Home Karnataka State Politics Updates ಹಿಜಾಬ್ ಮುಟ್ಟಲು ಬಂದವರ ಕೈ ಕತ್ತರಿಸುತ್ತೇವೆ!!! ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಬೇಗಂ ಹೇಳಿಕೆ

ಹಿಜಾಬ್ ಮುಟ್ಟಲು ಬಂದವರ ಕೈ ಕತ್ತರಿಸುತ್ತೇವೆ!!! ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಬೇಗಂ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ವಿವಾದಕ್ಕೆ ಈಗ ಎಲ್ಲಾ ಕಡೆಯಿಂದ ಎಲ್ಲಾ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಹಲವಾರು ಮಂದಿ ಈ ಕುರಿತು ತಮ್ಮ ಮನಸ್ಸಿಗೆ ಬಂದ ವಿಶ್ಲೇಷಣೆ ನೀಡುತ್ತಿದ್ದಾರೆ. ಈಗ ಇದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಬೇಗಂ ಒಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅದೇನೆಂದರೆ ‘ ಹೆಣ್ಣುಮಕ್ಕಳ ಘನತೆಯೊಂದಿಗೆ ಆಟವಾಡಲು ಬಂದರೆ ಅವರು ಝಾನ್ಸಿ ರಾಣಿ, ರಜಿಯಾ ಸುಲ್ತಾನ್ ರಂತೆ ಹಿಜಾಬ್ ಮುಟ್ಟಲು ಬಂದ ಕೈಗಳನ್ನು ಕತ್ತರಿಸಲು ಸಮಯ ತೆಗೆದುಕೊಳ್ಳುವುದಿಲ್ಲ. ಯಾವುದೇ ಸರಕಾರ ಅಧಿಕಾರದಲ್ಲಿರಲಿ ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು’ ಎಂದು ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ಅಲಿಗಢ ಮುಸ್ಲಿ ವಿವಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ.

ಹಿಜಾಬ್ ಅನ್ನೋದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಅದನ್ನು ಇಂದಿನ ಕಾಲದ ರಾವಣರು ನಾಶ ಮಾಡೋದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಭಾರತದ ಮಹಿಳೆಯರ ಆತ್ಮಸಮ್ಮಾನದ ದೌರ್ಜನ್ಯ ನಡೆಯುತ್ತಿದೆ. ಭಾರತ ವಿವಿಧತೆಯ ದೇಶ. ತಲೆಗೆ ಕಟ್ಟುವ ಪೇಟ, ನಾಮ, ಹಿಜಬ್ ಇದೆಲ್ಲಾ ಸಂಸ್ಕೃತಿಯ ಭಾಗ. ಇಂಥ ದೇಶದಲ್ಲಿರುವ ಈಗಿನ ಕಾಲದ ರಾವಣರು ನಮ್ಮ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.