Home Karnataka State Politics Updates Pratap Simha: ” ಭಯ – ಆ ಭಯ ಇರಬೇಕು ಸಿದ್ದರಾಮಯ್ಯನವರೇ ” ಸಿದ್ದು ಕಾಲೆಳೆದ...

Pratap Simha: ” ಭಯ – ಆ ಭಯ ಇರಬೇಕು ಸಿದ್ದರಾಮಯ್ಯನವರೇ ” ಸಿದ್ದು ಕಾಲೆಳೆದ ಪ್ರತಾಪ್ ಸಿಂಹ !

Pratap Simha
Image source: Wikimedia commons

Hindu neighbor gifts plot of land

Hindu neighbour gifts land to Muslim journalist

Pratap Simha: ಮತ್ತೆ ಸಿದ್ದರಾಮಯ್ಯನವರ ಮೇಲೆ ಸಂಸದ ಪ್ರತಾಪ್ ಸಿಂಹಗೆ (Pratap Simha) ಸಕತ್ ಲವ್ ಜಾಸ್ತಿ ಆಗಿದೆ. ಅದೇ ಖುಷಿಯಲ್ಲಿ ಸಿದ್ದು ಕಾಲೆಳೆದಿದ್ದಾರೆ ಪ್ರತಾಪ್.

ಬಹಳ ಜಿದ್ದಾಜಿದ್ದಿನ ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಕಣವೆಂದೇ ಬಿಂಬಿತವಾಗಿರುವ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಸೋಮಣ್ಣ ಇಬ್ಬರೂ ಈಗಾಗಲೇ ಬಿರುಸಿನ ಸಂಚಾರ ಆರಂಭಿಸಿದ್ದಾರೆ.

” ತಾವು ವರುಣಾದಲ್ಲೇ ಚುನಾವಣೆ ನಿಲ್ಲುವುದಾಗಿಯೂ, ಮತ್ತು ತಾವು ಚುನಾವಣೆಗೆ ನಾಮಪತ್ರ ಸಲ್ಲಿಸಲಷ್ಟೇ ಬರುತ್ತೇನೆ ಎಂದು ಹೇಳಿಹೋಗಿದ್ದರು ಸಿದ್ದರಾಮಯ್ಯ. ಯಾವಾಗ ಬಿಜೆಪಿ ಸೋಮಣ್ಣನವರ ಹೆಸರನ್ನು ವರುಣಾ ಕ್ಷೇತ್ರಕ್ಕೆ ಘೋಷಣೆ ಮಾಡಿತೋ, ಆಗ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಸುವ ಎರಡು ದಿನ ಮೊದಲೇ ಓಡಿ ಬಂದಿದ್ದಾರೆ.” ಎಂದು ಕಿಚಾಯಿಸಿದ್ದಾರೆ ಪ್ರತಾಪ್ ಸಿಂಹ.

” ಸಿದ್ದರಾಮಯ್ಯ ಸರ್ ಇವತ್ತು ಮತ್ತೆ ಬಂದಿದ್ದಾರೆ
ಮುಂದಿನವಾರ ಅವರು ಇಲ್ಲೇ ಇರುತ್ತಾರಂತೆ: ಅದು ಭಯ – ಆ ಭಯ ಇರಬೇಕು ಸಿದ್ದರಾಮಯ್ಯನವರೆ !!! ” ಎಂದು ಸಂಸದ ಪ್ರತಾಪ್ ಸಿಂಹರವರು ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ಈ ಸಂಬಂಧ ತಮ್ಮ ಟ್ವಿಟ್ಟರ್ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರ ವರುಣಾ ಪ್ರವಾಸದ ಶೆಡ್ಯೂಲ್ ಹಂಚಿಕೊಂಡಿದ್ದಾರೆ.

pic.twitter.com/BnIqPhy1eb

— Pratap Simha (@mepratap) April 22, 2023

 

ಇದನ್ನು ಓದಿ: Smallest Countries : ಒಂದು ಏರಿಯಾಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರೋ ದೇಶಗಳಿವು!ಇಲ್ಲಿನ ಜನಸಂಖ್ಯೆ, ವಿಶೇಷತೆ ಬಗ್ಗೆ ಕೇಳಿದ್ರೆ ಖಂಡಿತಾ ಹುಬ್ಬೇರುತ್ತೆ!