Home News ಬೆಂಗಳೂರು H D Revanna: ನನ್ನ ಮಗನನ್ನು ಗಲ್ಲಿಗೇರಿಸಿ – ಸದನದಲ್ಲಿ ಎಚ್ ಡಿ ರೇವಣ್ಣ ಬಾವುಕ...

H D Revanna: ನನ್ನ ಮಗನನ್ನು ಗಲ್ಲಿಗೇರಿಸಿ – ಸದನದಲ್ಲಿ ಎಚ್ ಡಿ ರೇವಣ್ಣ ಬಾವುಕ !!

H D Revanna

Hindu neighbor gifts plot of land

Hindu neighbour gifts land to Muslim journalist

H D Revanna: ನನ್ನ ಮಗ ಏನಾದರೂ ತಪ್ಪು ಮಾಡಿದರೆ, ಆರೋಪಗಳೆಲ್ಲವೂ ನಿಜವಾದರೆ ಅವನನ್ನು ಬೇಕಾದರೆ ಗಲ್ಲಿಗೇರಿಸಿ ನಾನೇನು ತಡೆಯುವುದಿಲ್ಲ ಎಂದು ಮಾಜಿ ಸಚಿವ, ಎಚ್ ಡಿ ರೇವಣ್ಣ(H D Revanna) ಅವರು ವಿಧಾನಸಭೆಯಲ್ಲಿ ಭಾವುಕರಾಗಿದ್ದಾರೆ.

ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿ ಅತೀ ದೊಡ್ಡ ಲೈಂಗಿಕ ಹಗರಣ ಎಂದು ಗುರುತಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ(Prajwal Revann ) ವಿಚಾರ ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಕೆಲವು ಸಂಗತಿಗಳಿಂದ ತಣ್ಣಗಾಗಿದೆ. ಆದರೆ ತನಿಖೆ ನಡೆಯುತ್ತಲೇ ಇದೆ. ಆದರೀಗ ಈ ವಿಚಾರ ನಿನ್ನೆ ವಿಧಾನಸಭೆ ಅಧಿವೇಶನದಲ್ಲಿ(Vidhana Sabhe) ಮುನ್ನಲೆಗೆ ಬಂದಿದೆ. ಈ ವೇಳೆ ಮಾತನಾಡಿದ ರೇವಣ್ಣ ಭಾವುಕರಿಗಿದ್ದಾರೆ.

ಹೌದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashok) ನಿಯಮ 69 ಅಡಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಆದರೆ, ವಾಲ್ಮೀಕಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವವರ ವಿರುದ್ಧ ಅಷ್ಟೇ ಆಸಕ್ತಿಯಿಂದ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು. ಈ ವೇಳೆ ನಡುವೆ ಪ್ರವೇಶಿಸಿದ ರೇವಣ್ಣ ನನ್ನ ಮಗ ತಪ್ಪು ಮಾಡಿದರೆ ಗಲ್ಲಿಗೆ ಹಾಕಿ ಎಂದು ವಿಧಾನಸಭೆಯಲ್ಲಿ ಭಾವುಕರಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ನಿಮ್ಮ ಬಂಡವಾಳ ಏನು ಅಂತ ಗೊತ್ತಿದೆ. 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದ ನಾನು 25 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಇದುವರೆಗೂ ಕಪ್ಪು ಚುಕ್ಕಿ ಇಲ್ಲ. ಆದರೆ ನನ್ನ ಮೇಲೆ ಯಾರೋ ಹೆಣ್ಣು ಮಕ್ಕಳನ್ನು ಕರೆಸಿಕೊಂಡು ಡಿಜಿ ಕಚೇರಿಯಲ್ಲಿ ದೂರು ಬರೆಸಿಕೊಳ್ಳುತ್ತಾರೆ. ಡಿಜಿ ಆಗಲು ಯೋಗ್ಯನಾ ಅವನು? ಇದು ನೀಚ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

Chikkaballapura: ಟಮೋಟೋ ಹೊಲದ ಮೇಲೆ ಜನರ ಕಣ್ಣು – ದೃಷ್ಟಿಯಾಗಬಾರದೆಂದು ಸನ್ನಿಲಿಯೋನ್, ರಚಿತರಾಮ್ ಬ್ಯಾನರ್ ಹಾಕಿದ ರೈತ !!