Home News ಬೆಂಗಳೂರು ಆಂಟಿ ಪ್ರೀತ್ಸೇ! 19 ರ ಯುವಕನೊಂದಿಗೆ ಮಹಿಳೆಯೋರ್ವಳ ಲವ್, ಬ್ರೇಕಪ್ ಅಂದಿದ್ದಕ್ಕೆ ಮುಖಕ್ಕೆ ಚಾಕು ಇರಿತ,...

ಆಂಟಿ ಪ್ರೀತ್ಸೇ! 19 ರ ಯುವಕನೊಂದಿಗೆ ಮಹಿಳೆಯೋರ್ವಳ ಲವ್, ಬ್ರೇಕಪ್ ಅಂದಿದ್ದಕ್ಕೆ ಮುಖಕ್ಕೆ ಚಾಕು ಇರಿತ, ಯುವಕ ಎಸ್ಕೇಪ್!

Hindu neighbor gifts plot of land

Hindu neighbour gifts land to Muslim journalist

Bangalore Crime News : ದಿನೇ ದಿನೇ ಕೊಲೆ, ಅತ್ಯಾಚಾರದಂತಹ ಪ್ರರಣಗಳು ವರದಿಯಾಗುತ್ತಲೇ ಇದೆ. ಪ್ರೀತಿ- ಪ್ರೇಮದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಸಾಕಷ್ಟಿವೆ. ಇದೀಗ ಅಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 19 ರ ಯುವಕನೊಂದಿಗೆ ಮಹಿಳೆಯೋರ್ವಳು ಲವ್ ಬ್ರೇಕಪ್ ಅಂದಿದ್ದಕ್ಕೆ ಆಕೆಯ ಮುಖಕ್ಕೆ ಚಾಕು ಮಾರ್ಕ್ ಮಾಡಿ, ಯುವಕ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ (Bangalore Crime News) ನಡೆದಿದೆ.

ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲಿವ್‌ ಇನ್‌ ರಿಲೇಶನ್‌ಶಿಪ್‌ ನಲ್ಲಿದ್ದ(live in relationship) ಆಂಟಿಯ ಮುಖಕ್ಕೆ 19 ರ ಹರೆಯದ ಅವಿನಾಶ್ ಎಂಬಾತ ಚಾಕುನಿಂದ ಕುರೂಪ್ ಹಾಕಿದ್ದಾನೆ. ಮಹಿಳೆಯ ಹೆಸರು ಜೀವಿತಾ ಎಂದಾಗಿದ್ದು, ಇದೀಗ ಯುವಕನ ವಿರುದ್ಧ ದೂರು ದಾಖಲಾಗಿದ್ದು, ಪೋಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

ಜೀವಿತಾಳಿಗೆ ಈ ಮೊದಲೇ ಮದುವೆಯಾಗಿದ್ದು, ಗಂಡನಿಂದ ದೂರಾಗಿದ್ದಳು. ಹಾಗೇ ಜೀವನಾಧಾರಕ್ಕೆ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲೇ ಪಾರ್ಕ್ (park) ನಲ್ಲಿ ಗಾರ್ಡನ್ ಆಗಿ ಅವಿನಾಶ್ ಕೂಡ ಕೆಲಸ ಮಾಡಿಕೊಂಡಿದ್ದ. ಒಂದೇ ಸ್ಥಳದಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದ ಕಾರಣ, ಇಬ್ಬರಿಗೂ ಪರಿಚಯವಾಗಿತ್ತು. ಪ್ರತಿದಿನ ಮಾತನಾಡುತ್ತಿದ್ದರು. ಈ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿ ಕಳೆದ ಎರಡು ವರ್ಷಗಳಿಂದ ಇಬ್ಬರೂ ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇದ್ದರು.

ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದ ಇವರಿಬ್ಬರ ನಡುವೆ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರೂ ದೂರವಾಗಿದ್ದರು. ಜೀವಿತಾ ಜಗಳದ ಕಾರಣ, ಅವಿನಾಶ್ ಗೆ ಮೆಸೇಜ್ (message), ಕಾಲ್ (call) ಮಾಡುವುದನ್ನು ನಿಲ್ಲಿಸಿದ್ದಳು. ಆತ ಕಾಲ್ ಮಾಡಿದರೂ ರಿಸೀವ್ ಮಾಡುತ್ತಿರಲಿಲ್ಲ. ಇದನ್ನು ಗಮನಿಸಿದ ಅವಿನಾಶ್ ಕೋಪಗೊಂಡಿದ್ದಾನೆ. ಆಕೆ ನನ್ನಿಂದ ದೂರಾಗುತ್ತಾಳೆ. ಯಾಕೆ ಹೀಗೆ ಮಾಡುತ್ತಿದ್ದಾಳೆ? ಎಂದು ಯೋಚನೆಗೊಳಗಾಗಿ, ಒಂದು ದಿನ ಜೀವಿತಾ ಕೆಲಸ ಮಾಡುತ್ತಿದ್ದ ಕಚೇರಿಗೆ ಹೋಗಿ ಆಕೆಯ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾನೆ. ತನ್ನನ್ನೇಕೆ ದೂರ ಮಾಡುತ್ತಿರುವೆ? ಕಾಲ್, ಮೆಸೇಜ್ ಯಾಕಿಲ್ಲ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಜೀವಿತಾ ಲವ್ ಬ್ರೇಕಪ್ (love breakup), ಇನ್ಮುಂದೆ ನನ್ನ ಜೊತೆ ಮಾತನಾಡಬೇಡ ಎಂದು ಹೇಳಿದ್ದಾಳೆ. ಇದರಿಂದ ಇನ್ನಷ್ಟು ಕುಪಿತಗೊಂಡ ಪ್ರಿಯಕರ ಚಾಕುವಿನಿಂದ ಜೀವಿತಾ ಕೆನ್ನೆಗೆ ಇರಿದು ಗಾಯ ಮಾಡಿದ್ದಾನೆ. ಅಲ್ಲದೆ, ಬೇಗನೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಜೀವಿತಾ ಬಾಣಸವಾಡಿ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು (police) ಕಾರ್ಯಾಚರಣೆ ನಡೆಸುತ್ತಿದ್ದಾರೆ.