Home Breaking Entertainment News Kannada Rakhi Sawant: ರಾಹುಲ್ ಗಾಂಧಿ ಪ್ರಧಾನಿ ಆಗಬೇಕಾ ? ಹೀಗೆ ಮಾಡಿ ಸಾಕು – ರಾಖಿ...

Rakhi Sawant: ರಾಹುಲ್ ಗಾಂಧಿ ಪ್ರಧಾನಿ ಆಗಬೇಕಾ ? ಹೀಗೆ ಮಾಡಿ ಸಾಕು – ರಾಖಿ ಸಾವಂತ್ ಕೊಟ್ಳು ಬ್ಯೂಟಿಫುಲ್ ಟಿಪ್ಸ್ !

Hindu neighbor gifts plot of land

Hindu neighbour gifts land to Muslim journalist

Rakhi Sawant: ಬಿಟೌನ್‌ ಮಾದಕ ಚೆಲುವೆಯೆಂದೇ ಖ್ಯಾತಿ ಪಡೆದ ರಾಖಿ ಸಾವಂತ್‌ ಅವರು ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ತಾನು ಮದುವೆಯಾಗಿದ್ದ ಮೈಸೂರು ಮೂಲದ ಆದಿಲ್‌ ತನಗೆ ಮೋಸ ಮಾಡಿದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಹೇಳಿಕೊಂಡಿದ್ದು ಜೊತೆಗೆ ಜೈಲಿಗೆ ಕಳುಹಿಸಿದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ತನ್ನ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಇದೀಗ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ (Rahul Gandhi) ಪ್ರಧಾನಿ ಆಗಲು ಬ್ಯೂಟಿಫುಲ್ ಟಿಪ್ಸ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಸಾಕಷ್ಟು ಜನರು ಹೆಚ್ಚಿನ ಹೆಸರು ಗಳಿಸಿದ್ದಾರೆ. ಬಿಗ್’ಬಾಸ್ ಮನೆಯಿಂದ ಹೊರಬಂದ ನಂತರ ನಟ-ನಟಿಯರಿಗೆ ಒಳ್ಳೆ ಒಳ್ಳೆ ಸಿನಿಮಾ ಆಫರ್ ಬಂದಿದೆ. ಕೆಲವರು ಜನರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲ ರಾಖಿ ಸಾವಂತ್’ಗೂ ಹೆಚ್ಚು ಖ್ಯಾತಿ ಕೊಟ್ಟಿದ್ದು ಬಿಗ್​ಬಾಸ್​.

ಹಾಗಾಗಿ ರಾಹುಲ್​ ಗಾಂಧಿಯವರು ಬಿಗ್​ಬಾಸ್​ಗೆ (Bigg Boss) ಒಮ್ಮೆ ಹೋಗಬೇಕು. ರಾಹುಲ್​ ಗಾಂಧಿಯವರು ಬಿಗ್​ಬಾಸ್​ ಮನೆಯೊಳಕ್ಕೆ ಹೋದರೆ ಅವರ ಕೀರ್ತಿ ಹೆಚ್ಚುತ್ತದೆ. ಅವರು ಪ್ರಧಾನಿಯಾಗುತ್ತಾರೆ ಎಂದಿದ್ದಾರೆ ರಾಖಿ ಸಾವಂತ್. ಸದ್ಯ ರಾಹುಲ್​ ಗಾಂಧಿಯವರು ಪ್ರಧಾನಿ ಪಟ್ಟ ಏರಲು ರಾಖಿ ಸಾವಂತ್​ ಕೊಟ್ಟ ಟಿಪ್ಸ್ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

 

ಇದನ್ನು ಓದಿ: Direct contact of CM: ಈಗ ಯಾರೇ ಬೇಕಿದ್ರೂ ಸಿಎಂ ಸಿದ್ದರಾಮಯ್ಯನವರನ್ನು ನೇರ ಸಂಪರ್ಕಿಸಬಹುದು, ಹೇಗೆ ಅಂತೀರಾ ?!