Home Karnataka State Politics Updates Priyanka Gandhi Vadra: 50% ಕಮಿಷನ್ ಆರೋಪ ತಂದಿಟ್ಟ ಸಂಕಟ, ಪ್ರಿಯಾಂಕ ಗಾಂಧಿ ಮೇಲೆ ಬಿತ್ತು...

Priyanka Gandhi Vadra: 50% ಕಮಿಷನ್ ಆರೋಪ ತಂದಿಟ್ಟ ಸಂಕಟ, ಪ್ರಿಯಾಂಕ ಗಾಂಧಿ ಮೇಲೆ ಬಿತ್ತು FIR !

Priyanka Gandhi Vadra
The sunday guardian

Hindu neighbor gifts plot of land

Hindu neighbour gifts land to Muslim journalist

Priyanka Gandhi Vadra: ಬಿಜೆಪಿ (Bjp) ವಿರುದ್ಧ 50% ಕಮಿಷನ್ ಆರೋಪದ ಹಿನ್ನೆಲೆ ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು, ಮಧ್ಯಪ್ರದೇಶದ ಬಿಜೆಪಿ (Madhya Pradesh BJP) ವಿರುದ್ಧ 50% ಕಮಿಷನ್ (Commission) ಆರೋಪ ಮಾಡಿರುವ ಪ್ರಿಯಾಂಕಾ ಗಾಂಧಿ, ಸಂಸದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ಟ್ವಿಟ್ಟರ್ ಖಾತೆಗಳ ಹ್ಯಾಂಡ್ಲರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಿಯಾಂಕಾ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿರುವ ಪೋಸ್ಟ್ ನಲ್ಲಿ, ಮಧ್ಯಪ್ರದೇಶದ ಗುತ್ತಿಗೆದಾರರ ಒಕ್ಕೂಟ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಅವರು 50% ಕಮಿಷನ್ ಪಾವತಿಸಿದ ನಂತರವೇ ಪಾವತಿಯನ್ನು ಸ್ವೀಕರಿಸುತ್ತಾರೆ ಎಂದು ದೂರಿದ್ದರು. ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರ 40% ಕಮಿಷನ್ ಸಂಗ್ರಹಿಸುತ್ತಿತ್ತು. ಕರ್ನಾಟಕದ ಜನರು 40% ಕಮಿಷನ್ ಸರ್ಕಾರವನ್ನು ಕಿತ್ತೊಗೆದಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಭ್ರಷ್ಟಾಚಾರದ ತನ್ನದೇ ದಾಖಲೆಯನ್ನು ಮುರಿದಿದೆ. ಈಗ ಮಧ್ಯಪ್ರದೇಶದ ಜನರು 50% ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ ಎಂದು ಬರೆದಿದ್ದರು ಎನ್ನಲಾಗಿದೆ.

ಎಕ್ಸ್‌ನಲ್ಲಿ (ಟ್ವಿಟರ್) ಜ್ಞಾನೇಂದ್ರ ಅವಸ್ತಿ ಎಂಬ ವ್ಯಕ್ತಿಯ ಹೆಸರನ್ನು ಹೊಂದಿರುವ ನಕಲಿ ಪತ್ರವನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ಬಿಜೆಪಿ ಕಾನೂನು ಸೆಲ್ ಸಂಚಾಲಕ ನಿಮೇಶ್ ಪಾಠಕ್ ದೂರು ನೀಡಿದ್ದಾರೆ ಎನ್ನಲಾಗಿದೆ‌. ಪತ್ರದಲ್ಲಿ 50% ಕಮಿಷನ್ ನೀಡುವಂತೆ ರಾಜ್ಯದ ಗುತ್ತಿಗೆದಾರರಿಗೆ ಕೇಳಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Viral News: 14 ರ ಹುಡುಗಿಯ ಮುಂದೆ ವಿಮಾನದಲ್ಲಿ ವೈದ್ಯನ ಹಸ್ತ ಮೈಥುನ ! ಹೊದ್ದುಕೊಂಡು ಬೆಡ್ ಶೀಟ್ ಕಳಚಿ ಬಿದ್ದಾಗ…..!!!