Home Latest Health Updates Kannada Coconut oil: ಹಳದಿ ಹಲ್ಲು ಸೇರಿದಂತೆ ಈ 5 ಸಮಸ್ಯೆಯನ್ನು ತೆಗೆದುಹಾಕುವಲ್ಲಿ ತೆಂಗಿನೆಣ್ಣೆ ರಾಮಬಾಣ!

Coconut oil: ಹಳದಿ ಹಲ್ಲು ಸೇರಿದಂತೆ ಈ 5 ಸಮಸ್ಯೆಯನ್ನು ತೆಗೆದುಹಾಕುವಲ್ಲಿ ತೆಂಗಿನೆಣ್ಣೆ ರಾಮಬಾಣ!

Coconut oil

Hindu neighbor gifts plot of land

Hindu neighbour gifts land to Muslim journalist

Coconut oil :ತೆಂಗಿನೆಣ್ಣೆ ಚರ್ಮ, ಕೂದಲು, ಮತ್ತು ಆರೋಗ್ಯದ ಮೇಲೆ ಉತ್ತಮ ಆರೈಕೆಯನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ನಮ್ಮ ಚರ್ಮವನ್ನು ಒಳಗೆ ಮತ್ತು ಹೊರಗೆ ಪೋಷಿಸುವ ಅನೇಕ ಪೋಷಕಾಂಶಗಳು ಇದರಲ್ಲಿದೆ. ಇಲ್ಲಿ ನಾವು ನಿಮಗೆ ತೆಂಗಿನೆಣ್ಣೆಯ ಏಳು ಸಮಸ್ಯೆಗಳಿಗೆ ಪರಿಹಾರ ಕೊಡುವ ರೀತಿಯನ್ನು ಇಲ್ಲಿ ಹೇಳಲಿದ್ದೇವೆ.

 

ತೆಂಗಿನೆಣ್ಣೆಯು(Coconut oil) ಲಾರಿಕ್ ಆಸಿಡ್ ಅನ್ನು ಹೊಂದಿದ್ದು, ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ದಂತಕ್ಷಯವನ್ನು ತಡೆಯುತ್ತದೆ. ಒಸಡುಗಳ ಊತ ಮತ್ತು ಹಲ್ಲಿನ ಸೂಕ್ಷ್ಮತೆಯನ್ನು ಕಡಿಮೆ ಮಾಡುವುದರ ಜೊತೆಗೆ, ಈ ಎಣ್ಣೆಯು ಹಲ್ಲುಗಳನ್ನು ಬಿಳುಪುಗೊಳಿಸುವಲ್ಲಿಯೂ ಉಪಯುಕ್ತವಾಗಿದೆ. ಅದರ ಹಲ್ಲುಗಳಿಗೆ ವಾರಕ್ಕೆ ಎರಡರಿಂದ ಮೂರು ಬಾರಿ ಈ ಎಣ್ಣೆಯಿಂದ  ಮಸಾಜ್ ಮಾಡಿದರೆ ಉತ್ತಮ ಪರಿಹಾರ ದೊರೆಯುತ್ತದೆ.

 

ತೆಂಗಿನೆಣ್ಣೆಯಿಂದ ವಾರದಲ್ಲಿ ಎರಡರಿಂದ ಮೂರು ಬಾರಿ ಕೂದಲಿಗೆ ಹಚ್ಚಿ ನಂತರ ಶಾಂಪೂ-ಕಂಡೀಷನರ್‌ ಬಳಸಿ. ಹೀಗೆ ಮಾಡುವುದರಿಂದ ನಿಮ್ಮ ಕೂದರು ಉದುರುವುದು ತಪ್ಪುತ್ತದೆ. ಇದರಿಂದಾಗಿ ನಿಮ್ಮ ಕೂದಲು ಸ್ಟ್ರಾಂಗ್‌ ಆಗುತ್ತದೆ ಜೊತೆಗೆ ಹೊಳಪು ಕೂಡಾ ನೀಡುತ್ತದೆ. ತೆಂಗಿನೆಣ್ಣೆಗೆ ಕೆಲವು ಹನಿ ಎಸೆನ್ಶಿಯಲ್‌ ಆಯಿಲ್‌ನ್ನು ಮಿಶ್ರಣ ಮಾಡಿ ನೋಡಿ, ವ್ಯತ್ಯಾಸ ನಿಮಗೇ ಕಾಣುತ್ತದೆ.

