Home News ಉಡುಪಿ ಸೋಮೇಶ್ವರ ಸೀತಾನದಿ ತಟದ ನಾಗಬನದ ಬಗಲಲ್ಲೆ ಮಾಂಸದೂಟ ಮಾಡಿದ ಮುಸ್ಲಿಂ ಕುಟುಂಬ !!| ಹಿಂದೂ ಸಂಘಟನೆಗಳ...

ಸೋಮೇಶ್ವರ ಸೀತಾನದಿ ತಟದ ನಾಗಬನದ ಬಗಲಲ್ಲೆ ಮಾಂಸದೂಟ ಮಾಡಿದ ಮುಸ್ಲಿಂ ಕುಟುಂಬ !!| ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಇನ್ನೂ ಧರ್ಮ ದಂಗಲ್ ನಡೆಯುತ್ತಲೇ ಇದೆ. ಇದರ ನಡುವೆಯೇ ಕೆಲವು ಕಡೆ ಕೋಮು ಸಂಘರ್ಷಕ್ಕೆ ನಾಂದಿ ಹಾಡುವಂತಹ ಘಟನೆಗಳು ನಡೆಯುತ್ತಿವೆ. ಅಂತೆಯೇ ಇಂದು ಹೆಬ್ರಿ ಸಮೀಪದ ಸೋಮೇಶ್ವರ ಸೀತಾನದಿ ತಟದಲ್ಲಿ ದೇವಸ್ಥಾನ ಮತ್ತು ನಾಗಬನದ ಪಕ್ಕದಲ್ಲೇ ಮುಸ್ಲಿಂ ಕುಟುಂಬವೊಂದು ಮಾಂಸದೂಟ ತಯಾರಿ ಮಾಡಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಪ್ರವಾಸಕ್ಕೆಂದು ಬಂದಿದ್ದ ಮುಸ್ಲಿಂ ಕುಟುಂಬವು ಮಂದಿರ ಮತ್ತು ನಾಗಬನದ ಬಳಿ ಮಾಂಸದೂಟ ಮಾಡಿದೆ ಎಂಬ ವಿಷಯಕ್ಕೆ ಸಂಬಂಧಿಸಿ ಈ ಜಗಳ ನಡೆದಿದೆ. ಮಾಂಸದೂಟ ತಿಂದರೆ ನಾಗಬನದ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳಿಕ ಈ ವಿಷಯ ತಿಳಿದು ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಮುಸ್ಲಿಂ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲೇ ನಾಗಬನ ಮತ್ತು ಮಂದಿರ ಇರುವುದನ್ನು ಗಮನಿಸಿಯೂ ಈ ರೀತಿ ಮಾಡಿರುವ ಕುರಿತು ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.