲಿರುವಂತೆ ಭಾಸವಾಗುತ್ತೆ.

ಚಾಹಲ್ ತೂರಾಡುತ್ತಾ ಅಭಿಮಾನಿಗೆ ಸೆಲ್ಫೀ ಕೊಟ್ಟು ಪತ್ನಿ ಜೊತೆ ಕಾರಿನಲ್ಲಿ ತೆರಳಲು ಮುಂದಾದಾಗ ಬಳಿ ಬರುವ ನೆಹ್ರಾ ಬಸ್ ನಲ್ಲಿ ಬರುವಂತೆ ಒತ್ತಾಯಿಸುತ್ತಾರೆ. ಆಗ ಚಾಹಲ್ ನಾನು ಬರಲ್ಲ, ಪತ್ನಿ ಜೊತೆ ಕಾರಿನಲ್ಲಿ ತೆರಳುತ್ತೇನೆ. ಪತ್ನಿಯನ್ನು ಎಲ್ಲಿ ಬಿಡಲಿ ಎನ್ನುತ್ತಾರೆ. ಇದಕ್ಕೆ ಪತ್ನಿಯನ್ನೂ ಬಸ್ ನಲ್ಲಿ ಕರೆದುಕೊಂಡು ಬಾ ಎಂದು ನೆಹ್ರಾ ಹೇಳುತ್ತಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ಈ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರೂ ಕುಡಿದು ಮೈಮರೆತಿದ್ದಾರೆ. ಎಲ್ಲರೂ ಸೋತ ದುಃಖದಲ್ಲಿ ಮನೆ ಸೇರಿದ್ದರೆ ಚಹಾಲ್ ಗುಜರಾತ್ ಟೈಟಾನ್ಸ್ ಜೊತೆ ಕುಡಿದು ಪಾರ್ಟಿ ಮಾಡಿದ್ದಾರೆ. ಚಹಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಎಂಬುದನ್ನೂ ಕೂಡ ನೆಹ್ರಾ ಮರೆತಿದ್ದಾರೆ ಎಂಬಿತ್ಯಾದಿ ಕಾಮೆಂಟ್​ಗಳ ಮೂಲಕ ಅನೇಕರು ಪ್ರತಿಕ್ರಿಯಿಸಿದ್ದಾರೆ.

ಅಬೆ ತು ಇಧಾರ್ ಬಸ್ ಮೇ ಆ ( ನೀ ನನ್ನೊಂದಿಗೆ ಬಸ್​ನಲ್ಲಿ ಬಾ)’ ಎಂದು ನೆಹ್ರಾ ಚಹಾಲ್​ಗೆ ಹೇಳಿದಾಗ, ‘ಬಸ್ ಮೇ ನಹಿ ಜಾನಾ ಮುಝೆ (ನಾನು ಬಸ್‌ನಲ್ಲಿ ಬರಲ್ಲ)’ ಎಂದು ಉತ್ತರಿಸಿದರು. ಅಲ್ಲದೆ ‘ಬಿವಿ ಕೊ ಕಹಾ ಚೋಡ್​ದು ಮೈನ್ (ನಾನು ನನ್ನ ಹೆಂಡತಿಯನ್ನು ಎಲ್ಲಿ ಬಿಡಲಿಪಾ)’, ನೆಹ್ರಾ ಅವರನ್ನು ಕೇಳಿದರು. ಇದೇ ವೇಳೆ ‘ಬಿವಿ ಭಿ ಆಯೇಗಿ ಹುಮಾರೆ ಸಾಥ್ ಬಸ್ ಮೇ (ಅವಳು ಸಹ ನಮ್ಮೊಂದಿಗೆ ಬಸ್‌ನಲ್ಲಿ ಬರುತ್ತಾಳೆ)’ ಎಂದು ನೆಹ್ರಾ ಉತ್ತರಿಸಿದರು.