Home News ಉಡುಪಿ ಕಾರ್ಕಳ: ಮನೆಯಿಂದ ಹೊರಹೋದ ಮಹಿಳೆ ನಾಪತ್ತೆ

ಕಾರ್ಕಳ: ಮನೆಯಿಂದ ಹೊರಹೋದ ಮಹಿಳೆ ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

ಕಾರ್ಕಳ: ನಿಟ್ಟೆ ಪರಪ್ಪಾಡಿ ನಿವಾಸಿ ಸಹನಾ (23) ಎಂಬ ಯುವತಿ ಕಾಣೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನ ದಿನೇಶ್ ಕುಮಾರ್ ಅವರನ್ನು ಮದುವೆಯಾಗಿದ್ದ ಸಹನಾ, ಎರಡು ತಿಂಗಳು ಸಂಸಾರ ನಡೆಸಿದ್ದು, ನಂತರ ವೈಮನಸ್ಸು ಉಂಟಾಗಿ ವಿವಾಹ ವಿಚ್ಛೇದನ ಪಡೆದು ತಾಯಿ ಮನೆಯಲ್ಲಿ ವಾಸವಿದ್ದರು.

ಎ. 14ರಂದು ಮಧ್ಯಾಹ್ನ ಎರಡು ಗಂಟೆ ವೇಳೆಗೆ ಮನೆಯಿಂದ ಹೊರ ಹೋದವರು ಬಳಿಕ ವಾಪಸು ಬಾರದೆ ಕಾಣೆಯಾಗಿದ್ದಾರೆ.

ಮಹಿಳೆ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಹಳದಿ ಬಣ್ಣದ ಚೂಡಿದಾರ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ. ಈ ಚಹರೆಯುಳ್ಳ ಮಹಿಳೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಕಾರ್ಕಳ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