Home Jobs ಕೆಲಸ ಪರ್ಮನೆಂಟ್‌ ಆಗೋವರೆಗೆ ಮದುವೆ ಆಗುವಂತಿಲ್ಲ!

ಕೆಲಸ ಪರ್ಮನೆಂಟ್‌ ಆಗೋವರೆಗೆ ಮದುವೆ ಆಗುವಂತಿಲ್ಲ!

Army Agniveer Apply Online

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ಭಾರತೀಯ ಸೇನಾಪಡೆಗಳಲ್ಲಿ ಶಾಶ್ವತ ಸೈನಿಕರಾಗುವ ಕನಸು ಕಂಡಿರುವ ಅಗ್ನಿವೀರರಿಗೆ ಪರಿಷ್ಕೃತ ನಿಯಮಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ಈ ನಿಯಮದ ಪ್ರಕಾರ ಅಗ್ನಿವೀರ್ ಸೈನಿಕರು ಕಾಯಂ ಹುದ್ದೆ ಪಡೆಯುವವರೆಗೆ ಮದುವೆಯಾಗಲು ಅವಕಾಶ ಇರುವುದಿಲ್ಲ. ಶಾಶ್ವತ ಸೇವೆಗೆ ಆಯ್ಕೆಯಾಗುವ ಪ್ರಕ್ರಿಯೆಯ ಶಿಸ್ತು ಕಾಪಾಡುವ ಉದ್ದೇಶದಿಂದ ಪರಿಷ್ಕೃತ ನಿಯಮ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೊಸ ಈ ನಿಯಮದಂತೆ, ಅಗ್ನಿವೀರ್ ಕಾಯಂ ಸೈನಿಕನಾಗುವ ಮೊದಲು ಮದುವೆಯಾದರೆ, ಆತನನ್ನು ಶಾಶ್ವತ ಸೇವೆಗೆ ಅರ್ಹನಲ್ಲ ಎಂದು ಮೊದಲು ಪರಿಗಣಿಸಲಾಗುತ್ತದೆ. ಅಲ್ಲದೇ, ಆತನ ಶಾಶ್ವತ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಕಾಶವೂ ರದ್ದುಪಡಿಸಲಾಗುತ್ತದೆ.

ಕಾಯಂ ಸೈನಿಕರಾಗಿ ಆಯ್ಕೆಯಾಗುವ ಪ್ರಕ್ರಿಯೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ದೈಹಿಕ ದಕ್ಷತಾ ಪರೀಕ್ಷೆ, ವೈದ್ಯಕೀಯ ತಪಾಸಣೆ, ಸೇವಾ ದಾಖಲೆಗಳ ಪರಿಶೀಲನೆ ಮತ್ತು ಸೇನೆಯ ಅಗತ್ಯತೆಗಳ ಆಧಾರದಲ್ಲಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 4 ರಿಂದ 6 ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. ಅವಧಿಯಲ್ಲಿ ಅಗ್ನಿವೀರ್‌ಗಳು ಮದುವೆಯಾಗಬಾರದು ಎಂಬುದು ಸೇನೆಯ ಸ್ಪಷ್ಟ ಸೂಚನೆಯಾಗಿದೆ. 2026ರ ಜೂನ್ ಹಾಗೂ ಜುಲೈನಲ್ಲಿ ಒಟ್ಟು 20 ಪೂರ್ಣಗೊಳಿಸಿ ಕಾಯಂ ಸೈನಿಕರಾಗಲು ಸಾವಿರ ಮಂದಿ ಅಗ್ನಿವೀರರು ತರಬೇತಿ ಅರ್ಜಿ ಸಲ್ಲಿಸಲು ಅರ್ಹತೆ ಗಿಟ್ಟಿಸುತ್ತಾರೆ. ಒಟ್ಟಾರೆ ಅಗ್ನಿವೀರರ ಪೈಕಿ ಶೇ.25ರಷ್ಟು ಮಂದಿಯನ್ನು ಮಾತ್ರವೇ ಕಾಯಂ ಯೋಧರಾಗಿ ಮಾಡಿಕೊಳ್ಳಲಾಗುವುದು. ಯೋಜನೆಯನ್ನು ಕೇಂದ್ರ 2022ರಲ್ಲಿ ಆರಂಭಿಸಿತ್ತು.