Home News ಉಡುಪಿ Karkala: ಹೃದಯ ವಿದ್ರಾವಕ ಘಟನೆ – ಜೂಲಿಯಾನಾ ಟೀಚರ್ ಸಾವಿನ ಸುದ್ದಿ ಕೇಳಿ ಪತಿ ಕೂಡ...

Karkala: ಹೃದಯ ವಿದ್ರಾವಕ ಘಟನೆ – ಜೂಲಿಯಾನಾ ಟೀಚರ್ ಸಾವಿನ ಸುದ್ದಿ ಕೇಳಿ ಪತಿ ಕೂಡ ಸಾವು!! ಸಾವಿನಲ್ಲೂ ಒಂದಾದ ದಂಪತಿ

Hindu neighbor gifts plot of land

Hindu neighbour gifts land to Muslim journalist

Karkala: ಒಂದು ದಿನದ ಅಂತರದಲ್ಲಿ ಗಂಡ, ಹೆಂಡತಿ ನಿಧನ ಹೊಂದಿ ಸಾವಿನಲ್ಲೂ ಒಂದಾದ ಘಟನೆಯು ಉದ್ಯಾವರದಲ್ಲಿ ಶುಕ್ರವಾರ(ನ.29ರಂದು) ನಡೆದಿದೆ.

ಕಾರ್ಕಳದ(Karkala) ವಿವಿಧ ಶಾಲೆಗಳಲ್ಲಿ ದಶಕಗಳ ಕಾಲ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಜುಲಿಯಾನ ಹೆಲೆನ್ ರೆಬೆಲ್ಲೋ ಡೆಸಾ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಜೂಲಿಯಾನ ಟೀಚರ್ ನಿಧನರಾಗಿದ್ದ ಸುದ್ದಿ ಅಪಾರ ವಿದ್ಯಾರ್ಥಿ ಬಳಗವನ್ನು ನೋವಿಗೀಡು ಮಾಡಿತ್ತು. ಆದರೆ ಈ ಬೆನ್ನಲ್ಲೇ ಮತ್ತೊಂದು ಅಘಾತಕಾರಿ ಘಟನೆ ನಡೆದಿದ್ದು ಇವರ ಪತಿ, ಉದ್ಯಾವರ ಗ್ರಾ.ಪಂ. ಹಾಲಿ ಸದಸ್ಯ ಲಾರೆನ್ಸ್‌ ಡೇಸ (62)ಅವರು ಅಸೌಖ್ಯದಿಂದ ನ.29ರಂದು ನಿಧನ ಹೊಂದಿದ್ದಾರೆ.

ಅಂದಹಾಗೆ ಪತ್ನಿಯ ಸಾವಿನಿಂದ ಆಘಾತಕ್ಕೊಳಗಾದ ಪತಿ ಲಾರೆನ್ಸ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇವರೂ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಲಾರೆನ್ಸ್ ಡೆಸಾ, ಸ್ಥಳೀಯ ಲಯನ್ಸ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಾವಿನಲ್ಲೂ ಗಂಡ, ಹೆಂಡತಿ ಒಂದಾಗಿದ್ದಾರೆ. ಅವರು ಮೃತರು ಪುತ್ರ, ಪುತ್ರಿ ಹಾಗೂ ಅಪಾರು ಬಂಧು ವರ್ಗವನ್ನು ಅಗಲಿದ್ದಾರೆ. ಇವರಿಬ್ಬರ ಅಗಲಿಕೆಗೆ ಕಾರ್ಕಳದ ಗಣ್ಯರು, ರಾಜಕೀಯ ಮುಖಂಡರು, ಧರ್ಮ ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.