Home Karnataka State Politics Updates Alcohol price hike: ಬಿಯರ್‌ ಬಾಟಲ್‌ ಗೆ 140 ರೂನಷ್ಟು ಹೆಚ್ಚಳ: ಹೆಚ್.ವಿಶ್ವನಾಥ್‌

Alcohol price hike: ಬಿಯರ್‌ ಬಾಟಲ್‌ ಗೆ 140 ರೂನಷ್ಟು ಹೆಚ್ಚಳ: ಹೆಚ್.ವಿಶ್ವನಾಥ್‌

Hindu neighbor gifts plot of land

Hindu neighbour gifts land to Muslim journalist

Alcohol price hike: ಈ ಮೊದಲು 130 ರೂ. ಇದ್ದ ಬಿಯರ್‌ ಬಾಟಲ್‌ ಬೆಲೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಆಳ್ವಿಕೆ ಬಂದ ನಂತರ ಬಿಯರ್ ಬೆಲೆ 270 ರೂ.ಗಳಿಗೆ ಏರಿಕೆಯಾಗಿದೆ (Alcohol price hike) . ಇದರಿಂದ ಏನು ಅರ್ಥ ಆಗುತ್ತಿದೆ ಎಂದರೆ ಗಂಡನಿಗೆ ಕುಡಿಸಿ ಹೆಂಡತಿಗೆ ಗ್ಯಾರಂಟಿ ಕೊಡುವುದಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಂಎಲ್‌ಸಿ ಹೆಚ್.ವಿಶ್ವನಾಥ್‌ ಟಾಂಗ್ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಕಾಂಗ್ರೆಸ್ ಗ್ಯಾರಂಟಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್ ಅವರು, ಇಂತಹ ಅನವಶ್ಯಕ ಗ್ಯಾರಂಟಿ ಬದಲಾಗಿ ಮಕ್ಕಳ ಶಿಕ್ಷಣಕ್ಕಾಗಿ 1 ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡಬಹುದಿತ್ತು. ಉಚಿತ ಆರೋಗ್ಯ ತಪಾಸಣೆ ಕೊಡಬಹುದಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಇಷ್ಟ ಬಂದಂತೆ ತೋಚಿದ್ದನ್ನು ಮಾಡಿದ್ದಾರೆ. ಅದು ಜನರಿಗೆ ಬೇಕಾ? ಬೇಡವಾ? ಎಂಬುವುದನ್ನು ಯೋಚಿಸಿಲ್ಲ. ಈ ಗ್ಯಾರಂಟಿ ನಷ್ಟ ಬರಿಸಲು ಒಂದು ಬಿಯರ್ ಬಾಟಲು 130 ರೂ. ಇದ್ದಿದ್ದು 270 ರೂ. ಆಗಿದೆ. ಒಟ್ಟಿನಲ್ಲಿ ಗಂಡನಿಗೆ ಎಣ್ಣೆ ಕುಡಿಸಿ, ಹೆಂಡತಿಗೆ ಗ್ಯಾರಂಟಿ ಕೊಡುವುದಾ? ನಿಮಗೆ ಗ್ಯಾರಂಟಿ ಕೇಳಿದ್ದು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

ಈ ಗ್ಯಾರಂಟಿ ಬಗ್ಗೆ, ಒಂದು ಸಂಸಾರಕ್ಕೆ ಏನು ಸಮಸ್ಯೆ ಇದೆ? ಎನ್ನುವುದನ್ನು ತಿಳಿದು ಮೊದಲು ಅದನ್ನು ಬಗೆಹರಿಸಬೇಕಿದೆ. ದೇವರಾಜ ಅರಸು ಅಕ್ಕಿ ಬದಲಾಗಿ ಅಕ್ಕಿ ಬೆಳೆಯುವ ಭೂಮಿ ಕೊಟ್ಟಿದ್ದರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆಯ ನಿರ್ಣಯ ಒಳ್ಳೆಯದಲ್ಲ ಎಂದು ತಿಳಿ ಹೇಳಿದ್ದೆ ಆದ್ರೆ ಅವರು ಕೇಳಲಿಲ್ಲ.