Home Latest Health Updates Kannada ಪತ್ನಿ ಪತಿಯೊಂದಿಗೆ ಅನ್ಯೋನ್ಯವಾಗಿಲ್ಲ ಎನ್ನುವುದಕ್ಕೆ ಈ ಅಂಶಗಳು ಕಾರಣವಾಗಿರಬಹುದು ನೋಡಿ!

ಪತ್ನಿ ಪತಿಯೊಂದಿಗೆ ಅನ್ಯೋನ್ಯವಾಗಿಲ್ಲ ಎನ್ನುವುದಕ್ಕೆ ಈ ಅಂಶಗಳು ಕಾರಣವಾಗಿರಬಹುದು ನೋಡಿ!

Hindu neighbor gifts plot of land

Hindu neighbour gifts land to Muslim journalist

ಮದುವೆಯಾದ ಮೇಲೆ ದಂಪತಿಗಳ ಮಧ್ಯೆ ಅನ್ಯೋನ್ಯತೆ ಬಹಳ ಮುಖ್ಯ. ಅದು ದೈಹಿಕ ಆಗಿರಬಹುದು ಅಥವಾ ಮಾನಸಿಕ ಆಗಿರಬಹುದು. ಈ ಎರಡರಲ್ಲೂ ಏರುಪೇರಾದರೆ ಸಂಬಂಧದಲ್ಲಿ ಬಿರುಕು ಬೀಳುವುದು ಖಂಡಿತಾ. ಹಾಗಾಗಿ ನಂಬಿಕೆ, ವಿಶ್ವಾಸ ಮುಖ್ಯ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ‌. ಕಾರಣ ಅನೇಕ ಇರಬಹುದು. ಇದರಲ್ಲಿ ಒಂದು ಲೈಂಗಿಕ ಅನ್ಯೋನ್ಯತೆ ಜೊತೆಗೆ ನಂಬಿಕೆ ಇವೆರಡು ಬಹಳ ಮುಖ್ಯ.

ಕೆಲವೊಮ್ಮೆ ಗಂಡಂದಿರು ಪತ್ನಿ ಯಾಕೆ ತನ್ನೊಂದಿಗೆ ಅನ್ನೋನ್ಯವಾಗಿಲ್ಲ ಎನ್ನುವುದನ್ನು ತಿಳಿಯದೇ ಕೋಪದ ಕೈಗೆ ಬುದ್ದಿ ಕೊಟ್ಟು ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದರೆ ಮಹಿಳೆಯರು ಈ ಕಾರಣಗಳಿಂದ ಪತಿಯೊಂದಿಗೆ ಅನ್ನೋನ್ಯವಾಗಿರಲು ಸಾಧ್ಯವಾಗದೇ ಇರಬಹುದು. ಅವು ಯಾವೆಲ್ಲಾ ಕಾರಣಗಳು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ದಂಪತಿಯರಲ್ಲಿ ಯಾವಾಗಲೂ ಎಮೋಷನಲ್ ಅಟಾಚ್ಮೆಂಟ್ ಖಂಡಿತ ಬೇಕೇ ಬೇಕು. ಆಗ ಮಾತ್ರ ಸಂಬಂಧದ ಆಳಕ್ಕೆ ಇಳಿದು ಎಲ್ಲವನ್ನು ಸಮತೋಲನ ಮಾಡಲು ಸಾಧ್ಯ. ಇದಕ್ಕಾಗಿ ಪತ್ನಿಯ ಬಗೆಗೆ ಗಮನ ನೀಡುವುದು ಜಾಸ್ತಿಯಾಗಬೇಕು. ಆಗ ಮಾತ್ರ ಭಾವನೆಗಳು ತೀವ್ರವಾಗಲು ಸಾಧ್ಯ. ದೈಹಿಕ ಅನ್ಯೋನ್ಯತೆ ಸಾಧ್ಯವಾಗುವುದು ಭೌತಿಕವಾಗಿ ಸಂಬಂಧ ಚೆನ್ನಾಗಿದ್ದರೆ ಮಾತ್ರ. ಆದ್ದರಿಂದ ಪತ್ನಿ ನಿಮ್ಮೊಂದಿಗೆ ಭಾವನಾತ್ಮಕವಾಗಿ ಬೆರೆತಿಲ್ಲ ಅಂದರೆ, ಅನ್ಯೋನ್ಯತೆಯ ಕೊರತೆ ಕಾಣಬಹುದು.

