Home Karnataka State Politics Updates Pramod Muthalik: ಜಮೀರ್‌ನನ್ನು ಗಡಿಪಾರು ಮಾಡೋ ಬದಲು ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್...

Pramod Muthalik: ಜಮೀರ್‌ನನ್ನು ಗಡಿಪಾರು ಮಾಡೋ ಬದಲು ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್ ಆಕ್ರೋಶ

Screenshot

Hindu neighbor gifts plot of land

Hindu neighbour gifts land to Muslim journalist

Pramod Muthalik: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರು ಚಿಕ್ಕಮಗಳೂರಿನಲ್ಲಿ (Chikkamagaluru) ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ಮಾತನಾಡಿ, ಸಚಿವ ಜಮೀರ್ ಅಹಮದ್‍ರನ್ನು (Zameer Ahmed) ಗಡಿಪಾರು ಮಾಡೋ ಬದಲು ಯಾವುದಾದರೂ ಆಲದ ಮರಕ್ಕೆ ನೇಣು ಹಾಕಿ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25,000 ಬಾಂಗ್ಲಾದೇಶಿ ಮುಸಲ್ಮಾನರು ಬೀಡು ಬಿಟ್ಟಿದ್ದಾರೆ. ಅವರನ್ನು ಜಮೀರ್ ಸಾಕಿ, ಓಟರ್ ಲೀಸ್ಟ್ ತಯಾರು ಮಾಡಿದ್ದಾನೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಔರಂಗಜೇಬ್ ಮಾಡಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

ಬಿಜೆಪಿಯವರು ಜಮೀರ್‍ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅನ್ನೋದಕ್ಕಿಂತ, ಯಾವುದಾರೂ ಆಲದಮರಕ್ಕೆ ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಅರ್ಹನಲ್ಲ . ಯಾರ ಭೂಮಿ, ಕಟ್ಟಡ ಬೇಕೋ ಅದನ್ನು ತೆಗೆದುಕೊಂಡು ನುಂಗಿ ನೀರು ಕುಡಿಯೋಕೆ ಇದು ಅವನ ಅಪ್ಪಂದ ಎಂದು ತೀವ್ರ ಕಿಡಿ ಕಾರಿದ್ದಾರೆ .