Home Breaking Entertainment News Kannada Silk Smitha Biopic: ಸಿಲ್ಕ್ ಸ್ಮಿತಾ ಮತ್ತೊಂದು ಬಯೋಪಿಕ್ ಅನೌನ್ಸ್ – ಇವರೇ ನೋಡಿ ಸ್ಮಿತಾಳಂತೆ...

Silk Smitha Biopic: ಸಿಲ್ಕ್ ಸ್ಮಿತಾ ಮತ್ತೊಂದು ಬಯೋಪಿಕ್ ಅನೌನ್ಸ್ – ಇವರೇ ನೋಡಿ ಸ್ಮಿತಾಳಂತೆ ನಟಿಸುವ, ಸೊಂಟ ಬಳುಕಿಸುವ ನಟಿ !!

Silk Smitha Biopic
Image source: Ok Telugu

Hindu neighbor gifts plot of land

Hindu neighbour gifts land to Muslim journalist

Silk Smitha Biopic : ಸಣ್ಣ ಹರೆಯದಲ್ಲೇ ಸಿನಿ ಜಗತ್ತಿನಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದ ನಟಿಯರಲ್ಲಿ ಸಿಲ್ಕ್ ಸ್ಮಿತಾ (Kollywood actor Silk Smitha)ಕೂಡ ಒಬ್ಬರಾಗಿದ್ದಾರೆ. ಇವರ ಡಾನ್ಸ್ ನೋಡೋದಕ್ಕೆ ಕಿಕ್ಕಿರಿದು ಜನ ಚಿತ್ರಮಂದಿರಕ್ಕೆ ಹೋಗುತ್ತಿದ್ದರಂತೆ. ಸಿಲ್ಕ್ ಸ್ಮಿತಾ(Silk Smitha) ಅವರ ಜೀವನಾಧಾರಿತ ಚಿತ್ರವಾದ ‘ದಿ ಡರ್ಟಿ ಪಿಕ್ಚರ್’ ಸಿನಿಮಾದಲ್ಲಿ ವಿದ್ಯಾ ಬಾಲನ್ ನಟಿಸಿದ್ದು, ಈ ಸಿನಿಮಾ ದೊಡ್ದ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಇದೀಗ ಸಿಲ್ಕ್ ಸ್ಮಿತಾ ಅವರ ಮತ್ತೊಂದು ಬಯೋಫಿಕ್‌(Silk Smitha Biopic)ಅನೌನ್ಸ್‌ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: Pune: ನಡು ರಸ್ತೆಯಲ್ಲೇ ವಿದ್ಯಾರ್ಥಿಯನ್ನು ಕೊಚ್ಚಿ ಕೊಂದ ಸಲಿಂಗಕಾಮಿ !!

Silk Smitha Biopic

ಸಿನಿ ಜಗತ್ತಿನಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿ ಖ್ಯಾತಿ ಪಡೆದ ನಟಿ ತನ್ನ ವೈಯಕ್ತಿಕ ಬಾಳಲ್ಲಿ ಏಳು- ಬೀಳುಗಳ ನಡುವೆ ಸಂತೋಷವನ್ನು ಕಂಡೇ ಇಲ್ಲವೇನೋ ಎಂದರು ತಪ್ಪಾಗದು. ಸದ್ಯ, ಡಿಸೆಂಬರ್ 2 ರಂದು ಸಿಲ್ಕ್ ಸ್ಮಿತಾ(Silk Smitha) ಅವರ ಹುಟ್ಟಿದ ದಿನವಾಗಿದ್ದು, ಅವರ ಜೀವನೋಗಾಥೆಯನ್ನು ಆಧರಿಸಿದ ಮತ್ತೊಂದು ಬಯೋಪಿಕ್ ಅನ್ನು ಘೋಷಿಸಲಾಗಿದೆ. ಈ ಚಿತ್ರವನ್ನು ಜಯರಾಮ್ ನಿರ್ದೇಶನ ಮಾಡುತ್ತಿದ್ದು, ಸ್ತ್ರಿ ಸಿನಿಮಾಸ್ ಅಡಿಯಲ್ಲಿ ಎಸ್ ಬಿ ವಿಜಯ್ ನಿರ್ಮಿಸುತ್ತಿದ್ದಾರೆ. ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಚಂದ್ರಿಕಾ ರವಿ ಸಿಲ್ಕ್ ಸ್ಮಿತಾ ಅವರ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಇದನ್ನು ಓದಿ: Winter Hair Fall Remedies: ಚಳಿಗಾಲದಲ್ಲಿ ವಿಪರೀತ ಕೂದಲು ಉದುರುತ್ತಾ ?! ಹಾಗಿದ್ರೆ ಈ ಜ್ಯೂಸ್ ಇದಕ್ಕೆ ರಾಮ ಬಾಣ

‘ಸಿಲ್ಕ್ ಸ್ಮಿತಾ-ದಿ ಅನ್‌ಟೋಲ್ಡ್ ಸ್ಟೋರಿ’ ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಬಿಡುಗಡೆಯಾಗಲಿದ್ದು, ಇಂದು ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಭಾರತೀಯ ಆಸ್ಟ್ರೇಲಿಯಾದ ನಟಿ ಚಂದ್ರಿಕಾ ರವಿ ಫೋಟೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಸಿನಿಮಾ ಮುಂದಿನ ವರ್ಷ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.