ಕೆಲವು ಮಹಿಳೆಯರಿಗೆ ತಮ್ಮ ದೇಹದ ಬಗ್ಗೆಯೇ ಮುಜುಗರವಿರುತ್ತದೆ. ಇದರಿಂದ ಪತಿಯೊಂದಿಗೆ ದೈಹಿಕವಾಗಿ ಅನ್ನೋನ್ಯವಾಗಿರಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪತಿಯೇ ಆಕೆಯಲ್ಲಿ ಅದರ ಕುರಿತು ಆಪ್ತತೆಯಿಂದ ಮಾತನಾಡಬೇಕು. ಪಾಸಿಟಿವ್ ಭಾವನೆಗಳನ್ನು ತುಂಬಬೇಕು. ಆಗ ಮಾತ್ರ ಆಪ್ತತೆಯಿಂದ ಇರಲು ಸಾಧ್ಯ. ವಯಸ್ಸಾದಂತೆ ದೇಹದಲ್ಲಿ ಸುಕ್ಕುಗಟ್ಟುವುದು ಪ್ರಕೃತಿಯ ಸಾಮಾನ್ಯ ಪ್ರಕ್ರಿಯೆ.
ಅದನ್ನು ಕೀಳಾಗಿ ನೋಡದೆ ಪತ್ನಿಯನ್ನು ಸ್ವೀಕರಿಸುವ ಮನಸ್ಸಿರಬೇಕು. ಆಗ ಮಾತ್ರ ಪತ್ನಿಯಲ್ಲಿಯೂ ನಂಬಿಕೆ ಮತ್ತು ಆತ್ಮೀಯತೆಯ ಭಾವನೆ ಬೆಳೆಯಲು ಸಾಧ್ಯ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಹಿಳೆಯರು ಉದ್ಯೋಗಿಗಳು. ಇಡೀ ದಿನ ಕೆಲಸ ಮಾಡಿ ದೇಹ ದಣಿದಿರುತ್ತದೆ. ಈ ಕಾರಣದಿಂದ ದೈಹಿಕವಾಗಿ ಅನ್ಯೋನ್ಯತೆಯಿಂದ ಇರಲು ಸಾಧ್ಯವಾಗದೇ ಇರಬಹುದು. ಆದ್ದರಿಂದ ಪತ್ನಿಯ ಆರೋಗ್ಯ ಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. ಅನಾರೋಗ್ಯವಿದ್ದರೆ ಆಕೆಯ ಆರೈಕೆ ಮಾಡಿ. ಬದಲಾಗಿ ಬಲವಂತ ಮಾಡಬೇಡಿ. ಹಾಗೇ ಮಾಡಿದರೆ ಸಂಬಂಧದಲ್ಲಿ ಏರುಪೇರಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡರೆ ಅನ್ಯೋನ್ಯತೆ ಉತ್ತಮವಾಗಿರುತ್ತದೆ.

ಪತ್ನಿ ನಿಮ್ಮೊಂದಿಗೆ ದೈಹಿಕವಾಗಿ ಅನ್ನೋನ್ಯವಾಗಿಲ್ಲ ಎಂದ ಮಾತ್ರಕ್ಕೆ ಆಕೆಯನ್ನು ಒಂದೇ ಸಮನೆ ದೂರುವುದು ಖಂಡಿತ ಸರಿಯಲ್ಲ. ಅದಕ್ಕೆ ಕಾರಣ ತಿಳಿಯಲು ಪ್ರಯತ್ನಿಸಿ. ಕೆಲವೊಮ್ಮೆ ಕುಟುಂಬದ ಹೊರೆ, ಕುಟುಂಬದ ಸಮಸ್ಯೆಗಳ ಭಾರ ಹೆಗಲಮೇಲೆ ಇದ್ದಾಗ ಲೈಂಗಿಕ ಬಯಕೆಗಳು ಮೂಡುವುದು ಕಡಿಮೆ. ಒತ್ತಡದ ಪರಿಸ್ಥಿತಿ ಇರುವಾಗ ಆಕೆ ಮಾನಸಿಕವಾಗಿ ದುರ್ಬಲಳಾಗುತ್ತಾಳೆ. ಹಾಗಾಗಿ ಇದನ್ನೆಲ್ಲಾ ತಿಳಿಯಿರಿ ಹಾಗೂ ಇದು ಮುಖ್ಯವಾಗಿ ಅನ್ಯೋನ್ಯತೆ ಬೆಳೆಯಲು ಪ್ರಮುಖ ದಾರಿ ಎಂದೇ ಹೇಳಬಹುದು.

ದಂಪತಿಗಳ ಸಂಬಂಧದಲ್ಲಿ ಮೂಲ ಆಧಾರವೇ ನಂಬಿಕೆ. ಒಮ್ಮೆ ಮಾಡಿದ ತಪ್ಪನ್ನು ಪದೇ ಪದೇ ಮಾಡಿದರೆ ನಂಬಿಕೆ ಖಂಡಿತ ಅದೃಶ್ಯವಾಗುತ್ತದೆ. ಇದು ನಿಮ್ಮ ಲೈಂಗಿಕ ತೃಪ್ತಿಗೂ ಅಡ್ಡಗೋಡೆಯಾಗುತ್ತದೆ. ಮಾನಸಿಕವಾಗಿ ನೀವು ಜೊತೆಯಾಗಿರಲು ಸಾಧ್ಯವೇ ಇಲ್ಲದ ಪರಿಸ್ಥಿತಿಗೆ ಮುಟ್ಟಬಹುದು. ಹಾಗಾಗಿ ಪತ್ನಿಯ ನಂಬಿಕೆ ಗಳಿಸಿ. ಚೆನ್ನಾಗಿರಿ.