Home Latest Health Updates Kannada Women: ಮಹಿಳೆಯರೇ ನಿಮ್ಮ ತಾಳಿಸರಕ್ಕೆ ಪಿನ್‌ ಹಾಕೋ ಅಭ್ಯಾಸ ಇದೆಯೇ? ಪಿನ್‌ ಹಾಕಿಕೊಂಡರೆ ಏನಾಗುತ್ತೆ ಗೊತ್ತೇ?...

Women: ಮಹಿಳೆಯರೇ ನಿಮ್ಮ ತಾಳಿಸರಕ್ಕೆ ಪಿನ್‌ ಹಾಕೋ ಅಭ್ಯಾಸ ಇದೆಯೇ? ಪಿನ್‌ ಹಾಕಿಕೊಂಡರೆ ಏನಾಗುತ್ತೆ ಗೊತ್ತೇ? ಇಲ್ಲಿದೆ ಘೋರಸತ್ಯ!!!

Women
Image credit: Flipkart

Hindu neighbor gifts plot of land

Hindu neighbour gifts land to Muslim journalist

Women: ವಿವಾಹ ಸಮಯದಲ್ಲಿ ಪತಿ ಪತ್ನಿಯಾಗುವವಳಿಗೆ ಕೊರಳಿಗೆ ಹಾಕುವ ಮಾಂಗಲ್ಯಕ್ಕೆ ವಿಶೇಷ ಮಹತ್ವವಿದೆ. ಮಾಂಗಲ್ಯವು ಸ್ತ್ರೀಗೆ ಸೌಭಾಗ್ಯ, ಮುತ್ತೈದೆಯ ಸಂಕೇತ. ಮಂಗಳಸೂತ್ರವನ್ನು ಶಿವ ಮತ್ತು ಶಕ್ತಿಯ ಐಕ್ಯತೆಯ ಪ್ರತೀಕವಾಗಿದೆ.

ಧಾರ್ಮಿಕ ನಂಬಿಕೆಯ ಪ್ರಕಾರ ಕರಿಮಣಿ ಅಥವಾ ಮಂಗಳಸೂತ್ರವನ್ನು ಧರಿಸುವುದರಿಂದ ಪತಿ-ಪತ್ನಿಯರಲ್ಲಿ ಅನ್ಯೋನ್ಯ ಬಾಂಧವ್ಯ ಏರ್ಪಡುತ್ತದೆ. ವಿವಾಹಿತೆ ಯಾವಾಗಲೂ ಮಾಂಗಲ್ಯ ಧರಿಸಿರುವುದರಿಂದ ಆಕೆಯ ಪತಿಯ ಆರೋಗ್ಯ, ಆಯುಷ್ಯ ಮತ್ತು ಸಂಸಾರದ ಏಳಿಗೆಗೆ ಉತ್ತಮ ಎಂಬುದು ಧಾರ್ಮಿಕ ನಂಬಿಕೆ.

ಆದರೆ ಕೆಲವರು ಹೆಣ್ಣು ಮಕ್ಕಳು ಕೆಲವು ದಿನನಿತ್ಯ ಕೆಲಸವನ್ನು ತಪ್ಪಾಗಿ ಮಾಡುತ್ತಾರೆ. ಅಂತಹ ತಪ್ಪನ್ನು ಇಲ್ಲಿ ತಿಳಿಸಲಾಗಿದೆ. ಹೌದು, ತಕ್ಷಣಕ್ಕೆ ಸಿಗಲಿ ಎಂದು ತಮ್ಮ ತಾಳಿ ಸರಕ್ಕೆ ಸೇಫ್ಟಿ ಪಿನ್ ಹಾಕಿಕೊಂಡುಬಿಡುತ್ತಾರೆ. ಆದರೆ ಇದು ತುಂಬಾ ತಪ್ಪು. ಇದು ಕಬ್ಬಿನವಾದ ಕಾರಣ ಇದರ ಮೇಲೆ ಶನಿ ದೇವರ ಪ್ರಭಾವ ಇರುವುದರಿಂದ ಗಂಡ ಹೆಂಡತಿ ನಡುವೆ ಮನಸ್ತಾಪ ಜಗಳ ಉಂಟಾಗುತ್ತದೆ.

ಇನ್ನು ಮನೆಯಲ್ಲಿ ಇರುವ ಹೆಣ್ಣು ಮಕ್ಕಳಲ್ಲಿ ಆಲಸ್ಯ ಇರಬಾರದು. ಸದಾ ನಗುನಗುತ ಚಟುವಟಿಕೆಯಿಂದ ಕೂಡಿರಬೇಕು. ಮನೆ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

ಹೆಣ್ಣು ಮಕ್ಕಳು ಮನೆಯಲ್ಲಿ ಮನೆಯಲ್ಲಿ ಇದ್ದರೂ ಕೂಡ ನೀಟಾಗಿ ತಲೆ ಬಾಚಿ ಹಣೆಗೆ ಕುಂಕುಮ ಇಟ್ಟುಕೊಂಡು ಲಕ್ಷಣವಾಗಿ ಇರಬೇಕು. ಮುಖ್ಯವಾಗಿ ಹೆಣ್ಣು (Women) ಪತಿಗೆ ಗೌರವ ಕೊಡಬೇಕು. ಪತಿಯ ಮಾತಿಗೆ ಎದುರ ಮಾತು ಕೊಡುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ವಾದಿಸುವುದು ಇತ್ಯಾದಿಗಳನ್ನು ಮಾಡಲೇಬಾರದು.

