Home Karnataka State Politics Updates ಕೇಂದ್ರಾಡಳಿತ ಪ್ರದೇಶ ಡಿಯು ದಾಮನ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, 13 ರಲ್ಲಿ 13...

ಕೇಂದ್ರಾಡಳಿತ ಪ್ರದೇಶ ಡಿಯು ದಾಮನ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, 13 ರಲ್ಲಿ 13 ಬಿಜೆಪಿ ಜೇಬಿಗೆ !

Hindu neighbor gifts plot of land

Hindu neighbour gifts land to Muslim journalist

ದಿಯು ಮತ್ತು ದಮನ್‌ಗಳ ಪೈಕಿ ದಿಯು ಮುನ್ಸಿಪಲ್ ಚುನಾವಣೆಯಲ್ಲಿ ಭರ್ಜರಿ ಸಕ್ಸಸ್ ಪಡೆದಿದೆ ಬಿಜೆಪಿ. ಕೌನ್ಸಿಲ್‌ಗೆ ಇದೇ 7ರಂದು ಚುನಾವಣೆ ನಡೆದಿತ್ತು. ಅಚ್ಚರಿಯ ರೀತಿಯಲ್ಲಿ ಚುನಾವಣೆ ನಡೆದ ಒಟ್ಟೂ 13 ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕಗೆ ಹಾಕಿಕೊಂಡು, ಕ್ಲೀನ್ ಸ್ವೀಪ್ ಮಾಡಿದೆ. ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗದೇ ಭಾರಿ ಮುಖಭಂಗ ಅನುಭವಿಸಿದೆ.

ಚುನಾವಣೆ ಇಲ್ಲದೆಯೇ ಬಿಜೆಪಿ 6 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಆದರೆ, ಉಳಿದ ಏಳು ಸ್ಥಾನಕ್ಕೆ ಜುಲೈ 7 ರಂದು ಚುನಾವಣೆ ನಡೆದು, ಈಗ ಫಲಿತಾಂಶ ಹೊರಬಿದ್ದಿದೆ. ಒಂದೂವರೆ ದಶಕದ ನಂತರ ಕೌನ್ಸಿಲ್ ಅಧಿಕಾರವನ್ನು ಬಿಜೆಪಿ ಪಾಲಾಗಿದೆ. ಇಷ್ಟೇ ಅಲ್ಲದೇ ಎಲ್ಲಾ ಕ್ಷೇತ್ರಗಳನ್ನು ಒಂದೇ ಪಕ್ಷ ಗೆಲ್ಲುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ.

ದಿಯು ಮತ್ತು ದಮನ್‌ಗಳ ಮತದಾರರು ತುಷ್ಟಿಕರಣ ರಾಜಕಾರಣವನ್ನು ತಿರಸ್ಕರಿಸಿ ಅಭಿವೃದ್ಧಿಯ ರಾಜಕೀಯವನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಿ ಮತ್ತಷ್ಟು ಅಭಿವೃದ್ಧಿಗೊಳಿಸಲು ಸಹಕರಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳು ಎಂದು ಡಿಎನ್ಎಚ್ ಮತ್ತು ದಮನ್-ದಿಯು ಬಿಜೆಪಿ ಎ ರಾಜ್ಯಾಧ್ಯಕ್ಷ ದೀಪೇಶ್ ತಾಂಡೇಲ್ ಹೇಳಿದ್ದಾರೆ

ಅರುಣಾಚಲ ಪ್ರದೇಶದ ಪಂಚಾಯಿತಿಗಳಿಗೆ ಇದೇ 12ರಂದು ಉಪಚುನಾವಣೆ ನಡೆಯಲಿ ಕುತೂಹಲದ ಸಂಗತಿ ಎಂದರೆ 130 ಪಂಚಾಯಿತಿಗಳಲ್ಲಿ ಇದಾಗಲೇ 102 ಅವಿರೋಧವಾಗಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನು 28 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಬೇಕಿದೆ.