Home Latest Health Updates Kannada Kitchen Tips: ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಬಿಸಾಡೋ ಮೊದಲು ಈ ಟ್ರಿಕ್ಸ್‌ ಫಾಲೋ...

Kitchen Tips: ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಬಿಸಾಡೋ ಮೊದಲು ಈ ಟ್ರಿಕ್ಸ್‌ ಫಾಲೋ ಮಾಡಿ!

Kitchen Tips

Hindu neighbor gifts plot of land

Hindu neighbour gifts land to Muslim journalist

Kitchen Tips: ಅಡುಗೆ ಮನೆಯಲ್ಲಿ ಮೊದಲು ಲೈಟರ್ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಿ ಗ್ಯಾಸ್‌ ಲೈಟರ್‌ಗಳು ಪದೇ ಪದೇ ಕೈ ಕೊಡುತ್ತವೆ. ಒಂದು ವೇಳೆ ಲೈಟರ್ ಕೈ ಕೊಟ್ರೆ ಅಡುಗೆ ಮಾಡೋ ಮೂಡ್ ಕೂಡಾ ಹೊರಟೋಗುತ್ತೆ. ಹೌದು, ಎಷ್ಟೇ ಉತ್ತಮ ಕ್ವಾಲಿಟಿಯ ಗ್ಯಾಸ್‌ ಲೈಟರ್‌ ತಂದರೂ ಕೆಲವೊಮ್ಮೆ ಅವು ವರ್ಕ್‌ ಆಗುವುದಿಲ್ಲ. ಗ್ಯಾಸ್‌ ಹಿಡಿಸಲು ಆಗದೇ ಪರದಾಡುವಂತೆ ಮಾಡುತ್ತವೆ. ಸದ್ಯ ನೀವು ಗ್ಯಾಸ್‌ ಲೈಟರ್‌ ಎಸೆಯುವ ಬದಲು ಅದು ವರ್ಕ್‌ ಆಗುವಂತೆ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌. ಈ ಟಿಪ್ಸ್ (Kitchen Tips) ಫಾಲೋ ಮಾಡಿದ್ರೆ ಹೊಸ ಲೈಟರ್ ಅವಶ್ಯಕತೆನೇ ಇರೋದಿಲ್ಲ. ಹೌದು, ಮುಂದಿನ ಸಲ ಗ್ಯಾಸ್‌ ಲೈಟರ್‌ ಹಾಳಾದರೆ ಅದನ್ನು ಎಸೆಯುವ ಬದಲು ಈ ಟ್ರಿಕ್ಸ್‌ಗಳನ್ನ ಬಳಸಿ ನೋಡಿ. ಖಂಡಿತ ನಿಮ್ಮ ಗ್ಯಾಸ್‌ ಲೈಟರ್‌ ವರ್ಕ್‌ ಆಗುತ್ತೆ.

ಗ್ಯಾಸ್‌ ಲೈಟರ್‌ ಹಾಳಾಗಲು ಕಾರಣಗಳು ಹಲವು. ಕೆಲವೊಮ್ಮೆ ಸರಿಯಾಗಿ ನಿರ್ವಹಣೆ ಮಾಡದೇ ನೀರು ಸೇರುವುದು ಕೂಡ ಗ್ಯಾಸ್‌ ಲೈಟರ್‌ ಕೆಲಸ ಮಾಡದೇ ಇರಲು ಕಾರಣವಾಗಬಹುದು. ಮುಖ್ಯವಾಗಿ ಲೈಟರ್ ಅನ್ನು ಕೆಲವು ತಿಂಗಳುಗಳವರೆಗೆ ಬಳಸಿದ ನಂತರ ಅದರೊಳಗೆ ಕೊಳಕು ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಅದಕ್ಕಾಗಿ ಲೈಟರ್ ಅನ್ನು ಎಸೆಯುವ ಮೊದಲು, ಅದನ್ನು ಒಳಗಿನಿಂದ ಇಯರ್‌ಬಡ್ಸ್ ಅಥವಾ ಸ್ಕ್ರೂಡ್ರೈವರ್ ನಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ಇನ್ನು ಗ್ಯಾಸ್ ಲೈಟರ್ ಒಳಗೆ ಸಂಗ್ರಹವಾದ ಕೊಳೆಯನ್ನು, ಜಿಡ್ಡು ಸ್ವಚ್ಛ ಮಾಡಲು ಹಿಂಭಾಗದಲ್ಲಿ ರಬ್ಬರ್ ಹ್ಯಾಂಡಲ್ ಅನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ನೀವು ಅದನ್ನು ಎಳೆಯಬಹುದು. ಇದಾದ ನಂತರ ಲೈಟರ್‌ನಲ್ಲಿರುವ ಸ್ಪ್ರಿಂಗ್ ಕೂಡ ಹೊರಬರುತ್ತದೆ. ಎಲ್ಲಾ ವಸ್ತುಗಳನ್ನು ಹೊರತೆಗೆದು ಅದರಲ್ಲಿ ನಾಲ್ಕು ಹನಿ ಸೀಮೆಎಣ್ಣೆ ಅಥವಾ ಪೆಟ್ರೋಲ್ ಸೇರಿಸಿ ಮತ್ತು ಸ್ಕ್ರೂಡ್ರೈವರ್ ಮತ್ತು ಒಣ ಹತ್ತಿ ಬಟ್ಟೆಯ ಸಹಾಯದಿಂದ ತಿರುಗಿಸುವ ಮೂಲಕ ಲೈಟರ್‌ನ ಪೈಪ್ ಅನ್ನು ಸ್ವಚ್ಛಗೊಳಿಸಿ. ಇದರ ನಂತರ, ಲೈಟರ್‌ನ ಎಲ್ಲಾ ಘಟಕಗಳನ್ನು ಮೊದಲಿನ ರೀತಿಯಲ್ಲಿಯೇ ಜೋಡಿಸಿ. ಆದರೆ ಸ್ಪಿಂಗ್‌ ಕಟ್‌ ಆದರೆ ಲೈಟರ್‌ ವರ್ಕ್‌ ಆಗುವುದಿಲ್ಲ ನೆನಪಿರಲಿ.

ಮುಖ್ಯವಾಗಿ ಅಡುಗೆಮನೆಯ ಮುಖ್ಯ ವಸ್ತುವಾಗಿರುವ ಲೈಟರ್‌ ತುಂಬಾ ಸಮಯ ಬಾಳಿಕೆ ಬರಬೇಕು ಅಂದ್ರೆ ಪ್ರತಿ ಬಳಕೆಯ ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ನೀರು ತಾಕದಂತೆ ನೋಡಿಕೊಳ್ಳಿ. ಇದಲ್ಲದೇ ಲೈಟರ್ ಬಳಸಿದ ನಂತರ ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ. ಈ ಟಿಪ್ಸ್ ಫಾಲೋ ಮಾಡೋ ಮೂಲಕ ಗ್ಯಾಸ್‌ ಲೈಟರ್‌ ಹಾಳಾಗದಂತೆ ತುಂಬಾ ಸಮಯ ಬಳಸಬಹುದು.