ಇನ್ನು ಕೆಲವರು ಮಹಿಳೆಯರು ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ ಕ್ಲೀನ್ ಮಾಡುವಾಗ ಅದನ್ನು ತಿನ್ನುತ್ತಾರೆ. ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬಾರದು, ಅದರಲ್ಲೂ ಮುಸ್ಸಂಜೆ ಹೊತ್ತು ಈ ರೀತಿ ತಪ್ಪನ್ನು ಮಾಡಲೇಬಾರದು.

ಇನ್ನು ಸೂರ್ಯೋದಯವಾದ ಮೇಲೆ ಮಲಗುವುದು, ಸಂಜೆ ಸಮಯ ಮಲಗುವುದು ಈ ರೀತಿ ದುರಭ್ಯಾಸಗಳು ರೂಡಿಸಿಕೊಳ್ಳಬಾರದು. ಅದಲ್ಲದೆ ಬೆಳಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಅದರ ಹೊರತು ಮುಖ ತೊಳೆದುಕೊಂಡು ಶುದ್ಧವಾಗಿ ಅಡುಗೆ ಮನೆಗೆ ಹೋಗಬೇಕು.

ದಿನದ ಆರಂಭದಲ್ಲಿ ಅಡುಗೆ ಆರಂಭಿಸುವ ಮುನ್ನ ಸ್ಟೌಗೆ ನಮಸ್ಕಾರ ಮಾಡಬೇಕು. ಅದಲ್ಲದೆ ಅಡುಗೆಗೆ ಆಗಲಿ ಅಥವಾ ತಟ್ಟೆಗೆ ಆಗಲಿ ಎಡಗೈಯಿಂದ ಉಪ್ಪನ್ನು ಹಾಕಬಾರದು. ಹೆಣ್ಣು ಅಡುಗೆ ಮಾಡುವುದನ್ನು ಕಲಿತಿರಬೇಕು. ಜೊತೆಗೆ ಅಡುಗೆ ಬಡಿಸುವಾಗ ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳು ಕೆಳಗೆ ಬೀಳದಂತೆ ಗಮನವಹಿಸಬೇಕು. ಶುಚಿಯಾಗಿ ರುಚಿಯಾಗಿ ಅಡುಗೆ ಮಾಡಬೇಕು. ಗಂಡ ಹಾಗೂ ಮಕ್ಕಳನ್ನು ಸರಿಯಾಗಿ ನಡೆಸುವ ಜಾಣತನ, ಗಂಡನ ದುಡಿಮೆಯಲ್ಲಿ ಸಂಸಾರವನ್ನು ತೂಗಿಸುವ ಚುರುಕುತನ ಇರಬೇಕು.

ಅದಲ್ಲದೆ ತಲೆಯನ್ನು ಬಾಚಿ ಕೂದಲನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯಬಾರದು.
ಯಾರ ಮೇಲೂ ಅತಿಯಾಗಿ ಡಿಪೆಂಡ್ ಆಗಬಾರದು. ಹೆಣ್ಣು ಮಕ್ಕಳು ಧೈರ್ಯವಂತರಾಗಿ ಶಕ್ತಿವಂತರಾಗಿ ಆರ್ಥಿಕ ಸ್ವಾತಂತ್ರ್ಯತೆಯಿಂದ ಬದುಕಬೇಕು.

ಮುಖ್ಯವಾಗಿ ಪೂಜೆ ಮಾಡುವಾಗ ಹಾಗೂ ಅಡುಗೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು. ಮಹಿಳೆಯರು ಯಾರದೋ ಮೇಲೆ ಕೋಪ ಮಾಡಿಕೊಂಡು ಅಥವಾ ಯಾರನ್ನೋ ಬಯ್ಯುತ್ತಾ ಪೂಜೆ ಮಾಡಬೇಡಿ. ದೇವರ ಮೇಲೆ ಅಪಾರ ಭಕ್ತಿ ಇರಬೇಕು.

ಮಹಿಳೆಯರು ಬೇರೆಯವರ ವಸ್ತ್ರ ಹಾಗೂ ಒಡವೆಗಳನ್ನು ಧರಿಸಲೇಬಾರದು.
ಯಾವತ್ತಿಗೂ ಬಾಗಿಲುಗಳನ್ನು ಕಾಲಿನಿಂದ ಒದೆಯುವುದು ಅಥವಾ ಕಾಲಿನಿಂದ ಬಾಗಿಲುಗಳನ್ನು ಮುಚ್ಚುವುದು ಈ ರೀತಿ ಮಾಡಬಾರದು. ಇನ್ನು ಮಲಗುವ ಹಾಸಿಗೆಯ ಮೇಲೆ ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ಇಡಲೇಬಾರದು.

ಇನ್ನು ಎಂಜಲು ಕೈಯಿಂದ ಲಕ್ಷ್ಮಿ ಗೆ ಸಮಾನವಾದ ಹಣವನ್ನು ಮುಟ್ಟಬೇಡಿ ಹಾಗೂ ನೋಟುಗಳನ್ನು ಎಣಿಸುವಾಗ ಎಂಜಲು ಮಾಡಿಕೊಂಡು ಎಣಿಸಬೇಡಿ. ಮುಖ್ಯವಾಗಿ ಸ್ನಾನದ ಮನೆ, ಶೌಚಾಲಯ ಕ್ಲೀನಾಗಿ ಇರಬೇಕು. ಮುಖ್ಯವಾಗಿ ಅಡುಗೆಮನೆ ಕೂಡ ವ್ಯವಸ್ಥಿತವಾಗಿ ಇರಬೇಕು.

ಇದನ್ನೂ ಓದಿ: ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಐದು ಕೆಲಸಗಳನ್ನು ಪೂರ್ಣಗೊಳಿಸಲು ನಿಮಗಿದೆ ಕೊನೆಯ ಅವಕಾಶ!