Home Latest Health Updates Kannada Nail Cutting: ಉಗುರನ್ನು ಯಾವಾಗ ಕತ್ತರಿಸಬೇಕು, ಎಲ್ಲಿ ಹಾಕ್ಬೇಕು ಅಂತ ತಿಳ್ಕೊಳ್ಳಿ, ಹಣ ನಿಮ್ಮತ್ತ ಆಕರ್ಷಿತವಾಗುವಂತೆ...

Nail Cutting: ಉಗುರನ್ನು ಯಾವಾಗ ಕತ್ತರಿಸಬೇಕು, ಎಲ್ಲಿ ಹಾಕ್ಬೇಕು ಅಂತ ತಿಳ್ಕೊಳ್ಳಿ, ಹಣ ನಿಮ್ಮತ್ತ ಆಕರ್ಷಿತವಾಗುವಂತೆ ಮಾಡ್ಕೊಳ್ಳಿ!

Nail Cutting
image source: Vijayakarnataka

Hindu neighbor gifts plot of land

Hindu neighbour gifts land to Muslim journalist

Nail Cutting: ಹಿರಿಯರು ಕಾರಣ ಇಲ್ಲದೆ ಯಾವುದೇ ವಿಚಾರವನ್ನು ಹೇಳುವುದಿಲ್ಲ. ಪ್ರತಿಯೊಂದರ ಹಿಂದೆ ಒಂದೊಂದು ಕಾರಣವಿರುತ್ತದೆ. ಉದಾಹರಣೆಗೆ (example ) ಉಗುರು ಕತ್ತರಿಸುವುದು (Nail Cutting). ಹೌದು, ಬೆರಳಿನ ಉಗುರು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ. ಶರೀರದ ಯಾವ ರೀತಿ ಭಾಗವಾಗಿದೆ ಎಂದರೆ ಇದರಲ್ಲಿ ಹಲವಾರು ರೀತಿಯ ಶಕ್ತಿಗಳು ಒಳಗೊಂಡಿರುತ್ತವೆ. ತುಂಬಾ ಜನರಿಗೆ ಈ ವಿಷಯದ ಬಗ್ಗೆ ತಿಳಿದಿರುವುದಿಲ್ಲ .

ತಮ್ಮ ಬೆರಳಿನ ಉಗುರುಗಳನ್ನು ಕತ್ತರಿಸಿ ಕಸದ ಜೊತೆಗೆ ಎಸೆದು ಬಿಡುತ್ತಾರೆ. ಇದರಿಂದ ಅವರ ಜೀವನದಲ್ಲಿ ದರ್ಭಾಗ್ಯವು ಬರುತ್ತದೆ.
ಒಂದುವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆಯಿದ್ದರೆ ಬೆರಳಿನ ಉಗುರಿನ ಮಾಧ್ಯಮದ ಮೂಲಕವೇ ಹಣದ ಸಮಸ್ಯೆಯನ್ನು ಕೂಡ ದೂರ ಮಾಡಬಹುದು. ನಿಮ್ಮ ಜೀವನದಲ್ಲಿ ಶತ್ರುಗಳಿದ್ದರೆ ಶತ್ರುಗಳನ್ನು ಸಹ ದೂರ ಮಾಡಬಹುದು.

ಒಂದು ವೇಳೆ ಭೂತಪ್ರೇತ ಕಾಟದಿಂದ ಬಳಲುತ್ತಿದ್ದರೆ ಅಥವಾ ರಾಹು-ಕೇತು ದೋಷದಿಂದ ಮುಕ್ತಿಯನ್ನು ಹೊಂದಬೇಕೆಂದರೆ ಈ ಉಪಾಯವನ್ನು ಮಾಡಬೇಕು. ಮೊದಲಿಗೆ ಕೈಯಲ್ಲಿರುವ ಹತ್ತು ಬೆರಳುಗಳ ಉಗುರು ಹಾಗೂ ಕಾಲಲ್ಲಿರುವ ಹತ್ತು ಬೆರಳುಗಳ ಉಗುರನ್ನು ರವಿವಾರದ ದಿನದಂದು ತೆಗೆಯಬೇಕು.

