Home Karnataka State Politics Updates Bjp: ಬಿಜೆಪಿಗೆ ಬಿಗ್ ಶಾಕ್- ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ ದೇಶದ ಪ್ರಭಾವಿ ನಾಯಕ !

Bjp: ಬಿಜೆಪಿಗೆ ಬಿಗ್ ಶಾಕ್- ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ ದೇಶದ ಪ್ರಭಾವಿ ನಾಯಕ !

Bjp
Image source : mint

Hindu neighbor gifts plot of land

Hindu neighbour gifts land to Muslim journalist

Bjp: ಪಕ್ಷದ ನಾಯಕರು ಪಕ್ಷಾಂತರ ಮಾಡುತ್ತಲೇ ಇದ್ದಾರೆ. ಸಾಕಷ್ಟು ಬಿಜೆಪಿ (Bjp) ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಹಾಗೆಯೇ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದರೂ ಇದೆ. ಇದೀಗ ಬಿಜೆಪಿಗೆ ಬಿಗ್ ಶಾಕ್ ಬಂದೊದಗಿದೆ. ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದೆ. ಸದ್ಯ ಚುನಾವಣೆ ಹೊತ್ತಲ್ಲೇ ದೇಶದ ಪ್ರಭಾವಿ ನಾಯಕ ಪಕ್ಷ ತೊರೆದಿದ್ದಾರೆ.

 

ಸ್ವಾತಂತ್ರ್ಯ ವೀರ ಸುಭಾಷ್ ಚಂದ್ರ ಬೋಸ್ (netaji subhas chandra bose) ಮೊಮ್ಮಗ ಚಂದ್ರಕುಮಾರ್ ಬೋಸ್ (chandra kumar bose) ಬಿಜೆಪಿಗೆ ರಾಜೀನಾಮೆ (resign) ನೀಡಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರಾಗಿರುವ ಚಂದ್ರ ಕುಮಾರ್ ಬೋಸ್ ಪಕ್ಷ ತೊರೆದಿರುವುದು ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

ಆದರೆ, ಇವರು ಬಿಜೆಪಿ ತೊರೆಯಲು ಕಾರಣವಿದ್ದು, ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಹಾಗೂ ಕೇಂದ್ರ ಬಿಜೆಪಿಯಲ್ಲಿರುವ ನಾಯಕರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ರಾಜ್ಯ ಬಿಜೆಪಿ ಹಾಗೂ ಕೇಂದ್ರ ಬಿಜೆಪಿಯಿಂದ ನನಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ಉದ್ದೇಶಿಸಿದ ಯೋಜನೆಗಳನ್ನು ಸಾಕಾರಗಳೊಳಿಸಲು ನನಗೆ ಬಿಜೆಪಿ ಸಹಕಾರ ನೀಡಲಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

ಜೊತೆಗೆ ಚಂದ್ರ ಕುಮಾರ್ ಬೋಸ್ ಪ್ರಧಾನಿ ನಾಯಕತ್ವ ಹಾಗೂ ಆಡಳಿತವನ್ನು ಹೊಗಳಿದ್ದಾರೆ. ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ರವಾನಿಸಿದ್ದಾರೆ. ಸದ್ಯ ಇವರ ರಾಜಿನಾಮೆ ಬಿಜೆಪಿಗೆ ಹಿನ್ನೆಡೆ ತರಲಿದೆ ಎನ್ನಲಾಗಿದೆ.

ಇದನ್ನೂ ಓದಿ : ಪಕ್ಕದ ಮನೆಯ ನಾಯಿ ಕಚ್ಚಿದ ವಿಚಾರ ಮುಚ್ಚಿಟ್ಟ ಬಾಲಕ ನಂತರ ಆದದ್ದು ಭಯಾನಕ !!