 

ತೆಂಗಿನ ಎಣ್ಣೆಯು ಉಗುರುಗಳು ಮತ್ತು ಅದರ ಸುತ್ತಲಿನ ಚರ್ಮವನ್ನು ಆರೋಗ್ಯಕರವಾಗಿಡಲು ಸಹ ಪ್ರಯೋಜನಕಾರಿಯಾಗಿದೆ. ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಉಗುರುಗಳು ಮತ್ತು ಅದರ ಸುತ್ತಲಿನ ಚರ್ಮಕ್ಕೆ ಹಚ್ಚಿ ಮಲಗಿ, ಬೆಳಗ್ಗೆ ನಿಮಗೆ ಅದರ ವ್ಯತ್ಯಾಸ ಕಾಣಸಿಗುತ್ತದೆ.

 

ಕಣ್ಣು ಮತ್ತು ಮುಖದ ಅಂದವನ್ನು ಹೆಚ್ಚಿಸಲು ರೆಪ್ಪೆಗೂದಲು ಬಹಳ ಮುಖ್ಯ. ದಟ್ಟವಾದ ರೆಪ್ಪೆ ಕೂದಲನ್ನು ನೀವು ಬಯಸಿದರೆ, ನಂತರ ಮಲಗುವ ಮೊದಲು ಅವುಗಳ ರೆಪ್ಪೆಯ ಮೇಲೆ ಎಣ್ಣೆಯನ್ನು ಹಾಕಿ. ಅಂದ ಹಾಗೆ ನೆನಪಿಡಿ, ಈ ಎಣ್ಣೆ ಕಣ್ಣಿನೊಳಗೆ ಹೋಗದ ಹಾಗೆ ನೋಡಿಕೊಂಡರೆ ಉತ್ತಮ.

 

ಬೇಸಿಗೆಯಲ್ಲಿ ತುಟಿಗಳ ಚರ್ಮ ಒಣಗತೊಡಗುವುದು ಸಾಮಾನ್ಯ. ಮಾಯಿಶ್ಚರೈಸೇಶನ್‌ ಅಥವಾ ತೇವಾಂಶದ ಕೊರತೆಯೇ ತುಟಿಗಳು ಬಿರುಕುಗೊಳ್ಳಲು ಕಾರಣ. ಹೀಗಾದಾಗ ಇವು ನೋವು ಹೆಚ್ಚು ಕೊಡುತ್ತದೆ. ತುಟಿಗಳಲ್ಲಿ ಈ ರೀತಿಯ ಸಮಸ್ಯೆ ಕಂಡರೆ ದಿನಕ್ಕೆ ಎರಡು ಬಾರಿಯಾದರೂ ಎಣ್ಣೆಯನ್ನು ಹಚ್ಚಿ. ನೋವಿನಿಂದ ನಿವಾರಕ, ಹಾಗೆನೇ ಸ್ಮೂತ್‌ ತುಟಿ ನಿಮ್ಮದಾಗುಗತ್ತದೆ.

 

ತೆಂಗಿನೆಣ್ಣೆನ್ನು ಹುಬ್ಬುಗಳಿಗೂ ಬಳಸಬಹುದು. ಹುಬ್ಬಿನ ಕೂದಲು ಕಪ್ಪಗಾಗಲು, ದಪ್ಪಗಾಗಲು ತೆಂಗಿನೆಣ್ಣೆಯನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ಉತ್ತಮ.

ಇದನ್ನೂ ಓದಿ: Solar Stove: ದುಬಾರಿ ಅಡುಗೆ ಅನಿಲದಿಂದ ಪರಿಹಾರ ನೀಡಲಿದೆ ಈ ಸೋಲಾರ್‌ ಸ್ಟವ್‌! ಇದರ ಪ್ರಯೋಜನ ಅನೇಕ!!!