Home News ಉಡುಪಿ ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಸಿಗರೇಟ್ ನಿಂದ ಸುಡಲು ಪ್ರಯತ್ನ!! ವೀಡಿಯೋ ವೈರಲ್ ಆಗಿ ಕೆಲ...

ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಸಿಗರೇಟ್ ನಿಂದ ಸುಡಲು ಪ್ರಯತ್ನ!! ವೀಡಿಯೋ ವೈರಲ್ ಆಗಿ ಕೆಲ ತಾಸುಗಳ ಒಳಗೆ ಆರೋಪಿ ಪಾಪಿ ಪತಿ ಪೊಲೀಸರ ಅತಿಥಿ!

Hindu neighbor gifts plot of land

Hindu neighbour gifts land to Muslim journalist

ಉಡುಪಿ:ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಮುಖಕ್ಕೆ ಸಿಗರೇಟ್ ನಿಂದ ಸುಡಲು ಪ್ರಯತ್ನಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ.

ಬಂಧಿತ ಆರೋಪಿಯನ್ನು ಪಾಪಿ ಪತಿ ಪ್ರದೀಪ್ ಎಂದು ಗುರುತಿಸಲಾಗಿದ್ದು,ಈತ ತನ್ನ ಗರ್ಭಿಣಿ ಪತ್ನಿ ಪ್ರಿಯಾಂಳಿ ಗೆ ವರದಕ್ಷಿಣೆಗೆ ಕಿರುಕುಳ ನೀಡಿ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಇದೇ ವಿಚಾರವಾಗಿ ಪ್ರತೀ ನಿತ್ಯವೂ ಆಕೆಯ ಮೇಲೆ ಗರ್ಭಿಣಿ ಎಂಬ ಕನಿಕರವನ್ನು ಬಿಟ್ಟು ಹಲ್ಲೆ ನಡೆಸುತ್ತಿದ್ದ. ಅಷ್ಟಕ್ಕೇ ಸುಮ್ಮನಾಗದ ಆತ ಆಕೆಯ ಮುಖಕ್ಕೆ ಸಿಗರೇಟ್ ಹೊತ್ತಿಸಿ ಇಡಲು ಪ್ರಯತ್ನಿಸಿದ್ದು, ಕಾಲಿಗೆ ಬಿದ್ದರೂ ಆಕೆಯ ಹೊಟ್ಟೆಗೆ ಒದೆದಿದ್ದ. ಹೊಟ್ಟೆಗೆ ಒದೆಯಲು ಮುಂದಾದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಹೊಡೆತ ಪ್ರಿಯಾಂಕಳ ಸೊಂಟಕ್ಕೆ ಬಿದ್ದಿದೆ ಎನ್ನಲಾಗಿದೆ.ವೈರಲ್ ಆದ ವೀಡಿಯೋ ದಲ್ಲಿ ಆರೋಪಿಯ ತಾಯಿಯು ಕೂಡ ಪರಿ ಪರಿಯಾಗಿ ಅಂಗಲಾಚುವ ದೃಶ್ಯವೂ ಸೆರೆಯಾಗಿದ್ದು, ಸದ್ಯ ಈತನ ಕಿರುಕುಳದಿಂದ ಬೇಸತ್ತ ಪ್ರಿಯಾಂಕ ಠಾಣೆಗೆ ದೂರು ನೀಡಿದ್ದು, ದೂರಿನ ಹಿನ್ನೆಲೆಯಲ್ಲಿ ಆರೋಪಿಯ ಬಂಧನವಾಗಿದೆ.