Home Latest Health Updates Kannada Geyser Using Tips: ಗೀಸರ್ ಬಳಸಿ ಕರೆಂಟ್​ ಬಿಲ್​ ಜಾಸ್ತಿ ಬರುತ್ತೆ ಅನ್ನೋ ಟೆನ್ಶನ್ ಬಿಡಿ!...

Geyser Using Tips: ಗೀಸರ್ ಬಳಸಿ ಕರೆಂಟ್​ ಬಿಲ್​ ಜಾಸ್ತಿ ಬರುತ್ತೆ ಅನ್ನೋ ಟೆನ್ಶನ್ ಬಿಡಿ! ಈ ಟಿಪ್ಸ್ ಫಾಲೋ ಮಾಡಿ

Geyser Using Tips

Hindu neighbor gifts plot of land

Hindu neighbour gifts land to Muslim journalist

Geyser Using Tips: ಬಹುತೇಕರಿಗೆ ಸ್ನಾನ ಮಾಡಲು ಬಿಸಿ ನೀರಿನ ಅವಶ್ಯಕತೆ ಇದ್ದೇ ಇರುತ್ತೆ. ಹಾಗಿರುವಾಗ ಗೀಸರ್ ಬಳಕೆ ಮಾಡುವುದು ಅನಿವಾರ್ಯ. ಹಾಗಂತ  ಗೀಸರ್ ಬಳಸಿದ್ರೆ ಹೆಚ್ಚಿನವರು ಕರೆಂಟ್​ ಬಿಲ್ ಹೆಚ್ಚು ಬರುತ್ತೆ ಅಂತಾ ಟೆನ್ಶನ್ ಮಾಡಿಕೊಳ್ಳುವುದು ಹೆಚ್ಚಾಗಿದೆ. ಅದಕ್ಕಾಗಿ ಸದ್ಯ ನಿಮಗೂ ಗೀಸರ್​ ಬಳಕೆ ಮಾಡಿದ್ರೆ, ಕರೆಂಟ್ ಬಿಲ್ ಕಡಿಮೆ ಬರ್ಬೇಕು ಅಂದ್ರೆ ಈ ಟಿಪ್ಸ್​ (Geyser Using Tips) ಫಾಲೋ ಮಾಡಿ ಸಾಕು.

ಹೌದು, ನೀವು ಗೀಸರ್ ಯೂಸ್​ ಮಾಡುತ್ತಲೇ ವಿದ್ಯುತ್ ಬಿಲ್ ಕಡಿಮೆ ಬರಬೇಕು ಅಂದುಕೊಂಡಿದ್ದರೆ ಅದಕ್ಕಾಗಿ ಉತ್ತಮ ಗುಣಮಟ್ಟದ ಗೀಸರ್ ಅನ್ನು ಬಳಸಬೇಕು. ಏಕೆಂದರೆ ಗೀಸರ್ ಗಾತ್ರಕ್ಕಿಂತ ಹೆಚ್ಚಾಗಿದ್ದರೆ, ಅದು ನಿಮಗೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಿಸಿ ಮಾಡುತ್ತದೆ ಮತ್ತು ಅದಕ್ಕೆ ಹೆಚ್ಚಿನ ಕರೆಂಟ್​​ ಬೇಕಾಗುತ್ತದೆ.

5 ಸ್ಟಾರ್ ರೇಟೆಡ್ ಗೀಸರ್ ಗಳು ವಿದ್ಯುತ್ ಉಳಿತಾಯ ಮಾಡುವಂತಹ ಗೀಸರ್ ಆಯ್ಕೆ ಮಾಡಿ. ಹೊಸ ಗೀಸರ್ ಖರೀದಿಸುವಾಗ 5 ಸ್ಟಾರ್​ ರೇಟ್​ನ ಗೀಸರ್ ಖರೀದಿಸಿದರೆ ಇವು ಅತಿ ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತವೆ.

ವಿದ್ಯುತ್ ಉಳಿಸಲು  ಸರಿಯಾದ ತಾಪಮಾನದಲ್ಲಿ ಗೀಸರ್ ಅನ್ನು ಆನ್ ಮಾಡಿ. ಯಾಕೆಂದರೆ ಗೀಸರ್‌ನ ಸಾಮಾನ್ಯ ತಾಪಮಾನವು 55 ಡಿಗ್ರಿ ಸೆಲ್ಸಿಯಸ್‌ನಿಂದ 65 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಾಪಮಾನವನ್ನು 55 ಡಿಗ್ರಿ ಸೆಲ್ಸಿಯಸ್ನಲ್ಲಿ ಹೊಂದಿಸಿ ನಂತರ ಆನ್ ಮಾಡಿ. ಏಕೆಂದರೆ ಕಡಿಮೆ ತಾಪಮಾನದಲ್ಲಿ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ.

ಗೀಸರ್ ನಲ್ಲಿ ಟೈಮರ್ ಹೊಂದಿಸುವುದು ಗೀಸರ್‌ನ ಸಮಯವನ್ನು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನಗತ್ಯವಾಗಿ ವಿದ್ಯುತ್​ ಬಳಕೆಯಾಗುವುದಿಲ್ಲ.

ಇನ್ನು ಗೀಸರ್ ಅನ್ನು ದೀರ್ಘಕಾಲ ಆನ್​ನಲ್ಲೇ ಇಟ್ಟಾಗ ಇದರಿಂದ್ ಕರೆಂಟ್​ ಬಿಲ್​ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿ ಗೀಸರ್ ಅನ್ನು ಹೆಚ್ಚು ಹೊತ್ತು ಆನ್ ಮಾಡಬೇಡಿ. ಗೀಸರ್ ಅನ್ನು ಎಷ್ಟು ಬೇಕು ಅಷ್ಟು ಬಳಸಿ ನಂತರ ಸ್ವಿಚ್ ಆಫ್ ಮಾಡಲು ಮರೆಯಬೇಡಿ.