ಈ ರೀತಿ ಉಗುರನ್ನು ಕತ್ತರಿಸಿದ ನಂತರ ಸ್ವಲ್ಪ ಕಾಲ ಅಥವಾ ಸಮಯ ನೀರಿನಲ್ಲಿ ಹಾಕಬೇಕು, ಇವುಗಳನ್ನು ಕತ್ತರಿಸಲು ಯಾರಿಗಾದರೂ ಬೇರೆಯವರಿಗೆ ಹೇಳಬೇಕು. ಯಾವುದೇ ಕಾರಣಕ್ಕೂ ನೀವು ತೆಗೆಯಬಾರದು. ಈ ರೀತಿ ಉಗುರನ್ನು ಕತ್ತರಿಸಿದ ನಂತರ 20 ಬಾರಿ ಮುಖದ ಮೇಲಿನಿಂದ ಇಳಿ ತೆಗೆಯಬೇಕು. ಈ ರೀತಿ ಇಳಿ ತೆಗೆದನಂತರ ಬೆಂಕಿಯಲ್ಲಿ ಹಾಕಿ ಬಸ್ಮ ಮಾಡುವಂತೆ ಬೇರೆಯವರಿಗೆ ಹೇಳಬೇಕು.

ರೀತಿ ಮಾಡುವುದರಿಂದ ನಿಮ್ಮ ಮೇಲೆ ಯಾರಾದರೂ ತಂತ್ರ ಪ್ರಯೋಗ ಮಾಡಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳು ಇದ್ದರೆ ಅಥವಾ ಹಣದ ಸಮಸ್ಯೆ ಕಾಡುತ್ತಿದ್ದರೂ ಕೂಡಾ ನಿವಾರಣೆಯಾಗುತ್ತದೆ.

ಇನ್ನು ನಿಮ್ಮ ಬೆರಳಿನ ಉಗುರುಗಳನ್ನು ಯಾವಾಗಲೂ ನೇರವಾದ ವಾರಗಳಾದ ಮಂಗಳವಾರ ಹಾಗೂ ಶನಿವಾರ ನಿಮ್ಮ ಬೆರಳಿನ ಉಗುರುಗಳನ್ನು ಕತ್ತರಿಸಬಾರದು. ಬೆರಳಿನ ಉಗುರುಗಳನ್ನು ಕತ್ತರಿಸಲು ಬುಧವಾರ ಅಥವಾ ಶುಕ್ರವಾರದ ದಿನ ಬೆರಳಿನ ಉಗುರುಗಳನ್ನು ಕತ್ತರಿಸಬಹುದು. ಯಾವುದಾದರೂ ಆಲದ ಮರದ ಬೇರುಗಳ ಹತ್ತಿರ ಅ ಉಗುರುಗಳನ್ನು ಹಾಕಿ ಬಂದರೆ ಅಥವಾ ನಿಮ್ಮ ಮನೆಯ ಮುಂದೆ ಯಾವುದಾದರೂ ಗಿಡ ಸಸಿಗಳನ್ನು ನೆಟ್ಟಿದ್ದರೆ ಅ ಸಸಿಗಳ ಬುಡದಲ್ಲಿ ಹಾಕಿ. ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿನ ದುಃಖ ದುಮ್ಮಾನಗಳು ದೂರಾಗುತ್ತಾ ಹೋಗುತ್ತದೆ.

 

ಇದನ್ನು ಓದಿ: Miyazaki mango: ಮತ್ತೆ ಕಮಾಲ್ ಮಾಡಿದ ಸೆಲೆಬ್ರಿಟಿ ಮಾವು ‘ಮಿಯಾಝಾಕಿ’: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು